October 5, 2024

ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ. 13,14,622 ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಎಲ್. ಮಂಜುನಾಥ್ ತಿಳಿಸಿದ್ದಾರೆ.

ಅವರು ಶನಿವಾರ ಸಂಘದ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಂಘವು ಕಳೆದ 64 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು. 6 ಗ್ರಾಮಗಳ ವ್ಯಾಪ್ತಿಯ ರೈತಾಪಿ ವರ್ಗದವರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿದೆ. 1588 ಜನ ಸದಸ್ಯರನ್ನು ಹೊಂದಿದ್ದು, 70.64,162 ರೂಗಳ ಷೇರು ಬಂಡವಾಳ ಹೊಂದಿರುತ್ತದೆ.

ಸಂಘವು ಜಿಲ್ಲಾ ಬ್ಯಾಂಕಿನಿಂದ ಬೆಳೆ ಸಾಲವನ್ನು ತಂದು ಸದಸ್ಯರಿಗೆ ವಿತರುಸುತ್ತಾ ಬಂದಿದ್ದು ಕಳೆದ ಸಾಲಿನಲ್ಲಿ 6 ಕೋಟಿಗೂ ಅಧಿಕ ಸಾಲವನ್ನು ರೈತರಿಗೆ ವಿತರಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕೆಲಸ ಮಾಡುತ್ತಿದೆ ಎಂದರು.

ಸಂಘವು ಸ್ವಂತ ಬಂಡವಾಳದಿಂದಲೂ ಸಣ್ಣ ವ್ಯಾಪಾರ ಸಾಲ, ಆಧಾರ ಸಾಲ, ವಾಹನ ಸಾಲ, ಗೊಬ್ಬರ ಸಾಲವನ್ನು ವಿತರಿಸಿದೆ. ಸಂಘವು 2022-23ನೇ ಸಾಲಿನಲ್ಲಿ 6696760 ರೂಗಳ ವ್ಯಾಪಾರ ಮಾಡಿದ್ದು ರೂ. 445535-00 ಗಳ ವ್ಯಾಪಾರ ಲಾಭ ಹೊಂದಿರುತ್ತದೆ. ಸದಸ್ಯರುಗಳು, ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದ ಸಹಕಾರದಿಂದ ಸಂಘವು ಉತ್ತಮ ನಿರ್ವಹಣೆ ತೋರಲು ಸಾಧ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು ಇಂದು ಜಿಲ್ಲೆಯಲ್ಲಿ ಬಹುತೇಕ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದ ಆರ್ಥಿಕ ಚುಟುವಟಿಕೆಗಳ ಜೀವನಾಡಿಯಾಗಿ ಕೆಲಸ ಮಾಡುತ್ತಿವೆ. ರೈತರು, ಕಾರ್ಮಿಕರು ಈ ಸಂಘಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು. ಸಹಕಾರ ಸಂಘವನ್ನು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪಾರದರ್ಶಕವಾಗಿ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಬಿ.ಎಂ. ಬೈರೇಗೌಡ, ಬಿ.ಎನ್. ಜಯಂತ್, ಬಿ.ಎಸ್. ಜಯರಾಂ, ಸಂಘದ ಉಪಾಧ್ಯಕ್ಷೆ ಶ್ರೀಮತಿ ಸುರೇಖಾ ಲೋಹಿತ್, ನಿರ್ದೇಶಕರುಗಳಾದ ಬಿ.ಎನ್. ಜೈಪಾಲ್, ಸುಂದರೇಶ್, ಅತೀಪ್ ಇಕ್ಬಾಲ್, ಎಂ.ಬಿ. ಸಂತೋಷ್, ಶ್ರೀನಾಥ್, ಶೈಲೇಶ್ಚಂದ್ರ, ಮಧು ರಾಕೇಶ್, ಮಂಜುನಾಥ್, ಇಬ್ರಾಹಿಂ, ರಮೇಶ್, ಮೇಲ್ವಿಚಾರಕರಾದ ನಿತಿನ್ ಪಟೇಲ್, ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ