October 5, 2024

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ.ಅಂಬರೀಶ್ ಸಭಾಂಗಣದಲ್ಲಿ ಕನ್ನಡಿಗರ ಕನ್ನಡ ಕೂಟ ದುಬೈ (UAE)ವತಿಯಿಂದ  ಮಾಜಿ ಪ್ರಧಾನ ಮಂತ್ರಿಗಳು, ಹಿರಿಯ ರಾಜಕೀಯ ಮುತ್ಸದ್ದಿ  ಹೆಚ್.ಡಿ.ದೇವೇಗೌಡರವರು ಶ್ರೀಮತಿ ಚನ್ನಮ್ಮ ದೇವೇಗೌಡ ದಂಪತಿಗಳಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

ಆಧಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ನಿರ್ಮಾಲಾನಂದನಾಥ ಮಹಾಸ್ವಾಮೀಜಿರವರು ದಿವ್ಯ ಸಾನಿಧ್ಯ ವಹಿಸಿದ್ದರು.

ಕನ್ನಡಿಗರ ಕನ್ನಡ ಕೂಟ ದುಬಾಯಿ ಅಧ್ಯಕ್ಷರಾದ ಸಾಧನ್ ದಾಸ್, ಬಿಬಿಎಂಪಿ ವಿಶೇಷ ಆಯುಕ್ತರಾದ  ಜಯರಾಮ್ ರಾಯಪುರ, ಅಭಿಮಾನಿ ಸಮೂಹ ಸಂಸ್ಥೆಗಳು ವ್ಯವಸ್ಥಾಪಕರಾದ ಟಿ.ವೆಂಕಟೇಶ್ ರವರು . ಅನಿವಾಸಿ ಉದ್ಯಮಿ ಜಫ್ರುಲ್ಲಾ ಖಾನ್ , ಅಮೇರಿಕಾ ಕನ್ನಡ ಕೂಟಗಳ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಡಾ.ಹಳೇಕೋಟೆ ವಿಶ್ವಾಮಿತ್ರ, ಓಮನ್ ಕನ್ನಡಿಗ ಉಪಾಧ್ಯಕ್ಷ ರಘುನಾಥ್ ಪ್ರಭು, ದುಬಾಯಿ ಕನ್ನಡ ಕೂಟದ ಇಬ್ರಾಹಿಂ ಕಲೀಲ್  ಬಿಲ್ವಪತ್ರೆ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ದಂಪತಿಗಳಿಗೆ ಸನ್ಮಾನಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವನ ಸಾಧನೆಯ ಸಾಕ್ಷ ಚಿತ್ರ ಪ್ರದರ್ಶನ ಮಾಡಲಾಯಿತು

ಶ್ರೀ ಶ್ರೀ ಶ್ರೀ ನಿರ್ಮಾಲಾನಂದ ನಾಥ ಸ್ವಾಮೀಜಿರವರು ಮಾತನಾಡಿ ಭಾವನಾತ್ಮಕ ಪವಿತ್ರ ಕಾರ್ಯಕ್ರಮ ಇಂದು ನೆರವೆರಿದೆ. ಸಾಮಾಜಿಕ ಕ್ಷೇತ್ರದಲ್ಲಿ ದೇಶವನ್ನು ಮುನ್ನೆಡೆಸಿದ  ಹುಟ್ಟೂರಿನ ಸನ್ಮಾನ ಸ್ವೀಕರಿಸಿದ  ಹೆಚ್.ಡಿ.ದೇವೇಗೌಡರು ನಾಡು ಕಂಡ ಶೇಷ್ಠ ರಾಜಕಾರಣಿ. ರಾಜ್ಯದ ಅಭಿವೃದ್ದಿ ಕುರಿತು ಅವರ ಮನಸ್ಸಿನಲ್ಲಿ ಹಲವಾರು  ಚಿಂತನೆಗಳಿವೆ. ಹಗಲಿರುಳು ಸಂಪೂರ್ಣ ಕ್ಷಣಗಳನ್ನು ರಾಜಕೀಯ ಜೀವನಕ್ಕೆ ಮೀಸಲು ಇಟ್ಟರು. ದೇವೇಗೌಡರ ಶ್ರಮ, ಸಾಧನೆ ಎಲ್ಲರಿಗೂ ಗೊತ್ತು, ಸಾಧನೆಗೆ ಪ್ರತಿಫಲ ಸಿಗಲ್ಲಿಲ್ಲ ಅವರಿಗೆ. ದೇವೇಗೌಡರು ಮಣ್ಣಿನಮಗನಾಗಿ ಹಳ್ಳಿ ನಂಬಿ ಬಂದವರು. ಯುವ ಸಮೂಹ ದೇವೇಗೌಡ ಜೀವನ ಚರಿತ್ರೆ ಪುಸ್ತಕ ಓದಬೇಕು.

 

ಎರಡು ಸಾವಿರ ವರ್ಷ ಇತಿಹಾಸ ಇರುವ ಕನ್ನಡ ಭಾಷೆಗೆ ಕುವೆಂಪು ಅಪಾರ ಕೊಡುಗೆ ನೀಡಿದರು.  ಚಿಕ್ಕ ವಯಸ್ಸಿನಲ್ಲಿ ಅಮ್ಮನ ಮಡಿಲಿನಲ್ಲಿ ಮಲಗಿದ್ದ ದೇವೇಗೌಡರ ನೋಡಿದ ಬುಡಬುಡಿಕೆಯವನು ಮುಂದೆ ಚಕ್ರವರ್ತಿಯಾಗಿತ್ತಾನೆ ಎಂದು ಭವಿಷ್ಯ ನುಡಿದಿದ್ದರು. ಶಿವನ ಈಶ್ವರ ಪೂಜೆ ಪ್ರತಿಫಲ ಹಾಗೂ ಅಮ್ಮನ ಆಶೀರ್ವಾದ ದಿಂದ ದೇವೇಗೌಡರು ಸಾಧನೆ ಮಾಡಲು ಸಾಧ್ಯವಾಯಿತು. ಹಣಕ್ಕೆ ಬೆಲೆ ಕೊಡಲಿಲ್ಲ, ತತ್ವ ಆದರ್ಶ ಮೂಲಕ ರಾಜಕಾರಣ ಮಾಡಿದರು. ಪ್ರತಿಯೊಬ್ಬರು ತತ್ವ ಸಿದ್ದಾಂತ, ಒಳ್ಳೆತನದಲ್ಲಿ ಬದುಕಬೇಕು ಎಂದು ಹೇಳಿದರು.

ಹೆಚ್.ಡಿ.ದೇವೇಗೌಡರು ಮಾತನಾಡಿ ಅದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿರವರು ಸಮಾಜಕ್ಕೆ ನೀಡಿದ ಕೊಡುಗೆ,ಶಕ್ತಿ ಅಪಾರ. ದುಬೈ ಕನ್ನಡಿಗರು ನನ್ನ, ನನ್ನ ಶ್ರೀಮತಿರವರಿಗೆ ತೋರಿಸಿದ ಗೌರವಕ್ಕೆ ತಲೆಬಾಗಿ ನಮಸ್ಕಾರ ಮಾಡುತ್ತೇನೆ. ನಾನು ಒಬ್ಬ ಕನ್ನಡಿಗ, ನನಗೆ 91ವರ್ಷವಾಗಿದೆ. ನಾನಾ ಸಮಸ್ಯೆಗಳು ನನ್ನ ಮುಂದೆ ಬರುತ್ತದೆ . ಮನಸ್ಸು ಸಿಮೀತ ಇರುವುದಿಲ್ಲ ನೋವು ಕಾಡುತ್ತದೆ, ರಾಷ್ಟ್ರದ ರಾಜಕಾರಣ ಕುರಿತು ಮಾತನಾಡುವುದಿಲ್ಲ , ನನ್ನ ಸಮಾಜದ ಗುರುಗಳ ದರ್ಶನ ಪಡೆಯಲು ನಾನು ಬರಿಕಾಲಿನಲ್ಲಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ತಲೆಬಾಗಿ ನಮಿಸುತ್ತೇನೆ ಎಂದು ಹೇಳಿದರು.

ಜಯರಾಮ್ ರಾಯಪುರ ರವರು ಮಾತನಾಡಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರ   ವಿದ್ವತ್ ಬಹಳ ಇದೆ .ನಾನು ಸಹ ಹಾಸನ ಜಿಲ್ಲೆಯವನು. ಆರ್ಥಿಕ ಸ್ಥಿತಿ ಕುರಿತು ಪತ್ರಿಕೆಗಳಲ್ಲಿ ಲೇಖನ ಓದಿ, ಸಮಗ್ರ ಮಾಹಿತಿ ಸಂಗ್ರಹಿಸಿ ಲೋಕಸಭೆಯಲ್ಲಿ ದೇವೇಗೌಡರು ಮಾತನಾಡುತ್ತಿದ್ದರು. ಕರ್ನಾಟಕದ ಬಗ್ಗೆ ಸಂಪೂರ್ಣ ಮಾಹಿತಿ ಬಲ್ಲವರು ದೇವೇಗೌಡರು. ಜನ ಸಾಮಾನ್ಯರು ಸಹ ನೇರ ಭೇಟಿ ಮಾಡಬಹುದು. ಒಬ್ಬ ರಾಜಕಾರಣಿ ಬದ್ದತೆ ಇದ್ದರೆ ಉನ್ನತ ಸ್ಥಾನ ಲಭಿಸುತ್ತದೆ ಎಂದರೆ ಇದಕ್ಕೆ ಸಾಕ್ಷಿಯಾಗಿ ದೇವೇಗೌಡರು ನಿಲ್ಲುತ್ತಾರೆ. 1994ರಿಂದ 96ರ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದರು. ಪ್ರಧಾನಿಯಾಗಿ ದೆಹಲಿಗೆ ಹೋದರು ದೇವೇಗೌಡರು ಕರ್ನಾಟಕದಲ್ಲಿ ಇದ್ದಿದ್ದರೆ ರಾಜ್ಯ ಅಭಿವೃದ್ದಿಯ ಚಿತ್ರಣವೆ ಬದಲಾಗುತ್ತಿತ್ತು ಎಂದು ಹೇಳಿದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ