October 5, 2024

ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದ ಜನರ ಬೇಡಿಕೆಯಾಗಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಇಂದು ಚಾಲನೆ ನೀಡಲಾಗಿದೆ.

ಶನಿವಾರ ಹೊಯ್ಸಳಲು ಗ್ರಾಮದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಘಟಕದಿಂದ ಮೂಡಿಗೆರೆಯಿಂದ ಹೊಯ್ಸಳ ಗ್ರಾಮಕ್ಕೆ ಸಾರಿಗೆ  ಬಸ್ ಮೊದಲ ಸಂಚಾರ ಪ್ರಾರಂಭಿಸಿತು.

ಹಲವು ವರ್ಷಗಳ ಬೇಡಿಕೆ ಈಡೇರಿದ್ದರಿಂದ ಗ್ರಾಮಸ್ಥರಲ್ಲಿ ಇನ್ನಿಲ್ಲದ ಸಂತಸ ಮೂಡಿದೆ. ಈ ಸಂದರ್ಭದಲ್ಲಿ ಹೊಯ್ಸಳಲು ಗ್ರಾಮಸ್ಥ ಯುವ ಮುಖಂಡ ಸುಂದ್ರೇಶ್ ಮಾತನಾಡಿ ; ಹೊಯ್ಸಳಲು ಗ್ರಾಮ ಇತಿಹಾಸ ಪ್ರಸಿದ್ಧವಾದ ಹೊಯ್ಸಳ ಸಾಮ್ಯಾಜ್ಯದವರು ನೆಲೆಸಿದ್ದ ಹೆಮ್ಮೆ ಹೊಂದಿರುವಂತಹುದು, ಇಂತಹ ಇತಿಹಾಸ ಪ್ರಸಿದ್ಧ ಗ್ರಾಮಕ್ಕೆ ಇದುವರೆಗೆ ಸಾರಿಗೆ ಸೌಲಭ್ಯ ಇರಲಿಲ್ಲ.   ಈ ಗ್ರಾಮದಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು 5 ಕಿ,ಮೀ ಕಾಲ್ನಡುಗೆಯಲ್ಲಿ ಚಲಿಸಬೇಕಾಗಿತ್ತು. ಅಲ್ಲದೇ ತುರ್ತು ಪರಿಸ್ಥಿತಿಯಲ್ಲಿ ಆಟೋ ಹಾಗೂ ಖಾಸಗಿ ವಾಹನಗಳ ಮೊರೆ ಹೋಗಬೇಕಿತ್ತು. ಅದಕ್ಕೆ ತೆರೆ ಬಿದ್ದಂತಾಗಿದೆ ಎಂದು ಹೇಳಿದರು.

ಹೊಯ್ಸಳಲು ಗ್ರಾಮಕ್ಕೆ ಪ್ರತಿದಿನ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರೆಲ್ಲರೂ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೇ ಹಿಂದೆ ಇದ್ದ ಶಾಸಕರಿಗೆ ಮನವಿ ಕೂಡ ಮಾಡಲಾಗಿತ್ತು.  ಇದೀಗ ಶಾಸಕಿ ನಯನಾ ಮೋಟಮ್ಮ ಅವರ ಗಮನಕ್ಕೆ ತಂದ ಬಳಿಕ ತಮ್ಮ ಬೇಡಿಕೆಗೆ ಸ್ಪಂಧಿಸಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಗ್ರಾಮದಲ್ಲಿ ಬಸ್ ಸಂಚಾರ ಕಾಣದಿದ್ದ ಜನರಲ್ಲಿ ಈಗ ಸಂಭ್ರಮದ ವಾತಾವರಣ ಉಂಟಾಗಿದೆ ಎಂದು ಹೇಳಿದರು.

ಕೆಎಸ್‍ಆರ್‍ಟಿಸಿ ಡಿಪೋ ಮ್ಯಾನೇಜರ್ ಸೋಮಶೇಖರ್, ಶ್ರೀನಿವಾಸ್, ಗ್ರಾಮಸ್ಥರಾದ ರುದ್ರೇಗೌಡ, ಸುಧಾಕರಗೌಡ ವಿಶ್ವಮಿತ್ರಗೌಡ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೀಕ್ಷಿತ್, ಚಂದನ್, ಸಂತೋಷ್, ಪೂರ್ಣೇಶ್, ಪುನೀತ್, ಇಂದ್ರೇಶ್, ಮಂಜುನಾಥ್, ಮಹೇಂದ್ರ, ಗಿರೀಶ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ