October 5, 2024

ಬೆಂಗಳೂರು ನಗರ ವಿಶ್ವ ಕಾಫಿ ಸಮ್ಮೇಳನಕ್ಕೆ ಸಜ್ಜಾಗಿದ್ದು, ಇದೇ ಸೆಪ್ಟಂಬರ್ 25ರಿಂದ 28 ರವರೆಗೆ ವಿಶ್ವ ಕಾಫಿ ಸಮ್ಮೇಳನ ನೆರವೇರಲಿದೆ.  ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಸಮ್ಮೇಳನ ನಡೆಯಲಿದೆ.

ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಬಾಳೂರು ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದ್ದು, ಕಾಫಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

ಇದೇ ಪ್ರಥಮ ಬಾರಿಗೆ ವಿಶ್ವ ಕಾಫಿ ಸಮ್ಮೇಳನವು ಭಾರತದಲ್ಲಿ ಸಮಾವೇಶಗೊಳ್ಳುತ್ತಿರುವುದು ವಿಶೇಷವಾಗಿದೆ. ಅದರಲ್ಲು ಮುಖ್ಯವಾಗಿ ನಮ್ಮ ರಾಜ್ಯದಲ್ಲಿ ವಿಶ್ವ ಕಾಫಿ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ವಿಶ್ವದ 80ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಸಮ್ಮೇಳನದಲ್ಲಿ ವಿಶ್ವ ಕಾಫಿ ಉದ್ದಿಮೆಯ ಪ್ರಮುಖ ಉದ್ದಿಮೆದಾರರು, ರಫ್ತುದಾರರು ಭಾಗವಹಿಸುತ್ತಿದ್ದು ವಿಶ್ವದ ಕಾಫಿ ಉದ್ದಿಮೆಗೆ ಸಂಬಂಧಿಸಿದ ಪ್ರಮುಖ ನಿರ್ಣಯಗಳು, ಮುಂದಿನ ದಿನಗಳಲ್ಲಿ ಕಾಫಿ ಬೆಳೆ ಮತ್ತು ಉದ್ದಿಮೆಯ ಬಗ್ಗೆ ಸಮಗ್ರ ಮುನ್ನೋಟಕ್ಕೆ ಈ ಸಮ್ಮೇಳನ ಸಾಕ್ಷಿಯಾಗಲಿದೆ.

ಸಮ್ಮೇಳನದಲ್ಲಿ ಕಾಫಿ ಉದ್ದಿಮೆಗೆ ಸಂಬಂಧಿಸಿದ ಪ್ರದರ್ಶನ ಮಳಿಗೆಗಳು ಇರುತ್ತವೆ. ಸೆಮಿನಾರ್ ಗಳು, ಚರ್ಚೆಗಳು, ವಿಚಾರವಿನಿಮಯಗಳು ಇರುತ್ತವೆ. ಕಾಫಿ ಉದ್ದಿಮೆದಾರರೊಂದಿಗೆ ಮುಖಾಮುಖಿ ಕಾರ್ಯಕ್ರಮವಿರುತ್ತದೆ.

ಸಮ್ಮೇಳನದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಕಾಫಿ ಬೆಳೆಗಾರರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ವಿಶೇಷ ರಿಯಾಯಿತಿ ನೀಡಲಾಗಿದೆ. ಸಮ್ಮೇಳನದಲ್ಲಿ ನಾಲ್ಕು ದಿನವೂ ಭಾಗವಹಿಸಲು ಪ್ರವೇಶ ದರ 6 ಸಾವಿರ ಇದೆ. ಬೆಳೆಗಾರರಿಗೆ 3500-00 ರೂಗಳ ಮಾತ್ರ ಆಗಿರುತ್ತದೆ. ಸೆಪ್ಟಂಬರ್ 28 ರಂದು ಬೆಳೆಗಾರರಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮ ಇರುತ್ತದೆ. ಆ ಒಂದು ದಿನ ಮಾತ್ರ ಭಾಗವಹಿಸಲು ಇಚ್ಚಿಸುವವರು 1800 ರೂ  ಪ್ರವೇಶ ಧನ ನೀಡಿ ಭಾಗವಹಿಸಬಹುದಾಗಿದೆ.

ಸಮ್ಮೇಳನದಲ್ಲಿ ಭಾಗವಹಿಸುವವರು ಆನ್ ಲೈನ್ ಮೂಲಕ ನೋಂದಣಿ ಮಾಡಿಸಬೇಕಾಗಿದೆ. ಬೆಳೆಗಾರರ ಸಂಘಟನೆ ಮೂಲಕ ಆಸಕ್ತ ಬೆಳೆಗಾರರಿಗೆ ಕಾಫಿ ಮಂಡಳಿ ಉಚಿತ ಪಾಸ್ ನೀಡಿದೆ. ಆ ಪಾಸ್ ಗಳನ್ನು ಆಸಕ್ತ ರೈತರಿಗೆ ವಿತರಣೆ ಮಾಡಲಾಗಿದೆ ಎಂದಿದ್ದಾರೆ.

ಸಮ್ಮೇಳನದಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗೆ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷರು ಬಿ.ಆರ್. ಬಾಲಕೃಷ್ಣ (ಮೊ : 94480 07091 ) ಅವರನ್ನು ಸಂಪರ್ಕಿಸಬಹುದಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ