October 5, 2024

ಪರಿಸರದ ಕಾಳಜಿ ಮತ್ತು ರಕ್ಷಣೆ ಮಾಡುವ ಮಲೆನಾಡಿನ ಭಾಷೆ ಸಂಸ್ಕೃತಿ, ಪ್ರಕೃತಿ ಬಿಂಬಿಸುವ ಕೌಟುಂಬಿಕ ಕಥಾ ಹಂದರ ಇರುವ ಜಲಪಾತ ಎಂಬ ಚಲನಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ.

ನಮ್ಮ ಚಿಕ್ಕಮಗಳೂರು ಜಿಲ್ಲೆಯ ಕಲಾವಿದರು, ನಿರ್ದೇಶಕರು ಸೇರಿ ನಿರ್ಮಿಸಿರುವ ಸಿನಿಮಾ ಸಿನಿಪ್ರಿಯರ ಮನಗೆಲ್ಲುವ ಭರವಸೆ ಮೂಡಿಗೆರೆ

ಶೃಂಗೇರಿಯ ರಮೇಶ್ ಬೇಗಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದ ಬಗ್ಗೆ ರಮೇಶ್ ಅವರೇ ವಿವರಗಳನ್ನ ನೀಡಿದ್ದಾರೆ.

ಈ ಸಿನಿಮಾವು ಒಂದು ಸಾಮಾಜಿಕ ಕಾಳಜಿಯ ಎಳೆಯನ್ನು ಇಟ್ಟುಕೊಂಡು ನಿರ್ಮಾಣ ಮಾಡಿರುವಂತಹುದು, ಬದಲಾದ ಬದುಕಿನಲ್ಲಿ ಪ್ರಕೃತಿ ಮೇಲೆ ಆದಂತಹ ಹಾನಿಯ ಬಗ್ಗೆಯೂ ಚಿತ್ರಿಸಲಾಗಿದೆ ಪರಿಸರ ಕಾಳಜಿಯ ಸಾಮಾಜಿಕ ಕಳಕಳಿಯ ಚಲನಚಿತ್ರ ಇದಾಗಿದ್ದು ಮನರಂಜನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.

ಒಂದು ಚಲನಚಿತ್ರ ಪ್ರೇಕ್ಷಕರನ್ನು 2 ಗಂಟೆಯಲ್ಲಿ ಹೇಗೆ ರಂಜಿಸಬಹುದು ಎಂಬ ಬಗ್ಗೆ ಏನೆಲ್ಲಾ ಬೇಕಾಗುತ್ತದೆ ಎಂಬುದನ್ನು ಮನಗಂಡು ಈ ಚಿತ್ರದಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲಾಗಿದೆ ಪ್ರಮುಖವಾಗಿ ಮಲೆನಾಡಿನ ಭಾಷೆಯನ್ನು ಬಳಸಿಕೊಂಡಿರುವುದು ವಿಶೇಷವಾಗಿದೆ ಎಂದಿದ್ದಾರೆ.

ಪದವಿಪೂರ್ವ ಖ್ಯಾತಿಯ ನಟ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟ್ಟಿಸಿದ್ದು ಶೃಂಗೇರಿಯ ರಂಗ ಪ್ರತಿಭೆ ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿಯ  ಭಾಗದವರೇ ಹೆಚ್ಚು ನಟಿಸಿದ್ದು, ಈ ರಂಗ ಕಲಾವಿದರು ಅವರದೇ ಆದ ಧ್ವ್ವನಿ ನೀಡಿರುವುದು ಭಾಷೆಯ ತೊಡಕು ನಿವಾರಣೆಗೆ ಸಹಕಾರಿಯಾಗಿದೆ ಎಂದು ವಿವರಿಸಿದರು.

ಇದೊಂದು ಮಲೆನಾಡು ಭಾಷೆಯನ್ನು ಒಳಗೊಂಡ ಪ್ರಥಮ ಚಲನಚಿತ್ರ ಎಂಬ ಬಹಳ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ ಚಿಕ್ಕಮಗಳೂರು ಜಿಲ್ಲೆಯವರಾದ ಚಿತ್ರದ ತಾಂತ್ರಿಕ ವರ್ಗ ಶಶಿರ ಶೃಂಗೇರಿ ಛಾಯ ಗ್ರಹಣ, ಅವಿನಾಶ್ ಸಂಕಲನ, ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ, ಮಧುರ ವನಿತ ವೆಂಕಟೇಶ್ ಇವರ ಸಾಹಿತ್ಯವನ್ನು ಚಿತ್ರ ಒಳಗೊಂಡಿದೆ.

ಪರಿಸರ ಗೀತೆಯೊಂದನ್ನು ಚಿತ್ರಕ್ಕೆ ಅಳವಡಿಸಿದ್ದು ಅದನ್ನು ನಾಡಿನ ಪ್ರಸಿದ್ದ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ ಈ ಚಿತ್ರದಲ್ಲಿ 3 ಹಾಡುಗಳನ್ನು ಪರಿಸರಕ್ಕೆ ಸಂಬಂಧಿಸಿದಂತೆ ರಚಿಸಲಾಗಿದೆ ಎಂದರು.

ರವೀಂದ್ರ ತುಂಬರಮನೆ ನಿರ್ಮಾಪಕರಾಗಿದ್ದು ಚಿಕ್ಕಮಗಳೂರಿನ ಕಲಾವಿದೆ ರೇಖಾ ಪ್ರೇಂ ಕುಮಾರ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ನಟಿ ನಾಗಶ್ರೀ ಬೇಗಾರ್, ಬಿ .ಎಲ್ ರವಿಕುಮಾರ್ ತೋರಣಗದ್ದೆ ಎ.ಎಸ್ ನಯನ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇಂದು ರಾಜ್ಯದಾದ್ಯಂತ 22 ಚಿತ್ರಮಂದಿರಗಳಲ್ಲಿ ಜಲಪಾತ ಚಲನಚಿತ್ರ ತೆರೆಕಂಡಿದೆ. ಚಿಕ್ಕಮಗಳೂರು ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಪ್ರತಿದಿನ ಸಂಜೆ 5-30ಕ್ಕೆ ಒಂದು ಪ್ರದರ್ಶನ ಇರುತ್ತದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ