October 5, 2024

ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಕಾರ್ಯಕರ್ತರು ಭಗತ್ ಸಿಂಗ್ ಸ್ಮರಣೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಕೆಳಗೂರು ಸುತ್ತಮುತ್ತ ಸ್ವಚ್ಚತಾ ಕಾರ್ಯಕ್ರಮ ನಡೆಸಿದರು.

ಮೂಲೆಮನೆ, ಸಂಪ್ಲಿ, ಕೆಳಗೂರು ರಸ್ತೆಯ ಎಡ ಬಲ ಉದ್ದಗಲಕ್ಕೂ ಹರಡಿದ ಗಿಡಗಂಟಿಗಳನ್ನು ಕಡಿದು ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರ್ಲ್ಸ್ ಎಸ್ಟೇಟ್ ವ್ಯವಸ್ಥಾಪಕರಾದ ವಿಜಯ್ ಕುಮಾರ್ ದೇಶದ ಯುವಜನತೆ ಇಂತಹ ಕಾರ್ಯಕ್ರಮಗಳನ್ನು ನಡೆಸಿ ತನ್ನೂರಿನ ಬಗ್ಗೆ ಕಾಳಜಿ ಹೊಂದಿ ಸ್ವಚ್ಛತೆ ಕಾಪಾಡಿದರೆ ಆ ಗ್ರಾಮಗಳು ತನ್ನಿಂದ ತಾನೇ ಅಭಿವೃದ್ಧಿ ಹೊಂದುತ್ತವೆ ಗಾಂಧೀಜಿಯ ಸ್ವಚ್ಚ ಭಾರತ , ಗ್ರಾಮ ಸ್ವರಾಜ್ಯ ಪರಿಕಲ್ಪನೆ ಅರ್ಥೈಸಿಕೊಂಡು ಮುನ್ನಡೆದರೆ ಎಲ್ಲ ರೀತಿಯ ಬದಲಾವಣೆ ಗ್ರಾಮ ಮಟ್ಟದಿಂದಲು ಸಾದ್ಯವಿದೆ ಅದನ್ನು ಕೆಳಗೂರು- ಸಂಪ್ಲಿಯ ,ಯುವಜನತೆ ಕಾಯಕದ ಮೂಲಕ ಸಾಧ್ಯವಾಗುತ್ತಿರುವುದು ಸಂತೋಷದ ವಿಚಾರ ಇದು ನಿರಂತರ ಮುಂದುವರೆಯಲಿ ಎಂದರು ಮುಖ್ಯ ಅತಿಥಿ ಆಟೋ ರಮೇಶ್ ಜಾವಳಿ ಮಾತನಾಡಿ AIYF ಸಂಘಟನೆಯ ಗೆಳೆಯರ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಸ್ವಚ್ಛತಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಮೂಡಿಗೆರೆ ತಾಲ್ಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ಎ. ಐ. ವೈ. ಎಫ್ ಸಂಘಟನೆ ಸ್ವಾತಂತ್ರ್ಯ ನಂತರ ಭಾರತದಲ್ಲಿ ಯುವಜನತೆಗೆ ಉದ್ಯೋಗ, ರಾಷ್ಟ್ರ ಪ್ರೇಮ,ಕ್ರೀಡೆ ಸಾಮಾಜಿಕ,ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು ಅದರಲ್ಲಿ ಉದ್ಯೋಗಕ್ಕಾಗಿ ಭಗತ್ ಸಿಂಗ್ ಎಂಪ್ಲಾಯಿಮೆಂಟ್ ಗ್ಯಾರಂಟಿ ಆಕ್ಟ್ ಜಾರಿಗೆ ತರಲು ಸತತ ಹೋರಾಟ ನಡೆಸುತ್ತಿದೆ ಇವತ್ತು ಕಾಲ್ಪನಿಕ ದೇಶ ಭಕ್ತಿ ಮೆರೆಯುತ್ತಿದೆ. ಭಾರತ್ ಮಾತಾಕಿ ಜೈ ಎಂದ ತಕ್ಷಣ ಮಹಾನ್ ದೇಶ ಪ್ರೇಮಿ ಎನಿಸುತ್ತಾರೆ ಆದರೆ ಯುವಜನತೆ ಈ ರೀತಿ ತನ್ನೂರಿನ ಸಮಸ್ಯೆಗೆ ತಾವೇ ಅರಿತು ಅದನ್ನು ತಮ್ಮ ಸ್ವ ಇಚ್ಛೆಯಿಂದ ಸ್ಪಂದಿಸಿ ಬಗೆಹರಿಸಿಕೊಂಡು ಮುನ್ನಡೆದರೆ ಅದೇ ನಿಜವಾದ ದೇಶಭಕ್ತಿ ಈ ದೇಶದ ಸಾರ್ವಜನಿಕ ಆಸ್ತಿ ,ರಸ್ತೆ,ಸರ್ಕಾರಿ ಕಟ್ಟಡ,ಸೇತುವೆ,ಎಲ್ಲವನ್ನೂ ನನ್ನದು ಎಂಬ ಭಾವನೆ ಜನರಲ್ಲಿ ಬರಬೇಕು ಅದನ್ನು ಎ. ಐ. ವೈ. ಎಫ್ ಸಂಘಟನೆ ತನ್ನ ಕಾರ್ಯಕರ್ತರಿಗೆ ಕಲಿಸುತ್ತದೆ ಹಾಗಾಗಿ ನಿಮ್ಮೆಲ್ಲರ ಸಂಪತ್ತಿನ ಬಗ್ಗೆ ನಿಮ್ಮ ಕಾಳಜಿ ಮುಂದುವರೆಯಲಿ ಎಂದರು

ಎ. ಐ. ವೈ. ಎಫ್ ನ ಕೆಳಗೂರು ಶಾಖೆಯ ಅಧ್ಯಕ್ಷ ರಾಜೇಶ್ ಕಾರ್ಯದರ್ಶಿ ಸ್ವಾತಿಕ್, ಪ್ರಜ್ವಲ್, ಉಮೇಶ್, ಸುರೇಶ್ ,ಸಂದೀಪ್, ವಿಜೇತ್, ಸಂತೋಷ್, ಅಮರ್ , ಚಂದ್ರು, ಸುದೀಪ್ ಇತರರು ನೇತೃತ್ವ ವಹಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ