October 5, 2024

ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕಾಡುತ್ತಿದ್ದು ಕೂಡಲೇ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಕೆ.ಬಿ ಲಕ್ಷ್ಮಣಗೌಡ, ಗ್ರಾಮದಲ್ಲಿ ಬಿಎಸ್ಎನ್ಎಲ್ ಸಂಸ್ಥೆಯ ಮೊಬೈಲ್ ಟವರಿದ್ದರೂ ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ. ವಿದ್ಯುತ್ ಸ್ಥಗಿತವಾದರೆ ನೆಟ್ವರ್ಕ್ ಸಂಪರ್ಕ ಕೂಡ ಕಡಿತವಾಗುತ್ತದೆ. ಐದಾರೂ ವರ್ಷಗಳಿಂದ ಸಮಸ್ಯೆಯಿದ್ದರೂ ಪರಿಹಾರವಾಗುತ್ತಿಲ್ಲ. ಗ್ರಾಮದಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕಾಡಾನೆ ಕಾರ್ಯಚರಣೆ ಶಿಬಿರವಿದ್ದರೂ ನೆಟ್ವರ್ಕ್ ಇಲ್ಲದೇ ಮಾಹಿತಿ ತಿಳಿಸಲಾಗುತ್ತಿಲ್ಲ’ ಎಂದರು. ಗ್ರಾಮದಲ್ಲಿ ಉಂಟಾಗಿರುವ ನೆಟ್ವರ್ಕ್ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಗ್ರಾಮಸ್ಥರು ಒಕ್ಕೊರಳಿನಿಂದ ಆಗ್ರಹಿಸಿದರು.

ತಾಲ್ಲೂಕಿನ ಹುಲ್ಲೇಮನೆ ಗ್ರಾಮದಲ್ಲಿ ಹಾದಿ ಹೋಗಿರುವ ವಿದ್ಯುತ್ ಮಾರ್ಗವು ಅತ್ಯಂತ ಕೆಳಗೆ ಜೋತು ಬಿದ್ದಿದ್ದು ಜೀವ ಹಾನಿಯಾಗುವ ಅಪಾಯವಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದಾರು ಪ್ರದೇಶಗಳಲ್ಲಿ ವಿದ್ಯುತ್ ತಂತಿ ಕೈಗೆಟುಕುವ ಮಟ್ಟದಲ್ಲಿದ್ದು, ಕೂಡಲೇ ಮಧ್ಯ ಭಾಗದಲ್ಲಿ ಕಂಬಗಳನ್ನು ಅಳವಡಿಸಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ ವಿಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯನ್ನು ತಡೆಯಲು ಐಬಿಎಕ್ಸ್ ಬೇಲಿಯ ಪ್ರಮಾಣವನ್ನು ಹೆಚ್ಚಿಸಬೇಕು. ಹೊಸ ಐಬಿಎಕ್ಸ್ ಬೇಲಿ ನಿರ್ಮಿಸಲು ಯೋಜನೆ ರೂಪಿಸಬೇಕು. ಕಾಡಾನೆ ಹಾವಳಿಯಿಂದ ಬೆಳೆಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು’ ಎಂದು ಇಲಾಖೆಯನ್ನು ಒತ್ತಾಯಿಸಲಾಯಿತು.

‘ಒಳಚರಂಡಿ ಹಾಗೂ ಕುಡಿಯುವ ನೀರು ಪೂರೈಕೆ ಇಲಾಖೆಯಿಂದ ಜೆಜೆಎಂ ಕಾಮಗಾರಿ ಪೂರ್ಣವಾಗದೇ ಹಸ್ತಾಂತರಕ್ಕೆ ದಾಖಲೆಗಳನ್ನು ನೀಡುತ್ತಿದ್ದು, ಪ್ರತಿ ಮನೆಗೂ ನೀರು ಸಂಪರ್ಕವಾಗದೇ ಹಸ್ತಾಂತರ ಪಡೆಯಬಾರದು. ಎ. ಕುಂದೂರು ಹಾಗೂ ಹುಲ್ಲೇಮನೆಯಲ್ಲಿ ಜೆಜೆಎಂ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು. ಪ್ರತಿ ಮನೆಗೂ ನೀರಿನ ಸಂಪರ್ಕವಾಗಿರುವ ಬಗ್ಗೆ ದೃಢೀಕರಿಸಿಕೊಂಡು ಹಸ್ತಾಂತರ ಪಡೆಯಬೇಕು’ ಎಂದು ಗ್ರಾಮಸ್ಥ ನಿಖಿಲ್ ಒತ್ತಾಯಿಸಿದರು.

ಸಭೆಯಲ್ಲಿ ಕಳೆದ ಬಾರಿ ಶೇ 100 ಫಲಿತಾಂಶ ಪಡೆದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಅಭಿನಂದಿಸಲಾಯಿತು. ನೋಡೆಲ್ ಅಧಿಕಾರಿ ಡಾ. ಮನು, ಅಧ್ಯಕ್ಷ ಡಿ.ಬಿ ವಿಜೇಂದ್ರ ಮಾತನಾಡಿದರು. ಉಪಾಧ್ಯಕ್ಷೆ ರತಿನವೀನ್, ಸದಸ್ಯರಾದ ಜಯಂತಿ, ಸುನೀತ, ಪಿಡಿಓ ವಾಸುದೇವ, ಉಮೇಶ್, ಪ್ರವೀಣ್, ಮೋಹನ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ