October 5, 2024

ರಾಜ್ಯ ಸರಕಾರ ಹಿಂದೂಗಳ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ. ಪೊಲೀಸರು ಕೂಡ ಕಾಂಗ್ರೆಸ್‍ನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲವೆಂದು ಕಾಂಗ್ರೆಸ್ ಸರಕಾರ ಅರಿತುಕೊಳ್ಳಬೇಕು. ಹಿಂದೂ ಕಾರ್ಯಕರ್ತರನ್ನು ವಿನಾಕಾರಣ ಕೆಣಕಿದರೆ ಸುಮ್ಮನಿರಲ್ಲ ಎಂದು ಬಿಜೆಪಿ ಯುವ ಮೋರ್ಚ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಂದು ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿ ಎದುರು ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಹಿಂದೂ ಕಾರ್ಯಕರ್ತರ ಮೇಲೆ ದರ್ಪ ತೋರಿದರೆ ಸರ್ಕಾರ ಶಹಬ್ಬಾಸ್ ಗಿರಿ ನೀಡುತ್ತದೆ ಎಂಬ ಭ್ರಮೆಯಲ್ಲಿ ಪೊಲೀಸ್ ಅಧಿಕಾರಿಗಳು ಅನಾವಶ್ಯಕವಾಗಿ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಹಾಸನದಲ್ಲಿ ಇಬ್ಬರು ಮುಸ್ಲಿಂ ಯುವಕರು ಬೈಕ್‍ನಲ್ಲಿ ಪಟ್ಟಣದಲ್ಲಿ ಗನ್ ಪ್ರದರ್ಶಿಸಿ ಸಂಚರಿಸಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸಕಲೇಶಪುರದಲ್ಲಿ ಗರ್ಭದ ಎಮ್ಮೆಗೆ ಗುಂಡಿಟ್ಟು ಹತ್ಯೆಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ.

ಸಕಲೇಶಪುರ ಪ್ರಕರಣಕ್ಕೆ ಸಂಬಂಧವಿಲ್ಲದ ಮೂಡಿಗೆರೆ ಯುವಮೋರ್ಚಾ ತಾಲ್ಲೂಕು ಅಧ್ಯಕ್ಷ ಅವಿನಾಶ್ ಅವರನ್ನು ಠಾಣೆಯಲ್ಲಿ ಕೂರಿಸಿಕೊಂಡು ಮಧ್ಯರಾತ್ರಿ ನಾಡಗೀತೆ, ರಾಷ್ಟ್ರ ಗೀತೆ ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ರಾಷ್ಟ್ರಗೀತೆ ಯಾವ ಸಂದರ್ಭದಲ್ಲಿ ಹೇಳಬೇಕೆಂಬ ಸಾಮಾನ್ಯ ಪ್ರಜ್ಞೆ ಐಪಿಎಸ್ ಅಧಿಕಾರಿಗಿಲ್ಲಂತಾಗಿದೆ ಎಂದ ಅವರು, ಅವಿನಾಶ್ ವಿರುದ್ಧ ಸುಖಾಸುಮ್ಮನೆ ಬಂಧಿಸಿ ಹಲ್ಲೆ ನಡೆಸಿ ಕಾನೂನು ಉಲ್ಲಂಘೆನೆ ಮಾಡಿದ ಡಿವೈಎಸ್‍ಪಿ ಮಿಥುನ್ ವಿರುದ್ಧ ಕ್ರಮ ಕೈಗೊಂಡು 15ದಿನದಲ್ಲಿ ಅಮಾನತ್ತುಗೊಳಿಸದಿದ್ದರೆ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಮಾತನಾಡಿ, ಸಕಲೇಶಪುರದ ಬಜರಂಗದಳದ ಮುಖಂಡ ರಘು ಎಂಬುವರನ್ನು ಹುಡುಕುವ ಸಲುವಾಗಿ ಶನಿವಾರ ರಾತ್ರಿ ಮೂಡಿಗೆರೆ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅವಿನಾಶ್ ಎಂಬುವರ ಮನೆಗೆ ಸಕಲೇಶಪುರದ ಪೊಲೀಸರು ತೆರಳಿ ಅವಿನಾಶ್ ಅವರನ್ನು ವಿನಾಕಾರಣ ಬಂಧಿಸಿದ್ದಾರೆ. ಮೊದಲು ಮೂಡಿಗೆರೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ನಂತರ ಅಲ್ಲಿಂದ ದಾರಿ ತಪ್ಪಿಸಿ ಸಕಲೇಶಪುರ ಠಾಣೆಗೆ ಕರೆದೊಯ್ದು ಮನ ಬಂದಂತೆ ಥಳಿಸಿ, ಅವ್ಯಾಚ್ಯ ಶಬ್ಧದಿಂದ ನಿಂದಿಸಿದ್ದಲ್ಲದೇ ಮೊಬೈಲ್ ಒಡೆದು ಹಾಕಿದ್ದಾರೆ. ಸರಕಾರದಿಂದ ನಮಗೆ ಒತ್ತಡವಿದೆ ಎಂದು ಗೊತ್ತಿಲ್ಲದ ವಿಚಾರವನ್ನು ಒಪ್ಪಿಕೊಳ್ಳುವಂತೆ ಅಮಾಯಕರಿಗೆ ಕಿರುಕುಳ ನೀಡಿರುವ ಪೊಲೀಸರ ಈ ಕ್ರಮ ಸರಿಯಲ್ಲ ಎಂದು ದೂರಿದರು.

ನೂರಾರು ಬಿ.ಜೆ.ಪಿ. ಕಾರ್ಯಕರ್ತರು ಸರಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಬಳಿಕ ತಹಸೀಲ್ದಾರ್ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಪ.ಪಂ. ಸದಸ್ಯರಾದ ಪಿ.ಜಿ. ಅನುಕುಮಾರ್ ಪಟ್ಟದೂರು, ಆಶಾ ಮೋಹನ್, ಮನೋಜ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್, ಮುಖಂಡರಾದ, ಎಂ.ಆರ್. ಜಗದೀಶ್, ವಿ.ಕೆ.ಶಿವೇಗೌಡ, ದೀಪಕ್ ದೊಡ್ಡಯ್ಯ, ಭರತ್ ಬಾಳೂರು, ಮನೋಜ್ ಹಳೆಕೋಟೆ, ಪಂಚಾಕ್ಷರಿ ಹಾಲೂರು, ಪ್ರಸನ್ನ ಮುಗ್ರಳ್ಳಿ, ವಿನೋದ್ ಕಣಚೂರು, ಶಶಿಧರ್ ಜಾವಳಿ, ಕನ್ನಳ್ಳಿ ಭರತ್, ಗಜೇಂದ್ರ ಕೊಟ್ಟಿಗೆಹಾರ, ಸುನಿಲ್ ನಿಡಗೋಡು, ಮಹೇಶ್ ಸಾಲುಮರ, ಧನಿಕ್ ಕೋಡದಿಣ್ಣೆ, ಸಂಜಯ್ ಕೊಟ್ಟಿಗೆಹಾರ, ಚಿರಾಗ್ ಹಾರ್ಮಕ್ಕಿ, ಶಶಿಕರಣ ಮಾಕೋನಹಳ್ಳಿ, ನಯನ ತಳವಾರ, ಪೂರ್ಣೇಶ್ ಚಕ್ಕುಡಿಗೆ,  ರಮೇಶ್ ಕಡಿದಾಳ್ ಮತ್ತಿತರರಿದ್ದರು.

ನಿರಂತರ ಸುದ್ದಿಗಳಿಗೆ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/IkFCXal7O5ODMBHsmKv9ak

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ