October 5, 2024

ಚಿಕ್ಕಮಗಳೂರು ನಗರದ ಎರಡು ಹೋಟೆಲ್ ಗಳಲ್ಲಿ ಕುರಿ ಮಾಂಸದ ಬಿರಿಯಾನಿ ಎಂದು ಹೇಳಿಕೊಂಡು ದನದ ಮಾಂಸದ ಬಿರಿಯಾನಿ ಮಾಡಿ ಬಡಿಸುತ್ತಿದ್ದುದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ನಗರದ ಬೆಂಗಳೂರು ಹೋಟೆಲ್ ಮತ್ತು ಎವರೆಸ್ಟ್ ಹೋಟೆಲ್ ಗಳಲ್ಲಿ ದನದ ಮಾಂಸದ ಬಿರಿಯಾನಿ ಮಾಡಿ ಗ್ರಾಹಕರಿಗೆ ನೀಡುತ್ತಿದ್ದ ಆರೋಪದ ಮೇಲೆ ಎರಡು ಹೋಟೆಲ್ ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಕುರಿಮಾಂಸದ ಬಿರಿಯಾನಿ ಎಂದು ಹೇಳಿಕೊಂಡು ಗ್ರಾಹಕರಿಗೆ ಈ ಹೋಟೆಲ್ ಗಳಲ್ಲಿ ದನದ ಮಾಂಸದ ಬಿರಿಯಾನಿ ನೀಡುತ್ತಿದ್ದರು ಎನ್ನಲಾಗಿದೆ. ದಾಳಿವೇಳೆ ದನದ ಮಾಂಸದ ಬಿರಿಯಾನಿ ಮತ್ತು ದನದ ಮಾಂಸ  ವಶಪಡಿಸಿಕೊಂಡು  ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರನ್ನು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರು ಹೋಟೆಲ್ ಕ್ಯಾಷಿಯರ್ ಶಿವರಾಜು ಎಂದು ಗುರುತಿಸಲಾಗಿದೆ.

ನಗರದಲ್ಲಿ ಅನೇಕ ಹೋಟೆಲ್ ಗಳಲ್ಲಿ ಈ ರೀತಿಯ ಮೋಸ ಆಗುತ್ತಿದೆ ಎನ್ನಲಾಗಿದೆ. ಕೆ.ಜಿ. ಗೆ 700 ರೂ ಆಸುಪಾಸಿನಲ್ಲಿರುವ ಕುರಿಮಾಂಸದ ಬದಲು ಕಡಿಮೆ ಬೆಲೆಗೆ ಸಿಗುವ ದನದಮಾಂಸವನ್ನು ಬಳಸಿ ಖಾದ್ಯಗಳನ್ನು ತಯಾರಿಸುತ್ತಿದ್ದು, ಅದನ್ನು ಕುರಿಮಾಂಸದ ಖಾದ್ಯವೆಂದು ಗ್ರಾಹಕರಿಗೆ ನೀಡುತ್ತಿದ್ದಾರೆ. ಇದನ್ನು ಅರಿಯದ ಗ್ರಾಹಕರು ಕುರಿಮಾಂಸದ ಖಾದ್ಯ ಎಂದು ತಿಂದು ಹಣನೀಡಿ ಹೋಗುತ್ತಿದ್ದಾರೆ.

ಇದರಿಂದಾಗಿ ಜನರ ಧಾರ್ಮಿಕ ಭಾವನೆಗಳಿಗೂ ದಕ್ಕೆ ಉಂಟಾಗುತ್ತಿದೆ. ಕೋಮು ಸೌಹಾರ್ದತೆಯನ್ನು ಕದಡಿದಂತಾಗುತ್ತಿದೆ. ಕುರಿಮಾಂಸದ ಜೊತೆಗೆ ಗೋಮಾಂಸ ಬೆರಸಿ ಕೊಡುತ್ತಿರುವ ಪ್ರಕರಣಗಳು ಸಹ ನಡೆಯುತ್ತಿವೆ ಎನ್ನಲಾಗಿದೆ.

ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬರುವ ಪ್ರವಾಸಿಗರಿಂದ ಚಿಕ್ಕಮಗಳೂರು ನಗರದ ಕೆಲವು ಹೋಟೆಲ್ ಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತಿದೆ. ಆದರೆ ಕೆಲವು ಕಿಡಿಗೇಡಿಗಳು ಮಾಡುವ ಇಂತಹ ನೀಚ ಕೃತ್ಯದಿಂದ ಬೇರೆ ಹೋಟೆಗಳ ಮೇಲೂ ಜನ ಸಂಶಯಪಡುವ ಸ್ಥಿತಿ ನಿರ್ಮಾಣವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ