October 5, 2024

ಮದುವೆಯೊಂದರ ಪ್ರಯುಕ್ತ ವಿಡಿಯೋ ಚಿತ್ರಿಕರಣ ಮಾಡುತ್ತಿದ್ದ ಡ್ರೋನ್ ಕ್ಯಾಮರದಲ್ಲಿ ಎರಡು ಚಿರತೆಗಳು ಸೆರೆಯಾಗಿವೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಶಿವಗಿರಿ ಬೆಟ್ಟದ ಸಮೀಪ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಕಡೂರು ತಾಲೂಕಿನ ಯಗಟಿ ಸಮೀಪದ ಶಿವಗಂಗಾಗಿರಿ ಬೆಟ್ಟದ ದೇವಸ್ಥಾನದಲ್ಲಿ ಏರ್ಪಡಿಸಿದ್ದ ವಿವಾಹ ಮಹೋತ್ಸವದ ಸಂದರ್ಭದಲ್ಲಿ ಡ್ರೋನ್ ಕ್ಯಾಮರದಿಂದ ಮದುವೆಯ ವಿಡಿಯೋ ಚಿತ್ರಿಕರಣ ನಡೆಸುತ್ತಿದ್ದಾಗ ಪರದೆಯಲ್ಲಿ ಕಂಡು ಬಂದ ಚಿರತೆಗಳನ್ನು ಕಂಡು ಕ್ಯಾಮರಮನ್ ಮತ್ತು ಮದುವೆಗೆ ಆಗಮಿಸಿದವರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಡ್ರೋನ್ ಕ್ಯಾಮರಾದ ಶಬ್ದ ಕೇಳಿ ಚಿರತೆಗಳು ಗಾಬರಿಯಾಗಿ ಕಲ್ಲಿನ ಬೆಟ್ಟದ ಮೇಲೆ ಅತ್ತಿಂದಿತ್ತ ತಿರುಗಲು ಪ್ರಾರಂಭಿಸಿವೆ.

ವಿಡಿಯೋದಲ್ಲಿ ಬೆಟ್ಟದ ಮೇಲೆ ಒಟ್ಟು ಮೂರು ಚಿರತೆಗಳು ಇದ್ದು ಅವುಗಳಲ್ಲಿ ಎರಡು ಚಿರತೆಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿವೆ

ಇದೀಗ ಗಿರಿಯ ತುದಿಯಲ್ಲಿ ಚಿರತೆ ಇರುವುದನ್ನ ಕಂಡು ಸ್ಥಳೀಯ ಗ್ರಾಮಸ್ಥಳರು ಆತಂಕಗೊಂಡಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ರೈತರ ಹೊಲಗಳಿದ್ದು, ರೈತರು ಹೊಲಗಳಿಗೆ ತೆರಳಲು ಭಯಪಡುವಂತಾಗಿದೆ.

ತಕ್ಷಣ ಅರಣ್ಯ ಇಲಾಖೆ ಚಿರತೆಗಳನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿದ್ದಾರೆ. ಆತಂಕಗೊಂಡ ಗ್ರಾಮಸ್ಥರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ