October 5, 2024

ಕಡೂರು ಪಟ್ಟಣದ ಎಪಿಎಂಸಿ ಸೇರಿದ ಜಾಗದಲ್ಲಿ ಸುತ್ತಮುತ್ತಲಿನ ಜನರು ಕಸ ಹಾಕುತ್ತಿದ್ದು ಕಸದ ಪಕ್ಕದಲ್ಲಿಯೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇದೆ. ಬೇಸಿಗೆ ಕಾಲದಲ್ಲಿ ಟಿಸಿ ಕೆಳಗಿನ ಕಸ ಒಣಗಿ ಟಿಸಿಯಿಂದ ಬೆಂಕಿ ಕಿಡಿ ತೆಗುಲಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿರುತ್ತದೆ. ಹಾಗೇನಾದರೂ ಆದರೆ ದೊಡ್ಡ ಅನಾಹುತ ಸಂಭವಿಸುತ್ತದೆ.

ಅಷ್ಟೇ ಅಲ್ಲದೆ ಈ ಕಸವನ್ನು ಪುರಸಭೆಯವರು ಬೇರೆ ಕಡೆ ಸಾಗಿಸಲು ಸಹ ವ್ಯವಸ್ಥೆ ಮಾಡುತ್ತಿಲ್ಲ.  ಆ ಕಸದಿಂದ ಡೆಂಗ್ಯೂ ಮಲೇರಿಯಾ ಇನ್ನು ಇತ್ಯಾದಿ ಕಾಯಿಲೆಗಳು ಹರಡುವ ಸಾಧ್ಯತೆ ಇದ್ದು ನಾಗರಿಕರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ  ಟಿಸಿಗೆ ಶಾರ್ಟ್ ಸರ್ಕ್ಯೂಟ್ ಆಗಿ ಸುತ್ತಮುತ್ತಲಿನ ಮನೆಯ ಎಲೆಕ್ಟ್ರಾನಿಕ್ ವಸ್ತುಗಳು ಫ್ರಿಡ್ಜ್ ವಾಟರ್ ಪ್ಯೂರಿಫೈಯರ್ ಇನ್ನು ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ.

ಈ ಬಗ್ಗೆ ಇಂಡಿಯನ್ ಹ್ಯೂಮನ್ ರೈಟ್ಸ್ ಕೌನ್ಸಿಲ್ ಕಡೂರು ತಾಲ್ಲೂಕು ಅಧ್ಯಕ್ಷ ಕೆ.ಹೆಚ್. ಹರ್ಷ ಅವರು ಪುರಸಭೆಗೆ ಪತ್ರ ಬರೆದು ಕೂಡಲೇ ಟಿ.ಸಿ. ಬಳಿ ರಾಶಿಯಾಗಿರುವ ಕಸವನ್ನು ಬೇರೆಡೆಗೆ ಸಾಗಿಸಿ ಸ್ವಚ್ಚಗೊಳಿಸಬೇಕು. ಎ.ಪಿ.ಎಂ.ಸಿ. ಜಾಗದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಬೇಕು. ಹಿರಿಯರಿಗೆ ವಾಕ್ ಮಾಡಲು ಮತ್ತು ಮಕ್ಕಳಿಗೆ ಆಟವಾಡಲು ಪಾರ್ಕ್ ನಿರ್ಮಿಸಿಕೊಡಬೇಕು ಎಂದು  ಆಗ್ರಹಿಸಿದ್ದಾರೆ.

ಟಿ ಸಿ ಕೆಲಸಕ್ಕೆ ಬರುವ ಲೈನ್ ಮ್ಯಾನ್ ಗಳು ಮೂಗು ಮುಚ್ಚಿಕೊಂಡು ಕೆಲಸ ಮಾಡುವಂತಾಗಿದೆ ಟಿ ಸಿ ಬೆಂಕಿ ಬಿದ್ದಾಗ ಫೈರ್ ಇಂಜಿನ್ ರವರು ಟಿಸಿಗೆ ಹತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಬರುವುದಿಲ್ಲ ಎಂದು ಹೇಳಿದ್ದಾರೆ

ಒಂದು ವೇಳೆ ಇದರ ಬಗ್ಗೆ ಪುರಸಭೆ ಮುತುವರ್ಜಿ ವಹಿಸದಿದ್ದರೆ. ಸಾರ್ವಜನಿಕರ ಜೊತೆ ಸೇರಿ ಈ ಕಸವನ್ನು ಪುರಸಭೆ ಮುಂದೆ ತಂದು ಸುರಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ