October 5, 2024

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತಪರವಾದ ದೂರದೃಷ್ಠಿಯ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ರೈತಸಂಘದ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಆಗ್ರಹಿಸಿದ್ದಾರೆ.

ಅವರು ಗುರುವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸರ್ಕಾರಕ್ಕೆ ಸರಿಯಾದ ಯೋಚನೆ ಯೋಜನೆ ಇದ್ದಿದ್ದರೆ ಸ್ವಾತಂತ್ರ್ಯ ಬಂದು 75ವರ್ಷ ಆದರೂ 80ಕೋಟಿ ಜನರು ಸರ್ಕಾರಿ ಅಂಕಿ ಅಂಶದ ಪ್ರಕಾರ ಬಿ.ಪಿ.ಎಲ್ ಕಾರ್ಡ ವಾರಸುದಾರರಾಗಿರುತ್ತಿರಲಿಲ್ಲ. ಇದರಲ್ಲಿ 25ರಿಂದ 30ಕೋಟಿ ಅಂದಾಜಿನ ಪ್ರಕಾರ ಕಡುಬಡವರು ಇರಬಹುದು ಉಳಿದವರನ್ನು ಪತ್ತೆ ಹಚ್ಚುವ ಕೆಲಸ ಆಗಬೇಕು. ಮತು ಈ ಉಳಿದ ಕಡುಬಡವರನ್ನು ಸಂಪೂರ್ಣವಾಗಿ ಮೇಲಕ್ಕೆತ್ತುವ ಅಭಿವೃದ್ದಿಪಡಿಸುವ ಕೆಲಸವನ್ನು ಸರ್ಕಾರಗಳು ಮಾಡÀಬೇಕು. ಪ್ರಮುಖ ಉತ್ಪಾದನಾ ವಲಯಗಳಾದ ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮಗಳನ್ನು ಕಡೆಗಣಿಸಿ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ರಸ್ತೆ ,ಶಾಲೆ ,ಆಸ್ಪತ್ರೆಗಳ ಅವ್ಯವಸ್ಥೆಯನ್ನು ಕಡೆಗಣಿಸಿರುವುದು ಖಂಡನೀಯ ದುರದೃಷ್ಟಕರ ಹಾಗೂ ಇವತ್ತು ನಮ್ಮ ನಮ್ಮಗಳ ಸರ್ಕಾರದ ಮುಂದೆ ಪ್ರಮುಖವಾದ ಸವಾಲುಗಳಿರುತ್ತವೆ. ಜಾಗತೀಕ ತಾಪಮಾನ ಅತಿವೃಷ್ಟಿ, ಅನಾವೃಷ್ಟಿ, ದಿನನಿತ್ಯ ಅಪಘಾತಗಳು, ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್, ಹೃದಯ ರೋಗ, ಮಧುಮೇಹ, ಇವುಗಳು ಮಕ್ಕÀಳಿಂದ ವೃದ್ದರವರೆಗೂ ಇದ್ದು ಇವುಗಳು ಜನರ ಜೀವಿತದ ಅವಧಿ ದುಡಿಮೆಯನ್ನು ನಾಶ ಮಾಡಿರುತ್ತವೆÉ. ಇದಕ್ಕೆ ಕಾರಣವಾದ ರಾಸಾಯನಿಕ ಪದ್ದತಿಯ ಆಹಾರ, ಕಲುಷಿತ ನೀರು, ಇವುಗಳಿಂದ ಮುಕ್ತ ಮಾಡಿ ಗೋ ಆಧಾರಿತ ಸಾವಯವ ಕೃಷಿ ಆಧಾರಿತ ಅಹಾರ ಉತ್ಪನ್ನಗಳಿಗೆ ಬಂಡವಾಳ ಹೂಡುವುದು ಕೂಡಲೇ ಸರ್ಕಾರ ಮಾಡಬೇಕು ಎಂದರು.

ರೈತಸಂಘದ ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶ್ ಮಾತನಾಡಿ ಕೃಷಿ ಪ್ರಧಾನವಾದ ದೇಶದಲ್ಲಿ 70% ರೈತರು ಇರುವುದರಿಂದ ಕೃಷಿಗಾಗಿ ಕೃಷಿಯೇತರ ಕೈಗಾರಿಕೆಗಳಿಂದ ಹಲವಾರು ಪರಿಕರಗಳನ್ನು ಅಂದರೆ ಗೊಬ್ಬರ, ಕೀಟನಾಶಕ, ಸುಣ್ಣ, ಮೈಲುತುತ್ತು, ಪಂಪುಗಳು, ಮೋಟಾರು ವಾಹನಗಳು ಟ್ರಲ್ಲರ್ ಟ್ರ್ಯಾಕ್ಟರ್, ಪಿಕಪ್ ಇನ್ನು ಹಲವಾರು ಕೃಷಿ ಬಳಕೆಯ ಯಂತ್ರೋಪಕರಣಗಳನ್ನು ರೈತರು ಬಳಸುವುದರಿಂದ ಹೆಚ್ಚಿನ ಪಾಲು ಜಿ.ಎಸ್.ಟಿ ಕಟ್ಟುವವರು ರೈತರು ಬೆಳೆಗಾರರು ಆಗಿರುತ್ತಾರೆ. ಆದ್ದರಿಂದ ರೈತರಿಗೆ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಶೂನ್ಯ ಬಡ್ಡಿಯಲ್ಲಿ 25ಲಕ್ಷದವರೆಗೆ ಸಾಲವನ್ನು ಕೊಡಬೇಕು. 60ವರ್ಷ ಮೇಲ್ಪಟ್ಟ ರೈತನಿಗೆ ನಿವೃತ್ತಿ ವೇತನ 10ಸಾವಿರ ರೂಗಳನ್ನು ನೀಡಬೇಕು ಎಂದರು.

ರೈತ ಸಂಘ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಎಸ್.ಪಿ. ರಾಜು ಮಾತನಾಡಿ ಕಾಡು ಪ್ರಾಣಿಗಳಾದ ಆನೆ, ಹುಲಿ, ಕಾಟಿ, ಕಡವೆ, ಕಾಡುಗಳಲ್ಲಿ ಅವುಗಳಿಗೆ ಬೇಕಾದ ಬಿದಿರು, ಬಾಳೆ, ಬಗನಿ, ಹತ್ತಿ,ಹಲಸು, ಮಾವು ಇತರೆ ಮರಗಳನ್ನು ಬೆಳೆಸುವುದು ಮತ್ತು ಕಾಡಿನಲ್ಲಿ ನೀರಿನ ಚೆಕ್ ಡ್ಯಾಂ ಮತ್ತು ಕೆರೆಗಳನ್ನು ಮಾಡುವುದು. ಮತ್ತು ಕೃಷಿ ಆಧಾರಿತ ಪ್ರದೇಶಗಳಿಗೆ ಆಧುನಿಕ ಬೇಲಿಗಳನ್ನು ಅಳವಡಿಸಿವುದು. ಕೃಷಿ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಕೃಷಿ ಕಾರ್ಮಿಕರು ರೈತರ ಸಾಕುಪ್ರಾಣಿಗಳ ಜೀವನ ರಕ್ಷಣೆ ಮಾಡಿ ಕೃಷಿಯನ್ನು ಉಳಿಸಿಕೊಡಬೇಕು.

ಈಗಿನ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರು ದಿಡೀರ್ ಅಪಘಾತ, ಮಾರಕ ಕಾಯಿಲೆಗಳಾದ ಅಂಗವಿಕಲರು, ಕ್ಯಾನ್ಸರ್ ,ಹೃದಯ ರೋಗ ,ಮಧುಮೇಹ ಮತು ಸಾಲದ ಸುಳಿಯಲ್ಲಿ ಸಿಲುಕಿ ಮುಂತಾದ ಕಾರಣಗಳಿಂದ ಎಷ್ಟೋ ಕುಟುಂಬಗಳು ಆರ್ಥಿಕವಾಗಿ ಝರ್ಜರಿತರಾಗಿ, ಇಂತಹ ಅಘಾತಕಾರಿ ದುರಂತಗಳ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸಬೇಕು ಮತ್ತು ಇಂತಹ ಕುಟುಂಬಗಳನ್ನು ಸಂಪೂರ್ಣವಾಗಿ ಆರ್ಥಿಕವಾಗಿ ಮೇಲೆತ್ತುವ ಕೆಲಸ ಆಗಬೇಕು ಎಂದರು.
ನೀರಿನ ಸಮಸ್ಯೆ ಬರಗಾಲವನ್ನು ಸಮರ್ಥವಾಗಿ ಎದುರಿಸಲು ಮಳೆಗಾಲದ ಮಳೆ ನೀರು ಕೊಯ್ಲು ಸಂಗ್ರಹಣೆ ಮಾಡಿ ಜನರನ್ನು ಜಾಗೃತಿ ಮಾಡಿ ಕೆರೆ, ಕಟ್ಟೆ, ಬಾವಿಗಳನ್ನು ಮತ್ತು ಮನೆ ಮನೆಗಳಲ್ಲಿ ಶೇಖರಣೆ ಮಾಡುವ ಹಾಗೆ ಮಾಡಬೇಕು ಎಂದರು.

ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ಸಿ.ಟಿ. ತುಳಸೇಗೌಡ ಮಾತನಾಡಿ ವಿದ್ಯುತ್ ಸಮಸ್ಯೆ ಎದುರಿಸಲು ಸೌರಶಕ್ತಿ ವಿದ್ಯುತ್ ಉತ್ಪಾದನೆ ಮಾಡುವುದು, ರೈತರಿಗೆ ದಿನದ 12 ಗಂಟೆಯೂ ಗುಣ ಮಟ್ಟದ ವಿದ್ಯುತ್ ಕೊಡುವುದು ಈಗ ಕಾಂಗ್ರೇಸಿಗರು ಮಾತು ಎತ್ತಿದರೆ ಮೋದಿಯವರು 15ಲಕ್ಷ ಅಕೌಂಟಿಗೆ ಹಾಕಿದ್ದಾರ ಎಂದು ಹೇಳುತ್ತಿದ್ದಾರೆ. ಮೋದಿ ಹೇಳಿದ್ದು ವಿದೇಶ ಅಂದರೆ ಸ್ವಿಜರ್‍ಲ್ಯಾಂಡ್À ನಿಂದ ಕಪ್ಪು ಹಣ ತಂದರೆ ತಲಾ ಜನರಿಗೆ 15ಲಕ್ಷದಷ್ಟು ಬರಬಹುದು ಎಂದು ಹೇಳಿದ್ದಾರೆ. ಆದರೆ ಈ ಕಪ್ಪು ಹಣ ಯಾರದ್ದು ಅಂದರೆ 250ರಿಂದ 300ಲಕ್ಷ ಕೋಟಿ ಹಣ ಲೂಟಿ ಮಾಡಿ ಈ ದೇಶದ ಆರ್ಥಿಕವ್ಯವಸ್ಥಯನ್ನು ಬುಡಮೇಲು ಮಾಡಿದವರು ಕಾಂಗ್ರೇಸ್ಸಿಗರು. ನಿಮಗೆ ನಿಜವಾದ ದೇಶದ ಬಗ್ಗೆ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಈ ಹಣವನ್ನು ವಾಪಸ್ ತಂದು ದೇಶದ ಖಜಾನೆಗೆ ತುಂಬಬೇಕು ಎಂದರು.

ಈಗಾಗಲೇ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಜನರಿಂದ ಕಿತ್ತು ಜನರಿಗೆ ಕೊಡುವುದರಿಂದ ಜನರಿಗೆ ಈಗ ಖುಷಿ, ಸಂತೋಷ ಆಗಬಹುದು ಕಾಲಕ್ರಮೇಣ ಆದಾಯದ ಮೂಲ ಇಲ್ಲದೆ. ಜನರಿಂದ ಕಿತ್ತು ಕೊಳ್ಳುವುದು ಜಾಸ್ತಿಯಾಗಿ ಹಣದುಬ್ಬರ ಜಾಸ್ತಿಯಾಗಿ ದೇಶ ಮತ್ತು ರಾಜ್ಯಗಳು ಆರ್ಥಿಕ ದಿವಾಳಿಯಾಗಿ ವೆನಿಜುಲಾ, ಶ್ರೀಲಂಕಾ, ಪಾಕಿಸ್ತಾನ, ಆಗುವುದು ಗ್ಯಾರಂಟಿ ಯೋಜನೆಯಾಗಿರುತ್ತದೆ. ಈಗಾಗಲೇ ಜನಸಾಮಾನ್ಯರು, ಆಟೋ ಚಾಲಕರು, ಬಾಡಿಗೆ ವಾಹನ ಮಾಲೀಕರು, ಸಣ್ಣ ವ್ಯಾಪಾರಸ್ಥರು, ರೈತರು ಮಹಿಳೆಯರು, ಈಗಾಗಲೇ ಯೋಜನೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕಾಗಿ ಸ್ವಾರ್ಥ ರಾಜಕೀಯಕ್ಕಾಗಿ ಜನರನ್ನು ದಾರಿ ತಪ್ಪಿಸುವುದನ್ನು ಬಿಟ್ಟು ಇದೇ ಉದ್ದಟತನ ,ಮೊಂಡುತನ ಮುಂದುವರೆದರೆ ಜನರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ