October 5, 2024

ಒಂದಲ್ಲ ಎರಡಲ್ಲ ಬರೋಬ್ಬರಿ 16 ಕಾಡಾನೆಗಳು ಟಾಟಾ ಎಸ್ಟೇಟ್ ನಲ್ಲಿ ಸಾಲಾಗಿ ಸಾಗಿರುವ ದೃಶ್ಯ ಕ್ಯಾಮರ ಕಣ್ಣಲ್ಲಿ ಸೆರೆಯಾಗಿದೆ.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಸಮೀಪದ ಜಿ. ಹೊಸಳ್ಳಿ ಗ್ರಾಮದಲ್ಲಿರುವ ಟಾಟಾ ಎಸ್ಟೇಟ್ ನಲ್ಲಿ ಆನೆಗಳು ಬೀಡು ಬಿಟ್ಟಿವೆ. ಕಳೆದ ಅನೇಕ ದಿನಗಳಿಂದ ಜಿ.ಹೊಸಳ್ಳಿ, ಅರೇಹಳ್ಳಿ, ಚೀಕನಹಳ್ಳಿ, ಮಾಕೋನಹಳ್ಳಿ, ಮಲಸಾವರ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಕಾಡಾನೆಗಳು ಸುತ್ತುಹೊಡೆಯುತ್ತಿವೆ. ಗುಂಪಿನಲ್ಲಿ ಮರಿಯಾನೆಗಳು ಇದ್ದು ಕೆಲವೊಮ್ಮೆ ಜನಗಳ ಮೇಲೂ ಎಗರಿ ಬರುತ್ತಿವೆ.

ಈ ಕಾಡಾನೆಗಳ ಹಿಂಡಿನಿಂದ ಈ ಭಾಗದಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವ ಸಂದರ್ಭದಲ್ಲಿ ಎಲ್ಲಿ ಆನೆಗಲೂ ಪ್ರತ್ಯಕ್ಷವಾಗುತ್ತವೆ ಎಂದು ಜನರು ಆತಂಕದಿಂದ ಬದುಕುವಂತಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆನಷ್ಟವನ್ನು ಉಂಟುಮಾಡುತ್ತಿವೆ.

ಅರಣ್ಯ ಇಲಾಖೆಯ ಎಲಿಪೆಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿಗಳು ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಅವು ಸ್ಥಳಬಿಟ್ಟು ಕದಲುತ್ತಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಾ ಕಾಫಿ ತೋಟಗಳನ್ನು ಪುಡಿಗೈಯುತ್ತಿವೆ, ಕಾಫಿ ತೋಟಗಳಿಗೆ ಹೋಗಲು ಭಯಪಡುವಂತಾಗಿದೆ, ಕಾರ್ಮಿಕರು ಸಹ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿ.ಹೊಸಳ್ಳಿ ಕಾಫಿ ಬೆಳೆಗಾರ ರಂಜಿತ್ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ