October 5, 2024

ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಕ್ಷಿಣಾ ಆಪ್ರಿಕಾ ಮಹತ್ವದ ದಾಖಲೆಯೊಂದನ್ನು ನಿರ್ಮಿಸಿದೆ.

ದೆಹಲಿಯಲ್ಲಿ ಇಂದು ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಹಗಲು ರಾತ್ರಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ ನಿಗದಿತ 50 ಓವರ್ ಗಳಲ್ಲಿ 428 ರನ್ ಕಲೆಹಾಕುವ ಮೂಲಕ ವಿಶಿಷ್ಠ ದಾಖಲೆ ನಿರ್ಮಿಸಿದೆ.

ಇದು ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಸರ್ವಾಧಿಕ ರನ್ ಆಗಿದೆ. ಇದಕ್ಕಿಂತ ಮುಂಚೆ 2015ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ತಂಡ ಅಪ್ಘಾನ್ ವಿರುದ್ಧ ಗಳಿಸಿದ್ದ 417 ರನ್ ಇದುವರೆಗಿನ  ದಾಖಲೆಯಾಗಿತ್ತು.

ಈ ದಾಖಲೆಯನ್ನು ದಕ್ಷಿಣಾ ಆಪ್ರಿಕಾ ಪುಡಿಗಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ದಕ್ಷಿಣಾ ಆಪ್ರಿಕಾ ಆರಂಭದಲ್ಲಿಯೇ ನಾಯಕ ಬವುಮಾ ಅವರ ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಯಾದ ಕ್ವಿಂಟನ್ ಡಿಕಾಕ್ ಮತ್ತು ವ್ಯಾನ್ ಡೇರ್ ದುಸನ್ ಅವರ ಜೊತೆಯಾಟದಿಂದ ಚೇತರಿಸಿಕೊಂಡು ದೊಡ್ಡ ಮೊತ್ತದತ್ತ ದಾಪುಗಾಲಿಕ್ಕಿತು.

ಮತ್ತೊಂದು ವಿಶೇಷವೆಂದರೆ ಈ ಪಂದ್ಯದಲ್ಲಿ ಮೂವರು ಆಟಗಾರರು ಶತಕ ಸಿಡಿಸಿದರು. ಕ್ವಿಂಟಾನ್ ಡಿಕಾಕ್ (100) ವ್ಯಾನ್ ಡೇರ್ ದಸುನ (108) ಮತ್ತು ಮಾಕ್ರಂ (106) ಶತಕಗಳ ನೆರವಿನಿಂದ ದಕ್ಷಿಣಾ ಆಪ್ರಿಕಾ 428 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಏಕದಿನ ವಿಶ್ವಕಪ್ ಪಂದ್ಯಾವಳಿಯ ಒಂದೇ ಇನ್ನಿಂಗ್ಸ್ ನಲ್ಲಿ ಮೂರು ಶತಕಗಳು ಗಳಿಸಿದ್ದು ಇದೇ ಮೊದಲ ಎಂಬ ದಾಖಲೆಗೂ ಪಾತ್ರವಾಯಿತು.

ಈ ಹಿಂದೆ ಏಕದಿನ ಕ್ರಿಕೆಟ್ ನಲ್ಲಿ ಮೂರು ಬಾರಿ ಇಂತಹ ಅಪರೂಪದ ಸಾಧನೆ ಮಾಡಲಾಗಿತ್ತು. ಅದರಲ್ಲಿ ಎರಡು ಬಾರಿ ದಕ್ಷಿಣ ಆಪ್ರಿಕಾ ತಂಡವೇ ಈ ಸಾಧನೆ ಮಾಡಿತ್ತು. 2015 ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಪ್ರಿಕಾ ತಂಡದ ಮೂವರು ಆಟಗಾರರು ಶತಕ ಸಿಡಿಸಿದ್ದರು. ಹಾಗೆಯೆ 2022ರಲ್ಲಿ ನೆದರ್ ಲ್ಯಾಂಡ್ ತಂಡದ ವಿರುದ್ಧ ಇಂಗ್ಲೇಂಡ್ ತಂಡದ ಮೂವರು ಅಟಗಾರರು ಶತಕ ಸಿಡಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ