October 5, 2024

ಸಾಹಿತಿ ಹಳೇಕೋಟೆ ರಮೇಶ್ ಅವರು ಬರೆದಿರುವ ಅಮೃತ ಭಾರತಿ ಎನ್ನುವ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ನಿನ್ನೆ ಮೂಡಿಗೆರೆ ಜೇಸಿ ಭವನದಲ್ಲಿ ನೆರವೇರಿತು.

ಶಾಸಕಿ ಶ್ರೀಮತಿ ನಯನ ಮೋಟಮ್ಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಹಳೇಕೋಟೆ ರಮೇಶ್ ಅವರು ಸಾಹಿತ್ಯ ಸೇವೆಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿದರು. ಇಂದಿನ ಯುವಜನರು ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ತೋರಬೇಕು. ನಮ್ಮ ಭಾಷೆಯ ಬಗ್ಗೆ ಸದಾ ಅಭಿಮಾನ ಹೊಂದಿರಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕೃತಿಯನ್ನು ಲೋಕಾರ್ಪಣೆ ಮಾಡಿದ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅವರು ಕೃತಿಯ ಬಗ್ಗೆ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಭಾರತದಲ್ಲಿ ಸಾಮಾಜಿಕ, ಸಂಸ್ಕøತಿ, ಶಿಕ್ಷಣ, ನೃತ್ಯ, ಹೋರಾಟ, ಸತ್ಯಾಗ್ರಹ ಸೇರಿದಂತೆ 64 ವಿಷಯಗಳನ್ನು ಸಾಹಿತಿ ಹಳೆಕೋಟೆ ರಮೇಶ್ ಅವರು ಅಮೃತ ಭಾರತ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರ ಎಂದು ಡಾ.ಬಿ.ಅರ್.ಅಂಬೇಡ್ಕರ್ ಅವರ ಮಾತಿನಂತೆ. ಇತಿಹಾಸವನ್ನು ಸಂಪೂರ್ಣ ಅರಿತು, ಮಾಹಿತಿ ಸಂಗ್ರಹಿಸಿ ಅದನ್ನು ಹಳೆಕೋಟೆ ರಮೇಶ್ ಅವರು ಪುಸ್ತಕ ರೂಪದಲ್ಲಿ ಯುವ ಜನತೆಗೆ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಈ ಪುಸ್ತಕವನ್ನು ಎಲ್ಲರು ಕೊಂಡು ಓದಿದರೆ ನಮ್ಮ ಭಾರತದ ಭವ್ಯ ಚರಿತ್ರೆಯ ಇಣುಕು ನೋಟ ಇದರಲ್ಲಿ ಸಿಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಮಾತನಾಡಿ, ಒಂದು ಕೃತಿ ರಚಿಸಿರುವುದು ಸಾಮಾನ್ಯದ ಮಾತಲ್ಲ. ಅದರಲ್ಲಿ ವಸ್ತು ನಿಷ್ಟ ವಿಚಾರಗಳು ಇರಬೇಕಾಗುತ್ತದೆ. ಅಂತಹ ಸಮಗ್ರ ಮಾಹಿತಿ ಸಂಗ್ರಹಿಸಿ, ಓದುಗರಿಗೆ ದೊಡ್ಡ ಕೊಡುಗೆಯನ್ನೇ ಹಳೆಕೋಟೆ ರಮೇಶ್ ಅವರು ನೀಡಿದ್ದಾರೆ. ಹಳೆಕೋಟೆ ರಮೇಶ್ ಅವರು ಈಗಾಗಲೇ ಅವರು ಬರೆದ 28 ಕೃತಿಗಳ ಪೈಕಿ, 8 ಕೃತಿ 9 ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಈಗ ಲೋಕಾರ್ಪಣೆಗೊಂಡಿರುವ ಕೃತಿಯೂ ಕೂಡ ಎಲ್ಲಾ ಭಾಷೆಯಲ್ಲಿ ಅನುವಾದಗೊಳ್ಳುವುದರದಲ್ಲಿ ಸಂಶಯವಿಲ್ಲ. ಬದುಕಿದ್ದಾಗ ಉಸಿರು ಇರುತ್ತದೆ. ಆದರೆ ಸತ್ತ ಬಳಿಕ ಹೆಸರು ಇರಬೇಕೆಂದರೆ ಇಂತಹ ಸಾಧನೆಗಳನ್ನು ಮಾಡಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆಗಳು ಇರುತ್ತದೆ. ಅವುಗಳನ್ನು ಹೊರ ತರುವ ಪ್ರಯತ್ನ ನಡೆದರೆ ಸಮಾಜಕ್ಕೆ ಉತ್ತಮ ಸಂದೇಶಗಳು ರವಾನೆಯಾಗುತ್ತಲೆ ಇರುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಅನೇಕ ಮಂದಿ ಉತ್ತಮ ಬರಹಗಾರರು ಇದ್ದಾರೆ. ಅವರಲ್ಲಿ ಹಳೇಕೋಟೆ ರಮೇಶ್ ನಿರಂತರವಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಕ ಬಳಗದ ಮಾಜಿ ಅಧ್ಯಕ್ಷ ಡಾ.ಹಳೆಕೋಟೆ ಎನ್.ವಿಶ್ವಾಮಿತ್ರ ಮಾತನಾಡಿ ನಮ್ಮ ಕುಟುಂಬದ ರಮೇಶ್ ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಬಂದಿದ್ದಾರೆ. ಅವರ ಕೃತಿಯೊಂದು ಅಮೇರಿಕಾದ ಅಕ್ಕ ಸಮ್ಮೇಳನದ ಸಂದರ್ಭದಲ್ಲಿಯೂ ಬಿಡುಗಡೆಯಾಗಿರುವುದು ನಮ್ಮ ಕುಟುಂಬದ ಹೆಮ್ಮೆಯಾಗಿದೆ. ನಮ್ಮ ಕನ್ನಡ ಸಾಹಿತ್ಯ ಅತ್ಯಂತ ಉತೃಷ್ಟವಾಗಿದೆ ಎಂದರು.

ವೇದಿಕೆಯ ಕೃತಿಯ ಲೇಖಕ ಹಳೇಕೋಟೆ ರಮೇಶ್, ಉದ್ಭವ ಪ್ರಕಾಶನದ ಬೆಳವಾಡಿ ಮಂಜುನಾಥ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಕ.ಸಾ.ಪ. ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಬೆಳವಾಡಿ ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ