October 5, 2024

ಮೂಡಿಗೆರೆ ಬೇಲೂರು ರಸ್ತೆಯಲ್ಲಿರುವ ಗೋಣಿಬೀಡು ಸಮೀಪದ ಕಸ್ಕೇಬೈಕ್ ಗ್ರಾಮದಲ್ಲಿ ಏಳು ಕಾಡಾನೆಗಳು ಸುತ್ತಾಡುತ್ತಿವೆ. ಹಾಗಾಗಿ ಈ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕಸ್ಕೇಬೈಲ್ ಚಂದ್ರೇಗೌಡ ಎಂಬುವವರ ತೋಟದಲ್ಲಿ ಭುವನೇಶ್ವರಿ ಎಂದು ಹೆಸರಿಸಲ್ಪಟ್ಟಿರುವ ಹೆಣ್ಣಾನೆ ಗುಂಪಿನ 7  ಕಾಡಾನೆಗಳು ಬೀಡುಬಿಟ್ಟಿವೆ. ಈ ತೋಟ ಮುಖ್ಯ ರಸ್ತೆಗೆ ಸಮೀಪದಲ್ಲಿಯೇ ಇದೆ.

ಆದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು, ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಲಾಗಿದೆ.

ಕಳೆದ ಒಂದು ವಾರದಿಂದ ಕಾಡಾನೆಗಳ ತಂಡವೊಂದು ಗೋಣಿಬೀಡು ಹೋಬಳಿಯ ಹೊಸಪುರ, ದೊಡ್ಡಗೊಳ್ಳ, ನಂದಿಬೆಟ್ಟ ಕಾಫಿ ಎಸ್ಟೇಟ್, ಕಸ್ಕೇಬೈಲ್ ಸುತ್ತಮುತ್ತ ಸುತ್ತಾಡುತ್ತಾ ಜನರಲ್ಲಿ ಆತಂಕ ಸೃಷ್ಟಿಸಿವೆ.

ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದರೆ ಅವು ಅತ್ತಿಂದಿತ್ತ ಆ ಭಾಗದಲ್ಲಿಯೇ ಸುತ್ತುಹೊಡೆಯುತ್ತಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ