October 5, 2024

ಮೂಡಿಗೆರೆ ಜೇಸಿಐ ವತಿಯಿಂದ ಹಮ್ಮಿಕೊಂಡಿದ್ದ ಸ್ನೇಹಕೂಟ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಜೇಸಿಐ ಪೂರ್ವಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಪ್ರತಿಯೊಬ್ಬರಲ್ಲೂ ವ್ಯಕ್ತಿ ವಿಕಾಸನಗೊಳ್ಳಲು ಹಾಗೂ ನಾಯಕತ್ವ ಗುಣ ಹೊಂದಲು ಜೇಸಿಯಂತಹ ಸಂಘಸಂಸ್ಥೆಗಳು ಉತ್ತಮ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತವೆ. ಜೇಸಿ ಸದಸ್ಯರು ಸಮಯ ಪಾಲನೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಅಲ್ಲದೇ ಉಡುಗೆ ತೊಡುಗೆಯಲ್ಲಿ ಶಿಸ್ತು ಪಾಲನೆ ಮಾಡುತ್ತಾರೆ. ಇಂತಹ ಪರಿವರ್ತನೆ ಜೇಸಿಯಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಜೇಸಿ ಇನ್ನಷ್ಟು ಬೆಳವಣಿಗೆಗೊಳ್ಳಲು ಜೂನಿಯರ್ ಜೇಸಿಗಳ ಸಂಖ್ಯೆ ಅಧಿಕಗೊಳಿಸಬೇಕು. ಅಧ್ಯಕ್ಷರುಗಳು ಒಂದು ವರ್ಷದ ಅವಧಿಯಲ್ಲಿ ಉತ್ತಮ ಜನಪರವಾದ ಯೋಜನೆಯನ್ನು ರೂಪಿಸಿಕೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಬೇಕೆಂದು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಶಿಕ್ಷಕ ಗಂಗಾಧರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾನು ಜೇಸಿಗೆ ಸೇರುವ ಮುನ್ನ ಸಾಮಾನ್ಯ ವ್ಯಕ್ತಿಯಾಗಿದ್ದೆ. ಜೇಸಿ ಸೇರಿದ ಬಳಿಕ ತನ್ನಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಹಾಗೂ ಸಾಮಾಜಿಕ ಕಾರ್ಯ ಮಾಡಲು ಸಹಕಾರಿಯಾಯಿತು. ಜೇಸಿಯಲ್ಲಿ ಹಣಕ್ಕಿಂತ ಹೃದಯ ಶ್ರೀಮಂತಿಕೆ ಪರಿಚಯಿಸಿದೆ. ಜೇಸಿಗೆ ನಾವು ಕೊಡುವ ಕೊಡುಗೆಗಿಂತ ಸಾವಿರಪಟ್ಟು ಕೊಡುಗೆ ಜೇಸಿಯಿಂದ ಲಭ್ಯವಾಗಿದೆ. ಒಲ್ಲದ ಮನಸ್ಸಿನಿಂದ ಜೇಸಿಗೆ ಬಂದಿದ್ದ ನಾನು ಇದೀಗ ಒಳ್ಳೆಯ ಮನಸ್ಸಿನಿಂದ ಜೇಸಿಯಿಂದ ಹೊರ ಹೊಮ್ಮಿದ್ದೇನೆ. ಅದಕ್ಕಾಗಿ ತಾನು ಸಂಸ್ಥಗೆ ಚುರಋಣಿ ಎಂದರು.

ಇದೇ ಸಂದರ್ಭದಲ್ಲಿ ಮೂಡಿಗೆರೆ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಆನಂದ ಕಣಚೂರು ಅವರನ್ನು ಗೌರವಿಸಲಾಯಿತು.

ಈ ಬಾರಿಯ ಜೇಸಿ ಸಂಸ್ಥೆ ಗಳಿಸಿದ ಬಹುಮಾನಗಳನ್ನು ಸಭೆಯಲ್ಲಿ ಜೇಸಿ ಅಧ್ಯಕ್ಷೆ ಸವಿತಾ ರವಿ ಪರಿಚಯಿಸಿದರು.

ಜೇಸಿ ಕಾರ್ಯದರ್ಶಿ ಪ್ರದೀಪ್ ಕುನ್ನಹಳ್ಳಿ, ಜೇಸಿ ನಿಕಟಪೂರ್ವ ಅಧ್ಯಕ್ಷೆ ವಿದ್ಯಾರಾಜು, ಮಮತಾ ಗಣೇಶ್, ಅಶ್ವಿನಿ, ಮೇಘ ವಿಕಾಸ್, ಕವಿತಾ ಸಂತೋಷ್, ಹಮೀದ್, ಸುಪ್ರಿತ್, ಚಂದ್ರಶೇಖರ್, ಅತುಲ್‍ರಾವ್, ಟಿ.ಹರೀಶ್, ನಯನಾ ಕಣಚೂರು, ದೀಕ್ಷಿತ್ ಕಣಚೂರು ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ