October 5, 2024

ಇವತ್ತು ಭಾರತದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ದಿನವಾಗಿ ದಾಖಲಾಯಿತು. ಆಧುನಿಕ ವಿಜ್ಞಾನದ ಪರಮೋಚ್ಚ ಸಾಧನೆಯೊಂದಕ್ಕೆ ನಮ್ಮ ದೇಶವಿಂದು ಸಾಕ್ಷಿಯಾಯಿತು.

ಭೂಮಿಯ ಏಕೈಕ ಉಪಗ್ರಹ ಚಂದ್ರನ ಮೇಲೆ ಭಾರತದ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಇಡೀ ಜಗತ್ತು ಭಾರತದತ್ತ ತಿರುಗು ನೋಡುವಂತೆ ಅನುಪಮ ಸಾಧನೆಯನ್ನು ನಮ್ಮ ದೇಶದ ವಿಜ್ಞಾನಿಗಳು ನಿಜವಾಗಿಸಿದರು.

ಹೌದು ಚಂದ್ರಯಾನ-3 ಯಶಸ್ವಿಯಾಗಿ ಪೂರ್ಣಗೊಂಡು ಇವತ್ತು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಅಂಗಳವನ್ನು ಭಾರತದ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚುಂಬಿಸಿತು. ಇದರೊಂದಿಗೆ ದೇಶದಲ್ಲಿ ಹರ್ಷೊದ್ಘಾರ ಮುಗಿಲು ಮುಟ್ಟಿತು.

ಜುಲೈ 14ರಂದು ನಭೋಮಂಡಲಕ್ಕೆ ಚಿಮ್ಮಿದ್ದ ಭಾರತದ ಬಾಹ್ಯಾಕಾಶ ನೌಕೆ 40 ದಿನಗಳ ಸತತ ಪ್ರಯತ್ನದ ಫಲವಾಗಿ ಇಂದು ಚಂದ್ರನ ದಕ್ಷಿಣ ದ್ರುವದ ಮೇಲೆ ಯಶಸ್ವಿಯಾಗಿ ಇಳಿದಿದೆ.

ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಮೊತ್ತಮೊದಲ ದೇಶ ಎಂಬ ಹೆಮ್ಮೆ ಭಾರತದ್ದಾಯಿತು.

ಭಾರತವಲ್ಲದೇ ವಿಶ್ವದ ಕೇವಲ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ತಮ್ಮ ಬಾಹ್ಯಾಕಾಶ ನೌಕೆಗಳನ್ನು ಇಳಿಸಿವೆ. ಅವುಗಳೆಂದರೆ ಅಮೇರಿಕಾ, ರಷ್ಯಾ ಮತ್ತು ಚೀನಾ. ಆದರೆ ಈ ಮೂರು ದೇಶಗಳು ಚಂದ್ರನ ಉತ್ತರ ಧ್ರುವದ ಮೇಲಷ್ಟೇ ತಮ್ಮ ನೌಕೆಗಳನ್ನು ಇಳಿಸಿವೆ.

ಬಹುಕಠಿಣವಾದ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸುವ ಸಾಹಸಕ್ಕೆ ಕೈ ಹಾಕಿದ ಭಾರತದ ವಿಜ್ಞಾನಿಗಳು ಅದರಲ್ಲಿ ಇಂದು ಯಶಸ್ಸು ಕಂಡಿದ್ದಾರೆ. ಈ ಮೂಲಕ ಇಡೀ ವಿಶ್ವಕ್ಕೆ ಭಾರತದ ವಿಜ್ಞಾನ ತಂತ್ರಜ್ಞಾನದ ತಾಕತ್ತು ಪ್ರದರ್ಶನ ಮಾಡಿದೆ.

ಭಾರತದ ಈ ಸಾಧನೆಗೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

ಇಂತಹ ಒಂದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಎಲ್ಲಾ ವಿಜ್ಞಾನಿಗಳಿಗೆ, ಈ ಯೋಜನೆಗೆ ಪ್ರೋತ್ಸಾಹ ನೀಡಿದ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸೋಣ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ