October 5, 2024

ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದ ಬಿ.ಯು.ದೀಕ್ಷಿತ್ ಪಟೇಲ್ ಅವರು ಸಿ.ಇ.ಟಿ, ಐಐಟಿ, ಎನ್.ಐ.ಟಿ ಯಂತಹ ಉನ್ನತ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಅಮೋಘ ಸಾಧನೆ ಮಾಡಿದ್ದಾರೆ.

ಸಿಇಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 33 ನೇ Rank, ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ ರಾಜ್ಯಕ್ಕೆ 20ನೇ Rank ಪಡೆದಿದ್ದಾರೆ.

ಜೊತೆಗೆ ರಾಷ್ಟ್ರಮಟ್ಟದ ಜೆಇಇ ಪರೀಕ್ಷೆ ಎದುರಿಸಿದ್ದ ದೀಕ್ಷಿತ್ JEE Common Rank List ನಲ್ಲಿ 2878 ನೇ Rank, ಮತ್ತು ಓಬಿಸಿ ವಿಭಾಗದಲ್ಲಿ 543ನೇ Rank ಪಡೆದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ(NIT)ಗೆ ಅರ್ಹತೆ ಪಡೆದಿದ್ದಾರೆ. ಅಲ್ಲದೇ JEE Advance Common Rank List ನಲ್ಲಿ 1311ನೇ Rank, ಓಬಿಸಿ ವಿಭಾಗದಲ್ಲಿ 225ನೇ Rank ಪಡೆದು Indian Institute of Technology (IIT) ಅರ್ಹತೆ ಪಡೆದಿದ್ದಾರೆ.

ದೀಕ್ಷಿತ್ ಪಟೇಲ್ ಮೂಡಿಗೆರೆ ತಾಲ್ಲೂಕಿನ ಬೈರಾಪುರ ಗ್ರಾಮದ ಹಾಲಿ ಮೂಡಿಗೆರೆ ಬಿಳಗುಳದಲ್ಲಿ ವಾಸವಾಗಿರುವ ಬಿ.ಡಿ.ಉದಯಕುಮಾರ್ ಹಾಗೂ ಎಂ.ಕೆ.ಕಾಮಾಕ್ಷಿ ಅವರ ಪುತ್ರರಾಗಿದ್ದಾರೆ.

ಬಾಳೆಹೊನ್ನೂರು ನವೋದಯ ವಿದ್ಯಾಲಯದಲ್ಲಿ ಪಿ.ಯು.ಸಿ.ವರೆಗೆ ವ್ಯಾಸಂಗ ಮಾಡಿದ್ದ ದೀಕ್ಷಿತ್ ನವೋದಯ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಭಾರತಕ್ಕೆ ಮೊದಲ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದರು.

ಸಿ.ಇ.ಟಿ ಯಲ್ಲಿ ಉನ್ನತ ರ್ಯಾಂಕ್ ಪಡೆದಿದ್ದರೂ ಸಹ ಅವರು ಐಐಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿಷ್ಟಿತ ಐಐಟಿಯಲ್ಲೇ ವ್ಯಾಸಂಗ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದ ದೀಕ್ಷಿತ್ ಆ ಗುರಿಯನ್ನು ಸಾಧಿಸಿದ್ದು ಈಗ ಹೈದರಾಬಾದ್ ಐಐಟಿಯಲ್ಲಿ ಕಂಪ್ಯೂಟರ್ ಅಥವಾ ಅರ್ಟಿಫಿಸಿಯಲ್ ಇಂಟಲಿಜೆನ್ಸಿ ವಿಷಯ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡುವ ಇರಾದೆ ಹೊಂದಿದ್ದಾರೆ.

ದೀಕೀತ್ ಪಟೇಲ್ ಅವರ ಸಹೋದರಿ ದಿವ್ಯ ಪಟೇಲ್ ಅವರು ಸಹ ಪ್ರತಿಭಾನ್ವಿತೆಯಾಗಿದ್ದು, ಗದಗದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ)ಯಲ್ಲಿ ಪ್ರಥಮ ರ್ಯಾಂಕ್ ಪಡೆದು ಸಾಧನೆ ಮಾಡಿರುತ್ತಾರೆ.

ಗ್ರಾಮೀಣ ಪ್ರದೇಶದ ಸಾಮಾನ್ಯ ಕೃಷಿಕ ಕುಟುಂಬದ ದೀಕ್ಷಿತ್ ಪಟೇಲ್ ಮತ್ತು ದಿವ್ಯ ಪಟೇಲ್ ಸತತ ಪರಿಶ್ರಮ ಮತ್ತು ಉನ್ನತ ಧ್ಯೇಯದೊಂದಿಗೆ ತನ್ನ ಗುರಿಸಾಧನೆ ಮಾಡಿರುತ್ತಾರೆ. ಅವರಿಗೆ ಪತ್ರಿಕಾ ಬಳಗ ಮತ್ತು ಓದುಗರ ಪರವಾಗಿ ಶುಭಾಶಯಗಳು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ