October 5, 2024

ಇತ್ತೀಚೆಗೆ ಮೂಡಿಗೆರೆ ಸಮೀಪದ ಬಿಳಗುಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವೊಂದು ಜರುಗಿತು. ಇಲ್ಲಿ ಪುಸ್ತಕ ವಿತರಣೆ ಮಾಡಲು ಬಂದಿದ್ದವರು ಬೆಂಗಳೂರಿನ ಮಾರುತಿ ಮೆಡಿಕಲ್ಸ್ ಮಾಲೀಕರು.

ಎತ್ತಣ ಬೆಂಗಳೂರು, ಎತ್ತಣ ಬಿಳಗುಳ ಎಂದು ಇಲ್ಲಿನ ಶಿಕ್ಷಕರನ್ನು ವಿಚಾರಿಸಿದಾಗ ನಿಜಕ್ಕೂ ನಿಬ್ಬೆರಗಾಯಿತು. ಇದು ಒಂದು ಮಾಮೂಲಿ ಪುಸ್ತಕ ವಿತರಣಾ ಕಾರ್ಯಕ್ರಮವಾಗಿರಲಿಲ್ಲ. ಇದರ ಹಿಂದೆ ದೊಡ್ಡ ಕತೆಯೇ ತೆರೆದುಕೊಂಡಿತು.

ಕಾರ್ಯಕ್ರಮದ ನಂತರ ಇಲ್ಲಿನ ಶಿಕ್ಷಕರಾದ ಮತ್ತು ಈ ಕಾರ್ಯಕ್ರಮದ ರೂವಾರಿಗಳಾದ ಪೂರ್ಣೇಶ್ ಮತ್ತು ಸುರೇಶ್ ಅವರು ಹೇಳಿದ ವಿಚಾರಗಳನ್ನು ಕೇಳುತ್ತಾ ಹೋದಾಗ ಮಾರುತಿ ಮೆಡಿಕಲ್ಸ್ ಮಾಲೀಕರ ಮಹತ್ಕಾರ್ಯಗಳ ಬಗ್ಗೆ ಎಳೆಎಳೆಯಾದ ಮಾಹಿತಿ ಸಿಕ್ಕಿತು.

ಹೌದು, ಬೆಂಗಳೂರಿನ ಮಾರುತಿ ಮೆಡಿಕಲ್ಸ್ ಎಂದರೆ ಅದು ನಮ್ಮ ರಾಜ್ಯದಲ್ಲಿಯೇ ಒಂದು ದೊಡ್ಡ ಮೆಡಿಕಲ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಸಿಗದ ಔಷಧಗಳು ಮಾರುತಿ ಮಡಿಕಲ್ಸ್ ಗೆ ಹೋದರೆ ಸಿಗುವುದು ಗ್ಯಾರಂಟಿ. ಅಷ್ಟರ ಮಟ್ಟಿಗೆ ಇದು ಪ್ರಸಿದ್ಧಿ ಪಡೆದಿದೆ.

ಇದರ ಮಾಲೀಕರಾದ ಶ್ರೀ ಮಹೇಂದ್ರ ಮುಣೋಟ್ ಜೈನ್ ಅವರ ದೃಷ್ಟಿವೈಶಾಲ್ಯ, ದಾನಶೂರ ಗುಣ, ಕನ್ನಡ ಪ್ರೇಮ, ಗೋಪ್ರೇಮ, ಸಮಾಜಸೇವೆ, ನಮ್ಮ ಸನಾತನ ಸಂಸ್ಕೃತಿಯ ಬಗೆಗಿನ ಅಭಿಮಾನ ಇವೆಲ್ಲಾವನ್ನು ಕೇಳಿದರೆ ಎಂತಹವರಿಗೂ ಆಶ್ಚರ್ಯವಾಗದಿರದು. ಇಂದಿನ ಕಾಲದಲ್ಲಿ ಇಂತಹವರು ಇದ್ದಾರ ? ಎಂಬ ಭಾವ ಮೂಡದಿದರು.

ರಾಜಸ್ಥಾನ ಮೂಲದ ಮಹೇಂದ್ರ ಮುಣೋಟ್ ಅವರು ವರ್ಷದಲ್ಲಿ ಸುಮಾರು 4 ಕೋಟಿಗೂ ಹೆಚ್ಚು ಹಣವನ್ನು ಸಮಾಜಸೇವೆಗೆ ಮೀಸಲಾಗಿರಿಸುತ್ತಾರೆ. ಕೆರೆಯ ನೀರಲು ಕೆರೆಗೆ ಚೆಲ್ಲಿ ಎನ್ನುವಂತೆ ತಮ್ಮ ಉದ್ಯಮದಿಂದ ಬಂದಂತಹ ಬಹುತೇಕ ಆದಾಯವನ್ನ ಇವರು ಸಮಾಜಕ್ಕಾಗಿ ವಿನಿಯೋಗಿಸುತ್ತಿದ್ದಾರೆ.

ಉಚಿತ ನೋಟ್ ಪುಸ್ತಕ ವಿರತಣೆ
ರಾಜ್ಯದಾದ್ಯಂತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಇವರ ಪ್ರಮುಖ ಸೇವಾ ಕಾರ್ಯವಾಗಿದೆ.

ನಮ್ಮ ಚಿಕ್ಕಮಗಳೂರು ಜಿಲ್ಲೆಯ ಆಯ್ದ ಸರ್ಕಾರಿ ಶಾಲೆಗಳಿಗೆ ಕಳೆದ ಐದಾರು ವರ್ಷಗಳಿಂದ ವರ್ಷಕ್ಕೆ ಸುಮಾರು 15 ಲಕ್ಷ ವೆಚ್ಚದಲ್ಲಿ ನೋಟ್ ಪುಸ್ತಕ ವಿತರಣೆ ಮಾಡುತ್ತಿದ್ದಾರೆ.

ಬಹುತೇಕ ಕಡೆಗೆ ತಾವೇ ಖುದ್ದಾಗಿ ಹೋಗಿ ಮಕ್ಕಳೊಂದಿಗೆ ಬೆರೆತು ಅವರಿಗೆ ಹಿತನುಡಿಗಳನ್ನು ಹೇಳಿ ನೋಟ್ ಪುಸ್ತಕ ವಿತರಣೆ ಮಾಡುತ್ತಾರೆ.

ರಕ್ತದಾನ ಶಿಬಿರಗಳು
ಮಹೇಂದ್ರ ಮುಣೋಟ್ ಅವರು ಬೆಂಗಳೂರಿನಲ್ಲಿ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಇವರ ಅಭಿಮಾನಿ ಬಳಗವೇ ಬೆಂಗಳೂರಿನಲ್ಲಿ ಮತ್ತು ರಾಜ್ಯದ ನಾನಾ ಭಾಗಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದುನಿಂತಿದೆ. ಇವರ ಸಮಾಜಸೇವೆಯನ್ನು ಕಂಡು ಅನೇಕ ಯುವಕ ಯುವತಿಯರು ಸ್ವಯಂಪ್ರೇರಿತರಾಗಿ ಇವರೊಂದಿಗೆ ಕೈಜೋಡಿಸಿ ತಾವೂ ಈ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ.

 

ಗೋವು ಎಂದರೆ ಪಂಚಪ್ರಾಣ
ಮಹೇಂದ್ರ ಮುಣೋಟ್ ಅವರಿಗೆ ಗೋವುಗಳೆಂದರೆ ಪಂಚಪ್ರಾಣ.
ಗೋವಿನ ಅಂಬಾ ಎನ್ನುವ ಧ್ವನಿ ಕೇಳಿದರೆ ಇವರ ಮನ ಕರಗುತ್ತದೆ. ರಾಜ್ಯದಲ್ಲಿ ನಾನಾ ಭಾಗಗಳ ಗೋಶಾಲೆಗಳಿಗೆ ಉಚಿತ ಮೇವು ವಿತರಣೆ ಸೇರಿದಂತೆ ಗೋವಿಗೆ ಸಂಬಂಧಿಸಿದ ಯಾವುದೇ ನೋವುಗಳಿಗೆ ಇವರು ತಕ್ಷಣಕ್ಕೆ ಸ್ಪಂದಿಸುತ್ತಾರೆ.

ಸನಾತನ ಸಂಸ್ಕೃತಿ, ಕನ್ನಡದ ಬಗ್ಗೆ ಅಪಾರ ಅಭಿಮಾನ
ಮಹೇಂದ್ರ ಮುಣೋಟ್ ಅವರಿಗೆ ನಮ್ಮ ಭಾರತೀಯ ಸನಾತನ ಸಂಸ್ಕೃತಿ  ಬಗ್ಗೆ ಹಾಗೆಯೇ ಕನ್ನಡ ನಾಡಿನ ಬಗ್ಗೆ ಅಪಾರವಾದ ಅಭಿಮಾನ. ಅವರ ಮೆಡಿಕಲ್ಸ್ ಒಳಗೆ ಹೋದರೆ ಅಲ್ಲಿ ಕೇವಲ ಔಷಧ ವ್ಯಾಪಾರ ಮಾತ್ರವಲ್ಲ ನಮ್ಮ ಭಾರತೀಯ ಸಂಸ್ಕೃತಿಯ ಅನಾವರಣವಾಗುತ್ತದೆ.

ಮೆಡಿಕಲ್ಸ್ ಗೋಡೆಗಳಲ್ಲಿ ನಮ್ಮ ರೈತರ, ಯೋಧರ, ಸ್ವಾತಂತ್ರ್ಯ ಹೋರಾಟಗಾರರ ದರ್ಶನ, ದೊಡ್ಡ ಟಿ.ವಿ. ಪರದೆಯಲ್ಲಿ ಕನ್ನಡ ನಾಡಿನ ಹುಟ್ಟು ಬೆಳವಣಿಗೆ, ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ವಿಶೇಷ ವ್ಯಕ್ತಿಗಳ ಜೀವನ ದರ್ಶನ, ಗೋವಿನ ಮಹತ್ವದ ಗುಣಗಾನ ಹೀಗೆ ಅಲ್ಲಿ ಒಂದು ಸಾಂಸ್ಕೃತಿಕ ದರ್ಶನ ರಾರಾಜಿಸುತ್ತದೆ.

ನಾಡಗೀತೆ ವಿಡೀಯೋ ಚಿತ್ರೀಕರಣ
ಮಹೇಂದ್ರ ಮುಣೋಟ್ ಅವರು ನಮ್ಮ ರಾಜ್ಯದ ನಾಡಗೀತೆಗೆ ವಿಶೇಷ ಮೆರುಗು ನೀಡಿದ್ದಾರೆ. ಕುವೆಂಪು ರಚಿತ ನಾಡಗೀತೆಯಿಂದ ಅತೀವ ಪ್ರಭಾವಿತರಾಗಿದ್ದು ಅದನ್ನು ಎಲ್ಲೆಲ್ಲೂ ಹೆಮ್ಮೆಯಿಂದ ಹೇಳುತ್ತಾರೆ.
ತಾವೇ ಸ್ವತಃ ಧ್ವಜಹಿಡಿದು ನಾಡಗೀತೆಯ ವಿಶಿಷ್ಟ ವಿಡಿಯೋಗಳನ್ನು ಚಿತ್ರೀಕರಣ ಮಾಡಿಸಿದ್ದಾರೆ.

ಹೀಗೆ ಮಹೇಂದ್ರ ಮುಣೋಟ್ ಅವರ ವಿಚಾರಗಳನ್ನು ತಿಳಿದು ಆಶ್ಚರ್ಯವಾಯಿತು. ಇಂತಹ ಅಪರೂಪದ ಬದುಕು ನಡೆಸುತ್ತಿರುವ ಅವರ ವ್ಯಕ್ತಿತ್ವ ಮಾದರಿಯಾದುದಾಗಿದೆ.

* ಪ್ರಸನ್ನ ಗೌಡಳ್ಳಿ

 

 

 

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ