October 5, 2024

ಗ್ರಾಮೀಣ ಭಾಗದ ಜನಜೀವನದ ಭಾಗವಾದ ಗ್ರಾಮೀಣ ಕ್ರೀಡೆಗಳು, ಸಂಸ್ಕøತಿಯನ್ನು ಉಳಿಸಲು ಪ್ರಯತ್ನ ಸಾಗಬೇಕು ಎಂದು ಚಿತ್ರನಟ ಪ್ರಥಮ್ ಹೇಳಿದರು.

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯಲ್ಲಿ ಪಬ್ಲಿಕ್ ಇಂಪ್ಯಾಕ್ಟ್ ನ್ಯೂಸ್ ತಂಡದಿಂದ ಕೃಷಿಕರಾದ ಯಶೋದಮ್ಮ ಅವರ ಗದ್ದೆಯಲ್ಲಿ ನಡೆದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಯುವಜನತೆ ಅತಿಯಾದ ಮೊಬೈಲ್ ಬಳಕೆಯಿಂದ ದೇಶಿ ಸಂಸ್ಕೃತಿಯ ಆಟಗಳನ್ನು ಮರೆಯುತ್ತಿದ್ದಾರೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕೆಸರುಗದ್ದೆಯ ಆಟಗಳು ಸಹಕಾರಿಯಾಗಿವೆ ಎಂದರು.

 

ತರುವೆ ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಸತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಯು ಮಲೆನಾಡು ಭಾಗದಲ್ಲಿ ಹಮ್ಮಿಕೊಂಡು  ಕೆಸರುಗದ್ದೆಯ ಆಟಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಮಾಜಿ ಗ್ರಾ.ಪಂ ಅಧ್ಯಕ್ಷರಾದ ಬಿ.ಎಂ.ಭರತ್ ಮಾತನಾಡಿ, ಯುವ ಜನತೆ ಅವಕಾಶ ಬಳಸಿಕೊಂಡು ಕ್ರೀಡೆಯಲ್ಲಿ ಸ್ಪರ್ಧಿಸುವುದು ಮುಖ್ಯ. ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು ಮನೋರಂಜನೆ ನೀಡುವ ಕೆಸರುಗದ್ದೆಯ ಆಟಗಳನ್ನು ಜನರು ಮರೆಯಬಾರದು ಎಂದರು.

ಕೆಸರುಗದ್ದೆಯಲ್ಲಿ ಪುರುಷರ, ಮಹಿಳೆಯರ ಹಗ್ಗಜಗ್ಗಾಟ, ವಾಲಿಬಾಲ್, ಥ್ರೋಬಾಲ್, ನೂರು ಮೀ ಕೆಸರುಗದ್ದೆ ಓಟ ಮತ್ತಿತರ ಕ್ರೀಡೆಗಳಲ್ಲಿ ಯುವಕ ಯುವತಿಯರ ತಂಡ, ಸಾರ್ವಜನಿಕರು ಭಾಗವಹಿಸಿದ್ದರು. ರಾಜ್ಯದ ವಿವಿಧ ಭಾಗಗಳ ಹತ್ತಾರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು

ಈ ಸಂದರ್ಭದಲ್ಲಿ ಪಬ್ಲಿಕ್ ಇಂಪ್ಯಾಕ್ಟ್ ತಂಡದ ಮುಖ್ಯಸ್ಥರಾದ ಪ್ರಶಾಂತ್ ಮುಗ್ರಹಳ್ಳಿ, ಸೌಜನ್ಯ, ಸಂಜಯಗೌಡ, ಅಶ್ವತ್, ಪರೀಕ್ಷಿತ್, ಯಶೋದಮ್ಮ, ಸಂತೋಷ್ ಕೋಟ್ಯಾನ್, ಮಧು, ನವೀನ್ ಹಾವಳಿ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ