October 5, 2024

ಹೊಯ್ಸಳರ ಕೊನೆಯ ದೊರೆ‌ ಮುಮ್ಮಡಿ ವೀರ ಬಲ್ಲಾಳ ದೊರೆಯ ಪುಣ್ಯ ಸ್ಮರಣೆಯನ್ನು  ಶ್ರೀ ಕ್ಷೇತ್ರ ಅಂಗಡಿ ಗ್ರಾಮಸ್ಥರು ಆಚರಿಸಿದರು.

ಹೊಯ್ಸಳರ ಮೂಲ ಸ್ಥಾನವಾದ ಸೊಸೆವೂರು/ ಶಶಕಪುರ, ಇಂದಿನ ಅಂಗಡಿ (ಮೂಡಿಗೆರೆ) ತಾಲ್ಲೂಕು ಇಲ್ಲಿ ಶುಕ್ರವಾರ ಹೊಯ್ಸಳರ ಅಪ್ರತಿಮ ವೀರ ಮೂರನೇ ವೀರ ಬಲ್ಲಾಳನ ಪುಣ್ಯ ಸಂಸ್ಮರಣೆಯನ್ನು  ಆಚರಿಸಲಾಯಿತು.

ವೀರಬಲ್ಲಾಳನ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡುವ ಮೂಲಕ ಮಹಾನ್ ವೀರನಿಗೆ ಗ್ರಾಮಸ್ಥರು ಗೌರವ ಅರ್ಪಿಸಿದರು.

ಅಂಗಡಿ ಗ್ರಾಮದಲ್ಲಿ ಹುಟ್ಟುಪಡೆದ ಹೊಯ್ಸಳ ಸಾಮ್ರಾಜ್ಯದ ಕೊನೆಯ ದೊರೆ ಮುಮ್ಮಡಿ ವೀರಬಲ್ಲಾಳ 1292 ರಿಂದ 1342 ರ ವರೆಗೆ ಸುಮಾರು 52 ವರ್ಷಗಳ ಸುದೀರ್ಘ ಆಡಳಿತ ನಡೆಸಿ ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು.

ಅವರ ಸ್ಮರಣೆಯನ್ನು ಅಂಗಡಿ ಗ್ರಾಮಸ್ಥರು ಮಾಡಿಕೊಂಡಿರುವುದು ವಿಶೇಷವಾಗಿತ್ತು.

ಗ್ರಾಮದ ಋತ್ವಿಕ್ ಗೌಡ, ಅಭಿಷೇಕ್ ಗೌಡ, ಚಂದ್ರಶೇಖರ್ , ದೀಕ್ಷಿತ್, ರವಿ ಮತ್ತು ಅಂಗಡಿ ಗ್ರಾಮದ ಗ್ರಾಮಸ್ಥರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ