October 5, 2024

ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಹಣ ಕೊಡದಿದ್ದರೆ ಸಾರ್ವಜಿನಿಕರ ಯಾವುದೇ ಕೆಲಸ ಆಗುತ್ತಿಲ್ಲ. ಮಾಹಿತಿ ಹಕ್ಕಿನಡಿಯಲ್ಲಿ ದಾಖಲೆ ಕೋರಿ ಅರ್ಜಿ ಸಲ್ಲಿಸಿದರೂ ಉತ್ತರ ನೀಡುವುದಿಲ್ಲವೆಂದು ಪಟ್ಟಣದ ಸನ್ನಧಿ ಲೇಔಟ್‍ನ ನಿವಾಸಿ, ಮಾಜಿ ಯೋಧ ಗೋವಿಂದಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಪಟ್ಟಣದ ಸನ್ನಿಧಿ ಲೇಔಟ್‍ನಲ್ಲಿ ವಾಸವಾಗಿದ್ದು, ಈ ಲೇಯೌಟ್ ನಲ್ಲಿ ಒಟ್ಟು 204 ನಿವೇಶನಗಳಿವೆ. ಆ ಭಾಗದ ನಿವಾಸಿಗಳೂ ಇ-ಸ್ವತ್ತು ಮಾಡಿಸಲು ಅರ್ಜಿ ಸಲ್ಲಿಸಿದರೆ ಸರಕಾರದ ನಿಯಮದಂತೆ 100 ರೂ ಶುಲ್ಕ ಪಾವತಿಸಿಕೊಂಡು ಇ ಸ್ವತ್ತು ಮಾಡಿಕೊಡಬೇಕಿದೆ. ಆದರೆ ಪ.ಪಂ. ಅಧಿಕಾರಿಗಳು 5 ಸಾವಿರ ಹಣ ಬೇಡಿಕೆ ಇಡುತ್ತಿದ್ದರಿಂದ ಇದನ್ನು ಸನ್ನಿಧಿ ಲೇಔಟ್‍ನ ನಿವಾಸಿಗಳು ವಿರೋಧಿಸಿದ್ದರು. ಈ ಹಿನ್ನಲೆಯಲ್ಲಿ ಪ.ಪಂ.ಯಲ್ಲಿ ಸಭೆ ನಡೆಸಿ ಇ ಸ್ವತ್ತುಗೆ 100 ರೂ, ಜಿಪಿಎಸ್‍ಗೆ 1400 ರೂ ನೀಡವಂತೆ ನಮಗೆ ನೋಟೀಸು ನೀಡಿದ್ದರು. ಅದನ್ನೂ ವಿರೋಧಿಸಿದ್ದರಿಂದ ಪ.ಪಂ. ಸದಸ್ಯರ ಉಸ್ತುವಾರಿಯಿಂದ ಈಗ ಕೇವಲ 100 ರೂ ಕಟ್ಟಿಸಿಕೊಂಡು ಇ ಸ್ವತ್ತು ಮಾಡಿಕೊಟ್ಟಿದ್ದಾರೆ. ಒಂದು ವೇಳೆ ನಾವು ವಿರೋಧ ಮಾಡದಿದ್ದರೆ ಹೆಚ್ಚುವರಿ ಹಣ ಯಾರ ಪಾಲಾಗುತ್ತಿತ್ತು ಎಂದು ಪ್ರಶ್ನಿಸಿದರು.

ತಾನು ಇ ಸ್ವತ್ತಿನ ಬಗ್ಗೆ ಸರಕಾರದ ನಿಯಮ ತಿಳಿದುಕೊಳ್ಳಲು, ಇ ಸ್ವತ್ತಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದ ಪ್ರತಿ. ಮತ್ತು ಮೂಡಿಗೆರೆ ಪಟ್ಟಣ ಪಂಚಾಯಿತಿ ಇ.ಸೊತ್ತಿನ ಬಾಬ್ತು ಬ್ಯಾಂಕಿಗೆ ಪಾವತಿ ಮಾಡಿರುವ ಹಣ ಸಂದಾಯದ ರಶೀದಿಯ ನಕಲು ಪ್ರತಿ ಕೇಳಿ ಪ.ಪಂ.ಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದೆ. ಅದಕ್ಕೆ ಉತ್ತರವೇ ನೀಡುತ್ತಿಲ್ಲ.

ಈ ಬಗ್ಗೆ ಮೇಲಾಧಿಕಾರಿಗಳು ಸೇರಿದಂತೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೂ ಕೂಡ ಪತ್ರ ಬರೆದಿದ್ದೆ. ಈ ಹಿನ್ನಲೆಯಲ್ಲಿ ಜನವರಿ ತಿಂಗಳಲ್ಲಿ ಸಿಎಂ ಮತ್ತು ಪಿಎಂ ಕಚೇರಿಯಿಂದ ಮೂಡಿಗೆರೆ ಪ.ಪಂ. ಅಧಿಕಾರಿಗಳಿಗೆ ಮೇಲ್ ಮೂಲಕ ಅರ್ಜಿದಾರರಿಗೆ 7 ದಿನದಲ್ಲಿ ಉತ್ತರ ನೀಡಬೇಕೆಂದು ಸೂಚನೆ ನೀಡಲಾಗಿತ್ತು. ಆದರೆ ಇದೂವರೆಗೂ ಉತ್ತರ ನೀಡಿಲ್ಲ.

ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಹಣ ಕೊಡದಿದ್ದರೆ ಸಾರ್ವಜನಿಕರ ಯಾವ ಕೆಲಸವೂ ಆಗುವುದಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಸಾರ್ವಜನಿಕರನ್ನು ಸತಾಯಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ