October 5, 2024

ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ, ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹ್ಯಾಂಡ್‍ಪೋಸ್ಟ್ ಸರ್ಕಲ್ ಬಳಿ ಕಸದ ತೊಟ್ಟಿ ತುಂಬಿ ತುಳುಕುತ್ತಿದೆ, ಆದರೆ  ಜನರು ಕಸವನ್ನು ತಂದು ಅಲ್ಲೇ ಎಸೆಯುತ್ತಿದ್ದಾರೆ. ಒಂದೆಡೆ ಜನರಿಗೆ ಸಾಮಾನ್ಯ ಜ್ಞಾನವಿಲ್ಲ, ಗ್ರಾಮಪಂಚಾಯಿತಿಗಂತೂ ಕಸ ವಿಲೇವಾರಿಯ ಬಗ್ಗೆ ಯೋಚನೆಯೆ ಇಲ್ಲ. ಅಲ್ಲಿ ಕಸದ ತೊಟ್ಟಿ ತುಂಬಿ ಅನೇಕ ತಿಂಗಳುಗಳೇ ಕಳೆದಿದೆ. ಅದನ್ನು ಖಾಲಿ ಮಾಡಿ ಸ್ವಚ್ಛ ಮಾಡುವುದಾಗಲಿ ಅಥವಾ ಅಲ್ಲಿಂದ ವಿಲೇವಾರಿ ಮಾಡುವುದಾಗಲಿ ಗ್ರಾಮ ಪಂಚಾಯಿತಿ ಮಾಡುತ್ತಿಲ್ಲ.

ದಿನನಿತ್ಯ ಸಾವಿರಾರು ವಾಹನಗಳು, ಜನರು ತಿರುಗಾಡುವ ಮುಖ್ಯ ಹೆದ್ದಾರಿ ಪಕ್ಕದಲ್ಲಿರುವ ಈ ಕಸದ ತೊಟ್ಟಿ ಕಸದಿಂದ ತುಂಬಿ ತುಳಿಕಿದ್ದು, ಕೊಳೆತು ನಾರುತ್ತಿದೆ. ಇದರ ಸಮೀಪವೇ ಆಟೋ ನಿಲ್ಡಾಣ, ಸೇರಿದಂತೆ ಬೇಕರಿ, ಪಾನೀಪುರಿ ಅಂಗಡಿ, ಹಣ್ಣಿನ ಅಂಗಡಿ, ಕೃಷಿ ವಿಜ್ಞಾನ ಕೇಂದ್ರ, ಬಸ್ ನಿಲ್ದಾಣ, ಹೋಟೆಲ್ ಗಳು ಇವೆ. ಇದರಿಂದ ಸುತ್ತಲ ಜನರಿಗೆ ರೋಗಬೀತಿ ಉಂಟಾಗಿದೆ. ಸರ್ಕಾರ ಕಸವಿಲೇವಾರಿಗೆಂದೇ ಗ್ರಾಮ ಪಂಚಾಯಿತಿಗಳಿಗೆ ಆಟೋಗಳನ್ನು ನೀಡಿದೆ. ಆದರೂ ಕೆಲ ಗ್ರಾಮಪಂಚಾಯಿತಿಗಳು ಕಸವಿಲೇವಾರಿಗೆ ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬರುತ್ತಿದೆ.

ನಾವು ನಿತ್ಯ ಮಾರ್ಗದಲ್ಲಿ ಸಂಚರಿಸುವಾಗ ಕಸದ ರಾಶಿಯ ವಾಸನೆ ತಡೆಯಲಾಗುತ್ತಿಲ್ಲ.  ಈ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಗ್ರಾಮ ಪಂಚಾಯಿತಿಯ ಜವಾಬ್ದಾರಿಯಾಗಿದೆ. ಕಸ ತೊಟ್ಟಿಯಲ್ಲಿ ತುಂಬಿ ರಸ್ತೆಯಲ್ಲೆಲ್ಲಾ ಹಾರಾಡುತ್ತಿರುತ್ತದೆ ಹಾಗೂ ಈ ಕಸದಲ್ಲಿರುವ ತ್ಯಾಜ್ಯವನ್ನು ತಿನ್ನಲು ಬೀದಿನಾಯಿಗಳು ಸಹ ಅಲ್ಲಿ ಬೀಡು ಬಿಟ್ಟಿರುತ್ತವೆ. ರಾತ್ರಿ ವೇಳೆ ಸಂಚರಿಸುವ ದ್ವಿಚಕ್ರ ವಾಹನ  ಸವಾರರ ಮೇಲೆ ದಾಳಿ ಮಾಡಿದ ನಿದರ್ಶನಗಳು ಕೂಡ ಇವೆ. ಹೀಗೆ ಮುಂದುವರೆದರೆ ಸಾರ್ವಜನಿಕರು ಗ್ರಾಮ ಪಂಚಾಯಿತಿಯ ಮುಂದೆ ಕಸದ ರಾಶಿಯನ್ನು ತಂದು ಸುರಿದು ಪ್ರತಿಭಟನೆ ಮಾಡಲಾಗುವುದು.

* ಸಾಜೀದ್ ಬಣಕಲ್ ,

ಸಾಮಾಜಿಕ ಕಾರ್ಯಕರ್ತ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ