October 5, 2024

ಬ್ಯಾಂಕ್ ನವರು ಹೇಳಿ ಕರೆಮಾಡಿದ್ದ ವ್ಯಕ್ತಿಗೆ ಓ.ಟಿ.ಪಿ. ನಂಬರ್ ಹೇಳಿ ವ್ಯಕ್ತಿಯೊಬ್ಬರು ಮೂರೂವರೆ ಲಕ್ಷ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ಬೆಲ್ಟ್ ರಸ್ತೆಯ ನಿವಾಸಿ ಅನ್ವರ್ ಬಾಷ ಎಂಬುವವರು ಮೋಸಕ್ಕೊಳಗಾಗಿರುವ ವ್ಯಕ್ತಿ.

ಆಗಸ್ಟ್ 27 ರಂದು ಅನ್ವರ್ ಬಾಷ ಅವರ ಮೊಬೈಲ್ ಗೆ ಕರೆಮಾಡಿದ ವ್ಯಕ್ತಿ ಬ್ಯಾಂಕಿನಿಂದ ಮಾತನಾಡುತ್ತಿರುವುದು. ನಿಮ್ಮ ಬ್ಯಾಂಕ್ ಅಕೌಂಟ್ ಕೆ.ವೈ.ಸಿ. ಅಪ್ಡೇಟ್ ಮಾಡಬೇಕು. ನಿಮ್ಮ ಮೊಬೈಲ್ ಗೆ ಬಂದಿರುವ ಓಟಿಪಿ ಹೇಳಿ ಎಂದು ಕೇಳಿದ್ದಾನೆ. ಇದನ್ನು ನಿಜವೆಂದು ನಂಬಿದ ಅನ್ವರ್ ಒಟ್ಟು 8 ಬಾರಿ ತಮ್ಮ ಮೊಬೈಲ್ ಗೆ ಬಂದ ಓ.ಟಿ.ಪಿ. ನಂಬರ್ ಹೇಳಿದ್ದಾರೆ.

ಜೊತೆಗೆ ಅವರ ಮಗಳ ಅಕೌಂಟ್ ಅಪ್ಡೇಟ್ ಮಾಡಬೇಕು ಎಂದು ಹೇಳಿ ಅದರ ಓಟಿಪಿಗಳನ್ನು ಹೇಳಿದ್ದಾರೆ. ಇದನ್ನು ಬಳಸಿಕೊಂಡು ವಂಚಕರು ಅನ್ವರ್ ಬಾಷ ಅವರ ಅಕೌಂಟ್ ನಿಂದ 2,79,980-00 ರೂಗಳನ್ನು ಮತ್ತು ಅವರ ಮಗಳ ಅಕೌಂಟ್ ನಿಂದ 72, 566-00 ರೂಗಳನ್ನು ಲಪಟಾಯಿಸಿದ್ದಾರೆ. ಒಟ್ಟು 3,52,546-00 ರೂ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಕಷ್ಟಪಟ್ಟು ದುಡಿದು ಭವಿಷ್ಯಕ್ಕೆಂದು ಕೂಡಿಟ್ಟಿದ್ದ ಹಣವನ್ನು ಕಳೆದು ಕೊಂಡು ದಿಕ್ಕುತೋಚದಂತಾಗಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಸೈಬರ್ ಎಕನಾಮಿಕ್ಸ್ ಅಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆದರೆ ಇಂತಹ ಪ್ರಕರಣದಲ್ಲಿ ವಂಚಕರು ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ಬೇರೆ ರಾಜ್ಯಗಳಲ್ಲಿ ಅಥವಾ ದೇಶಗಳಲ್ಲಿ ಕುಳಿತು ಮೋಸದ ಬಲೆ ಹೆಣೆದಿರುತ್ತಾರೆ.
ಇಂತಹ ಪ್ರಕರಣಗಳು ನಿತ್ಯ ನಡೆಯುತ್ತಿದ್ದರೂ ಜನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಎಲ್ಲಿಯವರೆಗೆ ಜನ ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ಈ ರೀತಿಯ ಮೋಸ ನಡೆಯುತ್ತಲೇ ಇರುತ್ತದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ