October 5, 2024

ಬಡವರು, ನಿರ್ಗತಿಕರು, ಮೂಕ ಪ್ರಾಣಿಗಳನ್ನು ಕಂಡರೆ ಮರುಗುತ್ತಿದ್ದ ಜೀವವೊಂದರ ಬಗ್ಗೆ ಮಮಕಾರ ತೋರದ ವಿಧಿ ತನ್ನೆಡೆಗೆ ಸೆಳೆದುಕೊಂಡಿದೆ. ಚಿಕ್ಕಮಗಳೂರು ನಗರದ ನಿವಾಸಿ ಸಮಾಜ ಸೇವಕಿ ಸಹನಾ (38 ವರ್ಷ) ಅಕಾಲಿಕವಾಗಿ ಅಗಲಿದ್ದಾರೆ. ಬದುಕಿದ್ದಷ್ಟೂ ದಿನವೂ ಸಮಾಜಕ್ಕಾಗಿ ಚಿಂತನೆ ನಡೆಸಿದ ಅವರು ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮೆದುಳು ನಿಷ್ಕ್ರೀಯತೆಗೊಳಗಾಗಿದ್ದ  ಸಹನಾ ಜೋನ್ಸ್ ರೂಬೆನ್ ಅವರ ಅಂಗಾಗಗಳನ್ನು ಇಂದು ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಕಸಿ ಮಾಡಿ ಬೆಂಗಳೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಿದರು.ತಮ್ಮ ಪತಿ ಜಿ ರೂಬೆನ್ ಮೋಸೆಸ್ ಅವರ ಸಮಾಜ ಸೇವೆಗೆ ಹೆಗಲಾಗಿ ನಿಂತು ಹತ್ತು ಹಲವು ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸಹನಾ ಜೋನ್ಸ್ ಅವರು ಸಾವಿನಲ್ಲೂ ಸಾರ್ಥಕತೆ ಮರೆದರು.

ಸದಾ ಕ್ರಿಯಾಶೀಲರಾಗಿ, ಆರೋಗ್ಯವಾಗಿದ್ದ ಸಹನಾ ಅವರಿಗೆ ಶನಿವಾರ ಬೆಳಗ್ಗೆ ತಲೆನೋವು ಕಾಣಿಸಿಕೊಂಡಿತ್ತು. ವೈದ್ಯರುಪರೀಕ್ಷೆ ಮಾಡಿದಾಗ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿರುವುದು ಕಂಡುಬಂದಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಆ ವೇಳೆಗಾಗಲೆ ಮೆದುಳು ಸಂಪೂರ್ಣ ನಿಷ್ಕ್ರೀಯತೆಗೊಂಡಿದ್ದ ಹಿನ್ನೆಲೆಯಲ್ಲಿ ವೈದ್ಯರು ಕೈಚೆಲ್ಲಿದ್ದರು.ಈ ಹಿನ್ನೆಲೆಯಲ್ಲಿ ಪತಿ ರೂಬೆನ್ ಮೋಸೆಸ್ ಹಾಗೂ ಮನೆಯವರು ಸಹನಾ ಅವರ ಅಂಗಾಗ ದಾನಕ್ಕೆ ನಿರ್ಧರಿಸಿದ್ದರು.

ಅದರಂತೆ ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ವೈದ್ಯರು ಎಲ್ಲಾ ರೀತಿಯ ಕಾನೂನಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇಂದು ಅಂಗಾಗಕ ಕಸಿ ನಡೆಸಿದರು. ಸಹನಾ ಅವರ ಕಣ್ಣುಗಳು, ಮೂತ್ರಪಿಂಡಗಳು ಹಾಗೂ ಲಿವರ್ ಗಳನ್ನು ಬೆಂಗಳೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಿದರು.ಅಂಗಾಗಗಳನ್ನು ಸಾಗಿಸಿದ ಆಂಬುಲೆನ್ಸ್ಗಳಿಗೆ ಚಿಕ್ಕಮಗಳೂರು ನಗರದಿಂದ ಬೆಂಗಳೂರು ಹಾಗೂ ಮಂಗಳೂರಿನ ವರೆಗೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೇ ಮಾಡಿದ್ದರು.

ಜಿಲ್ಲಾ ಸರ್ಜನ್ ಡಾ. ಸಿ.ಮೋಹನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳದಲ್ಲೇ ಇದ್ದು ಉಸ್ತುವಾರಿ ನೋಡಿಕೊಂಡರು. ಶಾಸಕ ಹೆಚ್.ಡಿ. ತಮ್ಮಯ್ಯ ಉಪಸ್ಥಿತರಿದ್ದು ಸಹನಾ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಸಹನಾ ಹೆಸರಿಗೆ ತಕ್ಕಂತೆ ಸಹನೆ ಮತ್ತು ದಯೆ, ಕರುಣೆಯ ಮೂರ್ತಿಯಾಗಿದ್ದರು. ಬಡವರು, ನಿರ್ಗತಿಕರು ಕಂಡರೆ ಅವರಿಗೆ ಆಹಾರ ನೀಡುವುದು, ಆರೈಕೆ ಮಾಡುವುದು, ಮೂಕಪ್ರಾಣಿಗಳಿಗೆ ಆಹಾರ ನೀಡುವುದು ಅವರ ಹವ್ಯಾಸವಾಗಿತ್ತು. ಕೋವಿಡ್ ಸಮಯದಲ್ಲಿ ತನ್ನ ಪತಿಯೊಂದಿಗೆ ಸೇರಿ ಬಹಳಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದರು. ಇವರ ಪತಿ ರೊಬೆನ್ ಮೋಸೆಸ್ ಹಾಗೂ ಸಹನಾ ಚಿಕ್ಕಮಗಳೂರು ನಗರದಲ್ಲಿ ಸಮಾಜಸೇವೆಗಾಗಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ದಂಪತಿಗಳಿಗೆ ಪುಟ್ಟ ಮಗುವೊಂದಿದೆ.

ಕರುಣಾಮಯಿಯಾಗಿದ್ದ ಸಹನಾ ಮೇಲೆ ಸಾವು ಮಾತ್ರ ತನ್ನ ಕರುಣೆ ತೋರಲಿಲ್ಲ. ಕೇವಲ ಎರಡೇ ದಿನದ ಅನಾರೋಗ್ಯದಲ್ಲಿ ಅವರು ಅಕಾಲಿಕವಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ತನ್ನ ಸಾವಿನಲ್ಲಿಯೂ ಐದು ಜೀವಗಳಿಗೆ ಆಸರೆಯಾಗಿ ಸಾರ್ಥಕತೆ ಮೆರೆದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ