October 5, 2024

ಸಮಯ ಮತ್ತು ಸಮಾಧಾನ ಇದು ಮಾನವ ಧರ್ಮದ ಮೂಲ ಮಂತ್ರ. ಮಾನವ ಜನ್ಮ ಇರುವುದು ಪರೋಪಕಾರಕ್ಕಾಗಿ ಎಂದು ಅರಿತು ಬದುಕು ನಡೆಸಬೇಕು ಎಂದು ಬೇರುಗುಂಡಿ ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿ ಹೇಳಿದರು.

ಅವರು ಸೋಮವಾರ ಮೂಡಿಗೆರೆ ಪಟ್ಟಣದ ಮಹಾಂತಿ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಮಾನವ ಎಷ್ಟೇ ಒಳ್ಳಯ ಕಾರ್ಯ ಮಾಡಿದ್ದರೂ ಸಮಾಜಕ್ಕೆ ಮಾರಕವಾಗಿರುವ ಒಂದೇ ಒಂದು ಕೆಟ್ಟ ಕೆಲಸ ಮಾಡಿದರೆ ಒಳ್ಳೆಯ ಕೆಲವೆಲ್ಲಾ ನಶಿಸಿ ಹೋಗುತ್ತದೆ. ಪ್ರತಿಯೊಬ್ಬರೂ ಎಲ್ಲಾ ಸಮಾಜದ ಏಳಿಗೆಗಗೆ ಶ್ರಮಿಸುವ ಮೂಲಕ ಧರ್ಮದ ಕಾರ್ಯವನ್ನು ಮಾಡಲು ಮುಂದಾಗಬೇಕು. ಸಂಘಟನೆ ಮೂಲಕ ಸಮಾಜವನ್ನು ಒಗ್ಗೂಡಿಸಬೇಕು. ಪರರ ಬಗ್ಗೆ ಸದಾ ಕಾಳಜಿ ತೋರಿದರೆ ಭಗವಂತನ ಅನುಗ್ರಹ ಲಭಿಸುತ್ತದೆ ಎಂದು ಹೇಳಿದರು.

ನೂತನ ಅಧ್ಯಕ್ಷ ಬಿ.ಎಸ್.ಓಂಕಾರ್ ಮಾತನಾಡಿ, ಅಧಿಕಾರದಿಂದ ನಮ್ಮ ಸಮಾಜದ ಮೇಲಿನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಇಡೀ ಸಮಾಜವನ್ನು ಒಟ್ಟುಗೂಡಿಸಿಕೊಂಡು ತಾಲೂಕಿನಲ್ಲಿ ಲಿಂಗಾಯತ ಸಮುದಾಯ ಪ್ರಭಲವಾದ ಸಮುದಾಯವೆಂದು ಸಮಾಜಕ್ಕೆ ಪರಿಚಯಿಸಬೇಕಾಗಿದೆ. ಯಾವುದೇ ಸಂಘಟನೆಗಳು ಪ್ರಭಲವಾಗಿ ಬೆಳೆಯಲು ಹಿರಿಯರೊಂದಿಗೆ ಯುವ ಸಮೂಹದ ಪಾಲ್ಗೊಳ್ಳುವಿಗೆ ಅಗತ್ಯವಾಗಿದೆ. ಯುವ ಸಮೂಹ ನಮ್ಮ ಸಂಘಟನೆಯಲ್ಲಿರುವುದರಿಂದ ಸಂಘಕ್ಕೆ ಇನ್ನಷ್ಟು ಬಲಶಾಲಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಾದ ತಿಲಕ್ ಪಟೇಲ್, ಸನ್ನಿಧಿ, ಹೇಮಲತಾ, ಆಕಾಶ್, ಸಮಾಜದ ಹಿರಿಯರಾದ ರಾಜಶೇಖರ್ ಉಗ್ಗೇಹಳ್ಳಿ, ಮಹೇಶ್ ಮೇಗಲಪೇಟೆ, ಬಸವರಾಜ್, ಶೋಭಾ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ಕೊಡಗು ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವನಮಾಲ ಮೃತ್ಯುಂಜಯ, ಜಿಲ್ಲಾ ವೀರಶೈವ ಸಮಾಜದ ಉಪಾಧ್ಯಕ್ಷೆ ಶಾಲಿನಿ ಅನಿಲ್, ಜಿಲ್ಲಾ ನಿರ್ದೇಶಕರಾದ ಪೂರ್ಣೇಶ್ ಮೂರ್ತಿ, ಡಾ.ಮೋಹನ್ ರಾಜಣ್ಣ, ಸುಶೀಲಾ, ಆದರ್ಶ ಕನ್ನೆಹಳ್ಳಿ, ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷೆ ರಾಜಲಕ್ಷಿö್ಮ ಕಾಂತರಾಜ್, ಗೌರವಾಧ್ಯಕ್ಷ ಬಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್, ಯುವ ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್ ಮತ್ತಿತರರಿದ್ದರು

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ