October 5, 2024

ಹವಮಾನ ಆಧಾರಿತ ಬೆಳೆವಿಮೆ ಯೋಜನೆಯಡಿಯಲ್ಲಿ ಅಡಿಕೆ, ಕಾಳುಮೆಣಸು ಸೇರಿದಂತೆ ಒಟ್ಟು 11 ಬೆಳೆಗಳಿಗೆ ಪ್ರಿಮಿಯಂ ಮೊತ್ತ ಪಾವತಿಸಲು ತೋಟಗಾರಿಕಾ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕೃಷಿ ಇಲಾಖೆಗೆ ಸಂಬಂಧಿಸಿದ ಭತ್ತ ಸೇರಿದಂತೆ ಇತರೆ ಆಹಾರಧಾನ್ಯಗಳಿಗೆ ಬೆಳೆವಿಮೆ ಪಾವತಿಸಲು ಈಗಾಗಲೇ ಕೃಷಿ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಆದರೆ ಅಡಿಕೆ, ಕಾಳುಮೆಣಸು ಸೇರಿದಂತೆ ಈ ಹಿಂದೆ ಬೆಳೆವಿಮೆ ಪಾವತಿಸಲು ಅವಕಾಶವಿದ್ದ ತೋಟಗಾರಿಕಾ ಬೆಳೆಗಳಿಗೆ ಯಾವುದೇ ಪ್ರಕಟಣೆ ಹೊರಡಿಸದೇ ಇದ್ದುದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು.

ಆದರೆ ನಿನ್ನೆ ಅಂದರೆ ಜುಲೈ 6ರಂದು ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆಯಿಂದ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. 2023-24 ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆಗೆ ಸಂಬಂಧಿಸಿದಂತೆ ಒಟ್ಟು ವಿಮಾ ಮೊತ್ತ ಮತ್ತು ರೈತರು ಪಾವತಿಸಬೇಕಾದ ವಿಮಾ ಕಂತುಗಳ ವಿವರ ಪ್ರಕಟಿಸಿದೆ.

ವಿಮಾ ಕಂತುಗಳನ್ನು ಪಾವತಿ ಮಾಡಲು ಜುಲೈ 15 ಕೊನೆಯ ದಿನಾಂಕವೆಂದು ತಿಳಿದುಬಂದಿದೆ. ರೈತರು ತಮ್ಮ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ, ಬ್ಯಾಂಕುಗಳ ಮೂಲಕ ವಿಮಾಕಂತು ಪಾವತಿಸಬಹುದಾಗಿದೆ.

ತೋಟಗಾರಿಕಾ ಇಲಾಖೆ ಪ್ರಕಟಿಸಿರುವ ಬೆಳೆವಿಮೆ ಮೊತ್ತ ಮತ್ತು ರೈತರು ಪಾವತಿಸಬೇಕಾಗಿ ವಿಮಾಕಂತಿನ ವಿವರ ಈ ಕೆಳಗಿನಂತಿದೆ.

ಐದು ಜಿಲ್ಲೆಗಳಿಗೆ ಮಾತ್ರ ಅನ್ವಯವೇ ?
ಪತ್ರಿಕೆಗೆ ಬಂದಿರುವ ಮಾಹಿತಿಯ ಪ್ರಕಾರ ಸದ್ಯಕ್ಕೆ ಮೇಲಿನ 11 ಬೆಳೆಗಳಿಗೆ ಬೆಳೆವಿಮೆ ಕಟ್ಟಲು ಐದು ಜಿಲ್ಲೆಗಳ ರೈತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅವುಗಳೆಂದರೆ ಕೋಲಾರ, ಹಾಸನ, ತುಮಕೂರು, ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳು.

ಉಳಿದ 25 ಜಿಲ್ಲೆಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಟೆಂಡರ್ ಪೂರ್ಣಗೊಂಡ ನಂತರ ಉಳಿದ ಜಿಲ್ಲೆಗಳ ರೈತರು ವಿಮಾಕಂತು ಕಟ್ಟಲು ಅವಕಾಶ ನೀಡಲಾಗುವುದು ಎಂದು ತಿಳಿದುಬಂದಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ