October 5, 2024

ಆಗಸ್ಟ್ 27 ರಂದು ಭಾನುವಾರ ರಾತ್ರಿ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಪೊಲೀಸ್ ಠಾಣೆಯ ಕಂಚಿನಕಲ್ ದುರ್ಗದ ಸಮೀಪ ಜೂಜಾಟದಲ್ಲಿ ತೊಡಗಿದ್ದ 12 ಜನರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಚಿಕ್ಕಮಗಳೂರು ಸೆನ್ ಠಾಣೆಯ ಪೊಲೀಸರು ಬಂಧಿತರಿಂದ ಹಣ, ಕಾರು, ಮೊಬೈಲ್ ಸೇರಿದಂತೆ ವಿವಿಧ ಪರಿಕರಗಳನ್ನು ವಶಪಡಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ ಸ್ಥಳೀಯ ಕಾಡುಮಲ್ಲಿಗೆ ಎಸ್ಟೇಟ್ ಹೆಸರು ಪ್ರಸ್ತಾಪವಾಗಿತ್ತು. ಪೊಲೀಸ್ ಎಫ್.ಐ.ಆರ್. ನಲ್ಲಿ ಕಾಡುಮಲ್ಲಿಗೆ ಎಸ್ಟೇಟ್ ಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಎಂದು ನಮೂದಿಸಲಾಗಿತ್ತು. ಆದರೆ ಕೆಲ ಮಾಧ್ಯಮಗಳಲ್ಲಿ ಅದು ಕಾಡುಮಲ್ಲಿಗೆ ಎಸ್ಟೇಟ್ ಎಂದೇ ಪ್ರಸ್ತಾಪವಾಗಿದೆ.

ಇದು ತಪ್ಪು ಗ್ರಹಿಕೆಯಿಂದ ಆಗಿದ್ದು ಈ ಬಗ್ಗೆ ಎಸ್ಟೇಟ್ ನ ಮಾಲೀಕರು  ಒಟ್ಟಾರೆ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುತ್ತಾರೆ.

ನನ್ನ ಹೆಸರು ಮಧು R. ಗೌಡ ಕಾಡುಮಲ್ಲಿಗೆ ಎಸ್ಟೇಟ್. ನನ್ನ ತೋಟದ ಒಳಗೆ ತುಂಬಾ ದಿನಗಳಿಂದ ಇಸ್ಪೀಟ್ ಆಟ ಆಡಿಸುತ್ತಿದ್ದ, ಪೊಲೀಸ್ ದಾಳಿಯಲ್ಲಿ ಆತನನ್ನು ಬಂಧಿಸಿದರು,( ನಾನು ಆ ಸ್ಥಳದಲ್ಲಿ ಇಲ್ಲದೇ ಇದ್ದರೂ), FIR ನಲ್ಲಿ ಕಾಡುಮಲ್ಲಿಗೆ ಎಸ್ಟೇಟ್ಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟ ಅಂತ ಇದ್ದರೂ, ಮಾದ್ಯಮಗಳು ಒಂದು ಹೆಜ್ಜೆ ಮುಂದೆ ಹೋಗಿ ಮೇಲ್ಕಂಡ ರೀತಿಯಲ್ಲಿ ತಪ್ಪಾಗಿ ವರದಿ ಆಗಿರುವ ಬಗ್ಗೆ ಮಾಧ್ಯಮ ಸ್ನೇಹಿತರು, ಜಿಲ್ಲಾ ಪೊಲೀಸ್ ಇಲಾಖೆ, ನನ್ನ ಸ್ನೇಹಿತರು ಹಾಗೂ ಹಿತೈಷಿಗಳಿಗೆ ಈ ಬರವಣಿಗೆ ಮೂಲಕ ನೀಡುತ್ತಿರುವ ವಾಸ್ತವ ಸ್ಪಷ್ಟೀಕರಣ :-

ದಿನಾಂಕ 27-08-2023  ನನ್ನ ತಮ್ಮ ಮನು ತೀರಿ ಹೋಗಿ 3 ವರ್ಷಗಳು( ನನ್ನ ತಂದೆ ತೀರಿ ಕೊಂಡಿದ್ದು ಇದೇ ತಿಂಗಳು 09 ನೇ ತಾರೀಕು. ಮುಂದಿನ ಭಾನುವಾರ ಅವರ ತಿಂಗಳ ಕಾರ್ಯ) ನನ್ನ ಇಬ್ಬರು ಚಿಕ್ಕಪ್ಪಂದಿರ ಕುಟುಂಬದೊಂದಿಗೆ ಆ ದಿನದ ಕಾರ್ಯಕ್ಕೆ ತಯಾರಿಯಲ್ಲಿದ್ದೆ. ಮಧ್ಯಾಹ್ನ ನನ್ನ ಸ್ನೇಹಿತ ಒಬ್ಬ ಕರೆ ಮಾಡಿ ನನ್ನ ತೋಟದ ಪಕ್ಕದಲ್ಲಿ ಪಾಳು ಬಿದ್ದಿರುವ 40 ಎಕರೆ ತೋಟದಲ್ಲಿ 10-12 ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದಾಗಿ ತಿಳಿಸಿದ. ಯಾವುದೇ ಅಹಿತಕರ ಘಟನೆ ನಡೆಯದಂತೆ, ವರ್ಷಗಳ ಕಾಲ ನಾನು ಸಂಪಾದಿಸಿದ ಹೆಸರಿಗೆ ಧಕ್ಕೆ ತರದಂತೆ ಹೇಳಿದೆ.

ಸಂಜೆ 5 ಗಂಟೆ ಸುಮಾರಿಗೆ ನಾನು ತಿಥಿ ಕಾರ್ಯಕ್ಕೆ ಬೇಕಾದ ದಿನಸಿ ಸಾಮಾನುಗಳನ್ನು ಮತ್ತು ಮಾಂಸ ತರಲು ಆಲ್ದೂರು ಹೋದೆ. ನಾನು ಮನೆಗೆ ಬಂದಾಗ ಸುಮಾರು 7.15 ಅಗಿತ್ತು ರಾತ್ರಿ. ನನ್ನ ಚಿಕ್ಕಮ್ಮಂದಿರು ಅಡಿಗೆ ತಯಾರಿಯಲ್ಲಿ ಇದ್ದರು. ಬಂದು ನೋಡಿದಾಗ ನನ್ನ ಗಮನಕ್ಕೆ ಬಾರದೇ 4 ವಾಹನಗಳು ನನ್ನ ಮನೆಯ ಆವರಣದಲ್ಲಿ ಇದ್ದವು. ನನಗೆ ಗುರುತು ಇರದ ಕೆಲವು ವ್ಯಕ್ತಿಗಳು ನನ್ನ ಗೇಟ್  ಅಕ್ಕ ಪಕ್ಕದಲ್ಲಿ ಇದ್ದರು. ಮುಜುಗರ ಮತ್ತು ಸಿಡಿಮಿಡಿಗೊಂಡ ನಾನು ಅವರನ್ನು ಕರೆದು ಬೈದು ಎರಡು ವಾಹನಗಳನ್ನು ಗೇಟ್ನಿಂದ ಹೊರಗೆ ಹಾಕಿಸಿ, ಇನ್ನೆರಡು ವಾಹನ ಹೊರಗೆ ಹಾಕಿಸುವಷ್ಟರಲ್ಲಿ ಪೊಲೀಸ್ ಇಲಾಖೆ ದಾಳಿ ನಡೆಸಿತು. ನನ್ನ ಮನೆಯ ಆವರಣದಲ್ಲಿ ಇದ್ದ ಬೇರೆ ಬೇರೆ ಜಿಲ್ಲೆಯ ಪಾಸಿಂಗ್ ಹೊಂದಿದ್ದ ಆ ಎರಡು ವಾಹನಗಳು ಪೊಲೀಸ್ ಇಲಾಖೆಗೆ ನನ್ನ ಮೇಲೆ ಅನುಮಾನ ಬರಲು, ನನ್ನ ಹೆಸರನ್ನು FIR ನಲ್ಲಿ ಸೇರಿಸಲು ಕಾರಣವಾಯಿತು. ದಿಢೀರ್ ದಾಳಿ ಅರಿವಾದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ನಾನು ಪೊಲೀಸ್ನವರ ಮುಂದೆ ಬರಲು ಆಗಲಿಲ್ಲ. ಆ ಕ್ಷಣದಲ್ಲಿ ಇಲಾಖೆಯವರು ನನ್ನ ವಾಸ್ತವ ಪರಿಸ್ಥಿತಿ ತಿಳಿಯುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ನನ್ನ ಮನೆಯಲ್ಲಿ ನೆಡೆಯುತ್ತಿದ್ದ ಕಾರ್ಯದ ಬಗ್ಗೆ ತಿಳಿದ ಕೆಲ ಪೊಲೀಸರು ಹೆಂಗಸರಿದ್ದ ಮನೆಯ ಒಳಗೂ ಬಂದಿಲ್ಲ.. ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದು ಹೋದ ನಂತರ ರಾತ್ರಿ 10. 30 ರ ಮೇಲೆ ನಾನು ಮನೆಗೆ ಬಂದು ತಮ್ಮನ ಗಿಂಡಿಗೆ ಪೂಜೆ ಮಾಡಿದೆ. ( ನನ್ನ ಈ ಪರಿಸ್ಥಿತಿಗೆ ಕಾರಣ ಆದವರ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತೇನೆ.). ಗಿಂಡಿಗೆ ಎಡೆಗೆ ಇಡಲು ತಂದಿದ್ದ ಎರಡು ಕ್ವಾರ್ಟರ್ ಎಣ್ಣೆ, ತಮ್ಮ ಇದ್ದಾಗ ಕುಡಿಯುತ್ತಿದ್ದ ಬಿಯರ್, ಒಂದು ದೊಡ್ಡ ಟಾರ್ಚ್, ಶೆಡ್ನಲ್ಲಿದ್ದ ಬೈಕಿನ ಬ್ಯಾಗಿಂದ ಪೊಲೀಸರು ತೆಗೆದುಕೊಂಡು ಹೋಗಿದ್ದರು. ದೇವರನ್ನು ನಂಬುವ ಜೊತೆಗೆ, ನಾವು ಮಾಡುವ ಒಳ್ಳೆಯ ಕೆಲಸಗಳು ದೇವರ ರೂಪದಲ್ಲಿ ನಮ್ಮನ್ನು ಕಾಪಾಡುತ್ತದೆ ಎಂದು ನಂಬುವ ನಾನು ಆ ದಿನ ನೆಡೆದ ಘಟನೆ ಬಗ್ಗೆ ತಿಳಿಸಿದ್ದೇನೆ.

ಹಾಗೇ ಮುಂದುವರಿದು, ನಾನು ಇಂದಿಗೂ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ 692 ಕಾರ್ಡ್ ನಂಬರ್ನೊಂದಿಗೆ ಅಧಿಕೃತ ಸದಸ್ಯನಾಗಿದ್ದು. 10 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿ ಸ್ವಂತ ನಿರ್ದೇಶನದ ತಯಾರಿಯಲ್ಲಿ ಇದ್ದಾಗ( ಬೆಂಗಳೂರಿನಲ್ಲಿ ಪತ್ರಿಕಾ ಸುದ್ದಿಗೋಷ್ಠಿ ಕರೆದು ನನ್ನ ಚಿತ್ರ ಪ್ರಕಟಿಸಿದ್ದೆ ಕೂಡ)  ಕಾರಣಾಂತರಗಳಿಂದ ಕೆಲವು ವರ್ಷಗಳು ತೋಟಕ್ಕೆ ಬರಬೇಕಾಯಿತು. ನಂತರ ನನ್ನ ತಮ್ಮ ಅಪಘಾತದಲ್ಲಿ ತೀರಿಕೊಂಡ ಮೇಲೆ, ತೋಟ, ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು.

ನಾನು ಸಹ ದಿನ ಪತ್ರಿಕೆ ಒಂದರ ವರದಿಗಾರ. ಕೋವಿಡ್ ಸಮಯದಲ್ಲಿ ಬಿಡುವಿಲ್ಲದೆ ತಿರುಗಿ ನನ್ನ ಪತ್ರಿಕೆಗೆ ಅಧಿಕಾರಿಗಳ ಸಂದರ್ಶನ, ವರದಿ ಮಾಡಿದ್ದೇನೆ. ಮಾಧ್ಯಮ  ಸ್ನೇಹಿತರಿಗೆ ನನ್ನ ಮನವಿ ಏನೆಂದರೆ ಪ್ರಥಮ ತನಿಖಾ ವರದಿ ಪಡೆದು ವಸ್ತುನಿಷ್ಠ ವರದಿ ಮಾಡಿ. ಪತ್ರಿಕಾ ಧರ್ಮ ಕಾಪಾಡಿ🙏🙏🙏. ನಾನು ತಪ್ಪು ಮಾಡದೇ ಇರುವುದರಿಂದ ನನ್ನ ರಾಜಕೀಯ, ಅಧಿಕಾರಿ ವರ್ಗದ ಪ್ರಭಾವ ಬಳಸಿ ನಾನು ಆ ರಾತ್ರಿ ನನ್ನ ಹೆಸರು FIR ನಲ್ಲಿ ಬರದೇ ಇರುವಂತೆ ತಡೆಯಬಹುದಿತ್ತು. ಆದರೆ ತಿಥಿ ಕಾರ್ಯದ ಪ್ರಸ್ತುತ ಪರಿಸ್ಥಿತಿ ನೋಡಿ ನನ್ನ ಹೆಸರನ್ನು ಪೊಲೀಸರು FIR ನಲ್ಲಿ ಸೇರಿಸುವುದಿಲ್ಲ ಅಂದುಕೊಂಡೆ. ಅದಕ್ಕೆ ಇಷ್ಟು ಉದ್ದದ ಮಾಹಿತಿ.

ಅಷ್ಟಕ್ಕೂ ಪೊಲೀಸ್ ಇಲಾಖೆ ಹಾಗೂ ಮಾದ್ಯಮ ಮಿತ್ರರಿಗೆ ತಿಳಿಸುವುದೇನೆಂದರೆ. ನನಗೆ 25 ಎಕರೆ ಕಾಫಿ ತೋಟವಿದ್ದು, ನಾನು ನನ್ನ ತೋಟದ ಕಾರ್ಮಿಕರೊಂದಿಗೆ ಶ್ರಮ ಹಾಕಿ ದುಡಿಯುತ್ತೇನೆ. ನನಗೆ ಕೃಷಿ ಬಿಟ್ಟು ಯಾವುದೇ ಕೆಲಸ ಬರುವುದಿಲ್ಲ. ಹಾಗೇ ಕೃಷಿ ವರಮಾನ ಬಿಟ್ಟು ಯಾವುದೇ ಒಂದು ರೂಪಾಯಿ ಬೇರೆ ವರಮಾನ ಇರುವುದಿಲ್ಲ. ಇದರಲ್ಲೇ ನಾನು ನೆಮ್ಮದಿಯಿಂದ ಜೀವನ ಸಾಗಿಸುತ್ತ ಇದ್ದೇನೆ. ನನಗೇ ಇಲ್ಲಿಯವರೆಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ಹಾಗೂ ಅಪರಾಧ ಹಿನ್ನೆಲೆ ಇರುವುದಿಲ್ಲ. ಮುಂದೆಯೂ ಇರುವುದಿಲ್ಲ. FIR ನಲ್ಲಿರುವ ನನ್ನ ಮೇಲಿನ ಆರೋಪ ಕೇವಲ ಆರೋಪವೇ ಹೊರತು ಅದು ಸತ್ಯ ಆಗಲು ಎಂದಿಗೂ ಸಾಧ್ಯವಿಲ್ಲ.

ಇನ್ನೊಂದು ಸತ್ಯವಾದ ವಿಷಯ ಏನೆಂದರೆ ನನಗೆ ಇಸ್ಪೀಟ್ನಲ್ಲಿ ಮಕ್ಕಳು ಆಡುವ 3 ನಂಬರ್ ಎಲೆ ಜೋಡಿಸುವ ಆಟ ಬಿಟ್ಟು ಬೇರೆ ಯಾವುದೇ ಆಟ ಬರುವುದಿಲ್ಲ. ನಾನು ಇಸ್ಪೀಟ್ ಆಡುವ ಜಾಗದಲ್ಲಿ ನಿಲ್ಲುವುದೂ ಇಲ್ಲ ಆಡುವುದನ್ನು ನೋಡುವುದೂ ಇಲ್ಲ. ಅಲ್ಲದೇ ನನಗೆ ಯಾವುದೇ ರೀತಿಯ ಬೆಟ್ಟಿಂಗ್ ಅಭ್ಯಾಸ ಕೂಡ ಇಲ್ಲ. ಇರುವುದು ಒಂದೇ ಅಭ್ಯಾಸ. ಸನ್ಮಾರ್ಗದಲ್ಲಿ ದುಡಿದು ತಿನ್ನಬೇಕು. ಒಳ್ಳೆಯ ರೀತಿಯಲ್ಲಿ ಹೆಸರು ಮಾಡಬೇಕು. ಸಮಾಜದಲ್ಲಿ ಮಾದರಿ ಆಗಿ ಜೀವನ ನಡೆಸಬೇಕು ಅನ್ನೋದು. ನನ್ನ ಸುತ್ತಲ ಯುವ ಸಮೂಹಕ್ಕೆ ಯಾವಾಗಲೂ ಸಲಹೆ ನೀಡುತ್ತ ಇರುತ್ತೇನೆ ಸಮಾಜದಲ್ಲಿ ಒಳ್ಳೆಯ ರೀತಿ ಹೆಸರು ಮಾಡಿ ಮುಂದೆ ಬನ್ನಿ ಅಂತ. ನಾನು ಸದಾ ಸಜ್ಜನರ ಸಹವಾಸ ಮಾಡಲು ಬಯಸುತ್ತೇನೆ.

ನನ್ನ ಎಸ್ಟೇಟ್ ಒಳಗೆ ಈ ಹಿಂದೆಯೂ ಯಾವುದೇ ಕಾನೂನು ಬಾಹಿರ ಅಥವಾ ಅಪರಾಧ ಚಟುವಟಿಕೆಗಳಿಗೆ ಅವಕಾಶ ಕೊಟ್ಟಿಲ್ಲ, ಮುಂದೆ ಕೊಡುವುದೂ ಇಲ್ಲ. ಇಂದು ಪೊಲೀಸ್ ಇಲಾಖೆಗೆ ಸಂವಿಧಾನ ಹಾಗೂ ಸರ್ಕಾರ ಕೊಟ್ಟಿರುವ ಸವಲತ್ತುಗಳನ್ನು ಬಳಸಿ ನಾನು ಮೇಲೆ ಹೇಳಿರುವುದು ಸತ್ಯವಾ ಸುಳ್ಳಾ ಅಂತ ತಿಳಿಯುವುದು ಕಷ್ಟ ಆಗಲಾರದು. ಪೊಲೀಸ್ ಇಲಾಖೆ ಮತ್ತು ನನಗೆ ಬಹಳ ಹಿಂದಿನಿಂದಲೂ ಒಳ್ಳೆಯ ರೀತಿಯ ಸಂಪರ್ಕ ಇದೆ. ಅನೇಕ ನನ್ನ ಸ್ನೇಹಿತರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. PC, PSI, PI, ಹಾಗೂ ಅದಕ್ಕೂ ದೊಡ್ಡ ಮಟ್ಟದ ಅಧಿಕಾರಿಗಳೊಂದಿಗೆ. ವೈಯುಕ್ತಿಕವಾಗಿ ಒಳ್ಳೆಯ ಸಂಬಂಧವಿದೆ. ಹಾಗೇ ಸರ್ಕಾರದ ಅನೇಕ ಇಲಾಖೆ ಅಧಿಕಾರಿಗಳೊಂದಿಗೆ, ರಾಜಕೀಯ, ಸಮಾಜದ ಗಣ್ಯ ವ್ಯಕ್ತಿಗಳೊಂದಿಗೂ ಕೂಡ ಒಳ್ಳೆಯ ರೀತಿ ಸಂಬಂಧ ಇದೆ. ಆದರೆ ಅದನ್ನು ವೈಯಕ್ತಿಕವಾಗಿ, ಸಾರ್ವಜನಿಕವಾಗಿ ಎಂದೂ ದುರುಪಯೋಗ ಮಾಡಿಕೊಂಡಿಲ್ಲ.  ಅದರ ಒಂದು ಭಾಗವೇ FIR ನಲ್ಲಿ ನನ್ನ ಹೆಸರು ಬರುವ ಹಾಗಾಗಿದ್ದು.

ಕೊನೆಯದಾಗಿ ನಾನು ಇಲ್ಲಿ ಹೇಳುವುದೇನೆಂದರೆ. ಈ ಬರಹದ ಮೂಲಕ ನನ್ನ ಮೇಲೆ ಇದನ್ನು ಓದಿದ ಎಲ್ಲರಿಗೂ ಒಳ್ಳೆಯ ಅಭಿಪ್ರಾಯ ಬರಲಿ ಅನ್ನುವ ಉದ್ದೇಶ ಅಂತೂ ಖಂಡಿತಾ ಅಲ್ಲ. ಇರುವ ಸತ್ಯ ಹೊರಗೆ ಹೇಳಿದ ನೆಮ್ಮದಿ ಅಷ್ಟೇ. ನಾನು ಯಾವಾಗಲೂ ಗುರುತಿಸಿಕೊಳ್ಳಲು ಇಷ್ಟ ಪಡುವುದು ಕಾನೂನು ಬಾಹಿರ, ಅಪರಾಧ ಜಗತ್ತಿನಲ್ಲಿ ಅಲ್ಲ, ಬದಲಾಗಿ ಒಬ್ಬ ಯಶಸ್ವಿ ಮಾದರಿ ಕೃಷಿಕ ಆಗಿ ಮಾತ್ರ. ಇಷ್ಟೇ ನನ್ನ ಪ್ರಪಂಚ. ಮಾಡದ ತಪ್ಪಿಗೆ ಅವಮಾನ ಅನುಭವಿಸುವ ಶಕ್ತಿಯನ್ನು ಈ ಜೀವನ ಪಾಠ ಕಲಿಸಿದೆ.

ಕಾಡುಮಲ್ಲಿಗೆ ಎಸ್ಟೇಟ್ ಗೆ ಹೋಗುವ ಸಾರ್ವಜನಿಕ ರಸ್ತೆ ಎಂಬುದರ ಬದಲು ಕಾಡುಮಲ್ಲಿಗೆ ಎಸ್ಟೇಟ್ ಎಂದು ದರ್ಪಣ ನ್ಯೂಸ್ ವೆಬ್ ಪೋರ್ಟಲ್ ನಲ್ಲಿಯೂ ಪ್ರಸ್ತಾಪವಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ