October 5, 2024

ನಿವೇಶನ ರಹಿತ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಷ್ಟ್ ಪಕ್ಷದಿಂದ ಸೂರಿಗಾಗಿ ಸಮರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಗಬ್ಗಲ್ ಟಾಟಾ ಎಸ್ಟೇಟ್ ನಿಂದ ನೂರಾರು ನಿವೇಶನ ರಹಿತರು ಮೆರವಣಿಗೆ ತೆರಳಿ ಕೂವೆ ಗ್ರಾಮ ಪಂಚಾಯತಿ ಮುಂದೆ ಧರಣಿ ನಡೆಸಿದರು.

ನಾವು ಈಗಾಗಲೇ ಕೂವೆ ಗ್ರಾಮ ಪಂಚಾಯತಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 15 ವರ್ಷ ಕಳೆದರೂ ನಿವೇಶನ ನೀಡದೆ ಇರುವುದರಿಂದ ಕೂವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ಇದೀಗ ಸರ್ಕಾರಿ ಭೂಮಿ  ಅಕ್ರಮ ಭೂ ಮಂಜೂರಾತಿ ಮಾಡಿರುವ ಭೂಮಿ ಮತ್ತು ಅಧಿಕಾರಿಗಳ ಬೇನಾಮಿ ಆಸ್ತಿ ಈ ಗ್ರಾಮ ಪಂಚಾಯತಿಯಲ್ಲಿ ನೂರಾರು ಎಕರೆ ಲಭ್ಯವಿದ್ದು ಇದನ್ನು ಬಿಡಿಸಿ ನಿವೇಶನ ರಹಿತರಿಗೆ, ಊರಿನ ಅಭಿವೃದ್ಧಿಗಾಗಿ , ಸ್ಮಶಾನ, ಆಟದ ಮೈದಾನ ,ಅಂಬೇಡ್ಕರ್ ಭವನ ಇತರೆ ಊರಿನ ಅಭಿವೃದ್ಧಿಗಾಗಿ ಮೀಸಲಿಡ ಬೇಕೆಂದು ಒತ್ತಾಯಿಸಿದರು.

ಸಭೆಯನ್ನು  ಉದ್ದೇಶಿಸಿ ಮಾತನಾಡಿದ ಭಾರತ ಕಮ್ಯೂನಿಸ್ಟ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ; ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂವೆ ಗ್ರಾಮದ ಸ.ನಂ : 256, 164, 275, 271, 68, ಕಲ್ಮನೆ ಗ್ರಾಮದ 51, 46, 49,  ಕೆ ತಳಗೂರು 49 ಹಾದಿಓಣಿ 56, 22, 21 ಇಲ್ಲಿ ಸರ್ಕಾರಿ ಜಮೀನಿದ್ದರು ನಿವೇಶನ ರಹಿತರಿಗೆ ನಿವೇಶನ ಕೊಡಲು ಪಂಚಾಯಿತಿಗೆ ಸಾಧ್ಯವಾಗಿಲ್ಲ ಆದರೆ ಈ ಎಲ್ಲ ಸರ್ವೆ ನಂಬರ್ ನಲ್ಲಿ  ಅಕ್ರಮ ಭೂ ಮಂಜೂರಾತಿ ಮಾಡಲು ಮಾತ್ರ ಅಧಿಕಾರಿಗಳಿಗೆ ಸಾಧ್ಯವಾಗಿದೆ ಇದೇ ಗ್ರಾಮ ಪಂಚಾಯಿತಿ ಯಲ್ಲಿ ಅಕ್ರಮ ಮಂಜೂರಾತಿಯಲ್ಲಿ ಭಾಗಿಯಾಗಿರುವ ಅಧಿಕಾರಿಯ ಬೇನಾಮಿ ಆಸ್ತಿ ಇದ್ದು ಅದನ್ನು   ತೆರವು ಪಡಿಸಿ ಸ್ಥಳೀಯ ನಿವೇಶನ ರಹಿತರು ಹಾಗೂ ಊರಿನ ಅಭಿವೃದ್ಧಿಗಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ನಮ್ಮ ಬೇಡಿಕೆಗೆ ಸ್ಪಂದಿಸುವ ಮೂಲಕ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಸುಂದರ್ ಬಾಳೂರು, ಮಂಜು, ರವಿ, ಲೋಕೇಶ್, ಮಲ್ಲೇಶ್, ಸಿಗಮಣಿ, ರೇಣುಕಾ, ಲಕ್ಷ್ಮೀ, ಅನಿಲ್,ಬಂಗಾರಪ್ಪ,ಅಕ್ಷತ್, ಚಂದ್ರು , ಅನಿಲ್ ಕುಮಾರ್ ,ನಾರಾಯಣ, ಮಂಜುಳಾ, ಪ್ರೇಮ ಸೀನಾ, ಪುಷ್ಪ ಇತರರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ