October 5, 2024

ಕಾಫಿನಾಡಿನ ಸಮಾಜ ಸೇವಕ ಹಸೈನಾರ್ ಬಿಳಗುಳ ಇವರಿಗೆ ನಡೆದಾಡುವ ದೇವರ ಸೇವಾ ಟ್ರಸ್ಟ್ (ರಿ) ಬೆಂಗಳೂರು ಇವರ ವತಿಯಿಂದ ರಾಜ್ಯಮಟ್ಟದ ಸಿದ್ದಲಿಂಗ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳವರ ಜನ್ಮದಿನದ ಭಕ್ತಿ ಪೂರ್ವಕ ಪ್ರಣಾಮಗಳ ಕಾರ್ಯಕ್ರಮದಲ್ಲಿ ಮೂಡಿಗೆರೆಯ ಸಮಾಜ ಸೇವಕರಾದ ಹಸೈನಾರ್ ಬಿಳಗುಳ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಹಸೈನಾರ್ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಾಫಿನಾಡು ಸಮಾಜಸೇವಕರು ಹೆಸರಿನಲ್ಲಿ ತಮ್ಮ ಸಮಾನಮನಸ್ಕ ಸ್ನೇಹಿತರ ಒಡಗೂಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರು, ನಿರ್ಗತಿಕರು, ಅಂಗವಿಕಲರು, ಅಪಘಾತಕ್ಕೆ ಒಳಗಾದವರು ಹೀಗೆ ಯಾವುದೇ ತುರ್ತು ಸಂದರ್ಭದಲ್ಲಿ ಹಸೇನಾರ್ ಅವರು ತಮ್ಮ ತಂಡದೊಂದಿಗೆ ಧಾವಿಸಿ ಬಂದು ಜನರಿಗೆ ಸಹಾಯ ಮಾಡುತ್ತಾರೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ತುರ್ತು ಕಾರ್ಯನಿರ್ವಹಣೆಯಲ್ಲಿ ಇವರು ನೆರವಿಗೆ ಬರುತ್ತಾರೆ.

ಅಪಘಾತ ನಡೆದಾಗ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಶವಗಳನ್ನು ಹುಡುಕಿ ಹೊರತೆಗೆಯುವುದರಲ್ಲಿ, ಚಾರ್ಮಾಡಿ ಘಾಟಿ ಸೇರಿದಂತೆ ಕಠಿಣ ಸನ್ನಿವೇಶದ ಸಂದರ್ಭದಲ್ಲಿ ಇವರು ಕಾರ್ಯಾಚರಣೆ ನಡೆಸಿ ಜನರಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ.

ಕನ್ನಡ ನಾಡು ನುಡಿಯ ಬಗ್ಗೆಯೂ ಅಪಾರ ಅಭಿಮಾನ ಹೊಂದಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಕೆಗಳಲ್ಲಿ, ವಿವಿಧ ಸಂಘಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ. ಇದೀಗ ರಾಜ್ಯಮಟ್ಟದಲ್ಲಿ ಸಿದ್ದಲಿಂಗ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳ ಸ್ವಾಮಿಜೀಗಳು, ನಡೆದಾಡುವ ದೇವರ ಸೇವಾ ಟ್ರಸ್ಟ್ (ರಿ) ನ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಾಗೆಯೇ ಹಸೇನಾರ್ ಅವರ ಸಹವರ್ತಿಗಳಾದ, ಸಮಾಜ ಸೇವಕರಾದ ಅಬ್ದುಲ್ಲ ರೆಹಮಾನ್ , ಮುಸ್ತಾಕ್, ಮೂಡಿಗೆರೆ ಕಸಬಾ ಹೋಬಳಿ ಕ.ಸಾ.ಪ. ಅಧ್ಯಕ್ಷ ಎಂ.ಎಸ್. ನಾಗರಾಜ್ ಉಪಸ್ಥಿತರಿದ್ದರು.

ಪ್ರಶಸ್ತಿ ಬಂದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಹಸೈನಾರ್ ಈ ಪ್ರಶಸ್ತಿ ದೊರಕಿರುವುದು ಅತ್ಯಂತ ಸಂತಸ ತಂದಿದೆ. ಇದು ನನ್ನ ತಂಡದ ಎಲ್ಲಾ ಸಮಾಜ ಸೇವಕ ಬಳಗದವರಿಗೆ ಸಲ್ಲಬೇಕು. ಮುಂದೆಯೂ ನಮ್ಮ ಸಮಾಜಸೇವೆ ನಿರಂತರವಾಗಿ ಸಾಗಲಿದೆ. ಸಮಾಜಸೇವೆಯಲ್ಲಿ ನನಗೆ ಅತ್ಯಂತ ಆತ್ಮತೃಪ್ತಿ ಸಿಕ್ಕಿದೆ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ