October 5, 2024

ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗೆಂಡೇಹಳ್ಳಿ ರಸ್ತೆಯ ಬದಿಯಲ್ಲಿ ಕಸದ ರಾಶಿಯಾಗಿದ್ದು, ದಾರಿಹೋಕರು ಮೂಗುಮುಚ್ಚಿಕೊಂಡು ತಿರುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಪಟ್ಟಣದ ಕೆಲವು ಅಂಗಡಿಯವರು ಮತ್ತು ಕೆಲವು ಮನೆಗಳವರು ಕಸವನ್ನು ತಂದು ಹಾಕುತ್ತಿದ್ದು, ಕಸದ ರಾಶಿ ಕೊಳೆತು ನಾರುತ್ತಿದೆ. ಇಲ್ಲಿ ವಾಹನಗಳಲ್ಲಿ ಸಂಚರಿಸುವವರು ಮತ್ತು ಬೆಳಗ್ಗಿನ ವಾಕಿಂಗ್ ಹೋಗುವವರು ಕಸದ ಕೆಟ್ಟ ವಾಸನೆಯನ್ನು ತಡೆಯಲಾರದೇ ದೂರು ನೀಡುತ್ತಿದ್ದಾರೆ. ಆದರೆ ಪಟ್ಟಣ ಪಂಚಾಯಿತಿಯವರು ಯಾರ ದೂರನ್ನು ಕಿವಿಗೆ ಹಾಕಿಕೊಂಡಂತೆ ತೋರುತ್ತಿಲ್ಲ.

ಕೆಲವು ಮೀನು ಮಾಂಸದ ಅಂಗಡಿಯವರು ಇಲ್ಲಿ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದಾರೆ. ಈ ಕಸದ ರಾಶಿಯ ಕೂಗಳತೆ ದೂರದಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸುಂಡೆಕೆರೆ ಹಳ್ಳವಿದೆ. ಮಳೆಬಂದಾಗ ಈ ಕಸದ ತ್ಯಾಜ್ಯ ನೇರವಾಗಿ ಹೊಳೆಯನ್ನು ಸೇರುತ್ತಿದೆ. ಇದರಿಂದ ಜನರಿಗೆ ರೋಗರುಜಿನಗಳ ಭಯ ಕಾಡುತ್ತಿದೆ.

ಇದರ ಬಗ್ಗೆ ಪಟ್ಟಣ ಪಂಚಾಯಿತಿ ಇಲ್ಲಿ ಕಸವನ್ನು ಬಿಸಾಡದಂತೆ ಕೂಡಲೇ ಕ್ರಮ ಜರುಗಿಸಬೇಕು, ಇಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲಿ ಕಸವನ್ನು ಹಾಕುವ ಅಂಗಡಿಯವರ ಲೈಸೆನ್ಸ್ ರದ್ದುಮಾಡಬೇಕು. ಒಟ್ಟಾರೆ ಇಲ್ಲಿ ಕಸದ ರಾಶಿ ಆಗದಂತೆ ಪಟ್ಟಣ ಪಂಚಾಯಿತಿ ಸದಸ್ಯರುಗಳು ಮತ್ತು ಅಧಿಕಾರಿಗಳು ಮುತುವರ್ಜಿ ವಹಿಸಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ