October 5, 2024

2036 ಓಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ತನ್ನ ಹಕ್ಕು ಮಂಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಕ್ರೀಡಾ ಉತ್ಸವವಾದ ಓಲಿಂಪಿಕ್ಸ್ ಕೂಟವನ್ನು ಭಾರತದಲ್ಲಿ ಆಯೋಜಿಸುವ ಪ್ರಯತ್ನವನ್ನು ಭಾರತ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಓಲಿಂಪಿಕ್ಸ್ ಸಮಿತಿಯ 141ನೇ ಅಧಿವೇಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2036ರ ಓಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 2036ರ ಓಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಮುಂದಾಗುವ ನಿರ್ಧಾರ ಅಚಲ. ಓಲಿಂಪಿಕ್ಸ್ ಕ್ರೀಡೆಗಳ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದೆ. ಇದು 140 ಕೋಟಿ ಭಾರತೀಯರ ಹಲವು ವರ್ಷಗಳ ಕನಸು ಮತ್ತು ಬಯಕೆ ಎಂದು ಹೇಳಿದರು.

“ಈ ಕನಸನ್ನು ನಿಮ್ಮ ಸಹಭಾಗಿತ್ವ ಮತ್ತು ಸಹಕಾರದಲ್ಲಿ ಇದನ್ನು ನನಸುಗೊಳಿಸಲು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ಭಾರತ ಅಂತರಾಷ್ಟ್ರೀಯ ಓಲಿಂಪಿಕ್ಸ್ ಕೌನ್ಸಿಲ್ (ಐಓಸಿ) ನ ಸಹಕಾರ ದೊರಕುತ್ತದೆ ಎಂಬ ವಿಶ್ವಾಸವಿದೆ” ಎಂದರು.

ಭಾರತದಲ್ಲಿ ಕ್ರೀಡೆಯ ಸಂಪ್ರದಾಯ ಸಿಂಧೂ ಕಣಿವೆ ನಾಗರೀಕತೆಯಷ್ಟು ಹಳೆಯದು ಎಂದ ಅವರು, ಭಾರತೀಯರು ಕ್ರೀಡಾಪ್ರೇಮಿಗಳು ಮಾತ್ರವಲ್ಲ, ಅದು ಅವರ ಜೀವ. ದೇಶ ಕೂಡಾ 2029ರ ಯುವ ಓಲಿಂಪಿಕ್ಸ್ ನ ಆತಿಥ್ಯಕ್ಕೂ ಉತ್ಸುಕವಾಗಿದೆ” ಎಂದು ಸ್ಪಷ್ಟಪಡಿಸಿದರು.

ಭಾರತಕ್ಕೆ ಜಾಗತಿಕ ಕೂಟವನ್ನು ಆಯೋಜಿಸಲು ಅಗತ್ಯವಾದ ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಅಗತ್ಯ ಸಂಘಟನಾ ಸಾಮರ್ಥ್ಯ ಇದೆ. ಜಿ20 ಶೃಂಗ ಮತ್ತು ಅಧ್ಯಕ್ಷತೆಯನ್ನು ಉದಾಹರಿಸಿದ ಅವರು 60ಕ್ಕೂ ಹೆಚ್ಚು ನಗರಗಳಲ್ಲಿ ಈ ಸಂಬಂಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದು ಪ್ರತಿ ವಲಯದಲ್ಲೂ ಭಾರತದ ಸಂಘಟನಾ ಸಂಘಟನಾ ಸಾಮರ್ಥ್ಯಕ್ಕೆ ಉದಾಹರಣೆ ಎಂದು ಬಣ್ಣಿಸಿದರು.

ಮುಂಬರುವ 2024 ರ ಓಲಿಂಪಿಕ್ಸ್ ಪ್ರಾನ್ಸ್ ನ ಪ್ಯಾರೀಸ್ ನಗರದಲ್ಲಿ, 2028 ರಲ್ಲಿ ಅಮೇರಿಕಾದ ಲಾಸ್ ಎಂಜಲೀಸ್, 2032 ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರಗಳಲ್ಲಿ ಓಲಿಂಪಿಕ್ ಕ್ರೀಡೆಗಳು ನಿಗದಿಯಾಗಿವೆ.

2036 ರ ಓಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ತನ್ನ ಪ್ರಯತ್ನ ಮುಂದುವರಿಸಿರುವಂತೆಯೇ ಪೋಲೆಂಡ್ ಮತ್ತು ಇಂಡೋನೇಷಿಯಾ ದೇಶಗಳು ಸಹ ತಮ್ಮ ಹಕ್ಕು ಮಂಡಿಸಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ