October 5, 2024

ಚಿಕ್ಕಮಗಳೂರು ಜಿಲ್ಲೆಗೆ ಪರೋಕ್ಷವಾಗಿ ಒಂದು ಸಂಪುಟ ದರ್ಜೆ ಸಚಿವ ಸ್ಥಾನ ಲಭ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೂಲದ ಡಾ. ಆರತಿ ಕೃಷ್ಣ ಅವರನ್ನು ರಾಜ್ಯದ ಅನಿವಾಸಿ ಭಾರತೀಯ ಕೋಶ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.

ಅಖಿಲ ಭಾರತ ಕಾಂಗ್ರೇಸ್ ಸಮಿತಿ(ಎಐಸಿಸಿ) ಕಾರ್ಯದರ್ಶಿಯಾಗಿರುವ  ಡಾ. ಆರತಿ ಕೃಷ್ಣ ಇದೀಗ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಅನಿವಾಸಿ ಭಾರತೀಯ ಕೋಶ(ಎನ್.ಆರ್.ಐ. ಫೋರಂ)ದ ಉಪಾಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಅಧೀನ ಕಾರ್ಯದರ್ಶಿ ಟಿ.ವಿ. ಸುನಂದಮ್ಮ ಆದೇಶ ಹೊರಡಿಸಿದ್ದಾರೆ.

ಅನಿವಾಸಿ ಭಾರತೀಯ ಸಂಘಟನೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಡಾ. ಆರತಿ ಕೃಷ್ಣ ಪ್ರಸ್ತುತ  ಎಐಸಿಸಿ ಅನಿವಾಸಿ ಭಾರತೀಯ ವಿಭಾಗದ ಉಸ್ತುವಾರಿ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ

ಡಾ. ಆರತಿ ಕೃಷ್ಣ ಅವರು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದವರು. ಅವರ ತಂದೆ ಬೇಗಾನೆ ರಾಮಯ್ಯ ಶೃಂಗೇರಿ ಕ್ಷೇತ್ರದ ಶಾಸಕರಾಗಿದ್ದರು. ರಾಜ್ಯದಲ್ಲಿ ಗ್ರಾಮೀಣ ಅಭಿವೃದ್ಧಿ ಖಾತೆ ಸಚಿವರಾಗಿದ್ದರು.

ರಾಜಕೀಯ ಶಾಸ್ತ್ರದಲ್ಲಿ ಮತ್ತು ಅಮೇರಿಕಾದ ಜಾರ್ಜ್ ಮ್ಯಾಸನ್ ವಿಶ್ವವಿದ್ಯಾಲಯದಿಂದ ಇಂಟರ್ ನ್ಯಾಷನಲ್ ಕಾಮರ್ಸ್ ಮತ್ತು ಪಬ್ಲಿಕ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಾ. ಆರತಿ ಕೃಷ್ಣ ಅವರು ತಮ್ಮ ತಂದೆಯಂತೆಯೇ ಕಾಂಗ್ರೇಸ್ ಪಕ್ಷದ ಮೂಲಕ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡು ಸಕ್ರಿಯರಾಗಿದ್ದಾರೆ.

ಅಮೇರಿಕಾದಲ್ಲಿ ಉದ್ದಿಮೆದಾರರಾಗಿದ್ದ ಕೃಷ್ಣ ಅವರನ್ನು ವಿವಾಹವಾದ ಆರತಿ ಅವರು ಮುಂದೆ ತಮ್ಮ ಪ್ರತಿಭೆ ಮತ್ತು ಜ್ಞಾನದಿಂದ ಅನಿವಾಸಿ ಭಾರತೀಯ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾರೆ.

ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಅನಿವಾಸಿ ಭಾರತೀಯ ವಿಭಾಗದ ಪ್ರಥಮ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಅಮೇರಿಕಾದ ವಾಸಿಂಗ್ಟನ್ ಡಿಸಿ ಭಾರತೀಯ ರಾಯಭಾರಿ ಕಛೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ, ಅನಿವಾಸಿ ಭಾರತೀಯ ಸಚಿವಾಲಯದ ಇಂಡಿಯನ್ ಡೆವಲಪ್ ಮೆಂಟ್ ಫೌಂಡೇಷನ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಆರತಿ ಕೃಷ್ಣ ಅನಿವಾಸಿ ಭಾರತೀಯರನ್ನು ಒಗ್ಗೂಡಿಸಿ ದೇಶದ ಅಭಿವೃದ್ಧಿಗೆ ಅವರ ಸಹಭಾಗಿತ್ವ ನೀಡುವುದಕ್ಕೆ ಪ್ರಮುಖ ಸೇತುವಾಗಿ ಕೆಲಸ ಮಾಡುತ್ತಿದ್ದಾರೆ.

ಕೃಷ್ಣ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಡಾ. ಆರತಿ ಕೃಷ್ಣ ಅವರು ಉತ್ತಮ ಸಂವಹನ ಕೌಶಲ್ಯ, ಬಹುಭಾಷ ಜ್ಞಾನ ಹೊಂದಿದ್ದಾರೆ. ಇದೀಗ ಸಂಪುಟ ದರ್ಜೆ ಸ್ಥಾನಮಾನ ಗಳಿಸಿದ್ದಾರೆ. ಇವರಿಗೆ ದೊರಕಿರುವ ನೂತನ ಜವಾಬ್ದಾರಿಯಿಂದ ರಾಜ್ಯದ ಮತ್ತು ಜಿಲ್ಲೆಯ ಜನರಿಗೆ ಅನುಕೂಲವಾಗುವ ಕಾರ್ಯಗಳು ಸಾಗಲಿ ಎಂದು ಶುಭ ಹಾರೈಸೋಣ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ