October 6, 2024

ಮೂಡಿಗೆರೆ ರೋಟರಿ ಸಂಸ್ಥೆಯ ವತಿಯಿಂದ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೆಜು ಮತ್ತು ಪ್ರೌಢಶಾಲಾ ವಿಭಾಗಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಗಿದೆ.

ಅಂದಾಜು ಅರವತ್ತು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಈ ಘಟಕವನ್ನು ಇತ್ತೀಚೆಗೆ ಕಾಲೇಜಿಗೆ ಹಸ್ತಾಂತರಿಸಲಾಗಿದೆ. ಇದರ ಸಾಮರ್ಥ್ಯ ಗಂಟೆಗೆ 30 ಲೀಟರ್ ಶುದ್ಧೀಕರಿಸಿ ಕೊಡುತ್ತದೆ.

ದಿ.ಅರುಣೇಗೌಡ,ಅರಮನೆ ತಲಗೂರು ನೆನಪಿನಲ್ಲಿ ಅವರ ಪುತ್ರ ಅಭಿಜಿತ್,  ದಿ.ಜಯರಾಂ ಅಡ್ಯಂತಾಯ ಅವರ ಸವಿನೆನಪಿನಲ್ಲಿ ಪತ್ನಿ ಮುಕ್ತಮಣಿ ಹಾಗೂ ಸೊಸೆ ಪ್ರಣತಿ ಹಾಗೂ ಅಬಕಾರಿ ಇಲಾಖೆ ಮೂಡಿಗೆರೆ ವಲಯ ಇವರುಗಳು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತಗುಲುವ ವೆಚ್ಚವನ್ನು ನೀಡಿ ಸಹಕರಿಸಿದ್ದಾರೆ ಎಂದು ಮೂಡಿಗೆರೆ ರೋಟರಿ ಅಧ್ಯಕ್ಷ ಪ್ರದೀಪ್ ದುಂಡುಗ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಪ್ರದೀಪ್ ದುಂಡಗ, ಕಾರ್ಯದರ್ಶಿ ವರುಣ್, ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಡಿ.ಎಸ್. ರವಿ, ಎನ್.ಎನ್ .ಪ್ರಸನ್ನ, ವಿವೇಕ್ ಪೂಣ್ಯಮೂರ್ತಿ, ಪ್ರಸಾದ್,ಹೆಚ್.ಎನ್ ವಿನೋದ್ ಕುಮಾರ್ ಶೆಟ್ಟಿ, ಕೆ.ಎಲ್.ಎಸ್. ತೇಜಸ್ವಿ, ಡಾ:ಜೀವನ್ ಕಲಾಮೆ, ಹಳೇಮೂಡಿಗೆರೆ ಗ್ರಾಮಪಂಚಾಯಿತಿಯ  ಆಧ್ಯಕ್ಷರಾದ ಎಸ್.ಕೆ.ರವಿ., ಸತೀಶ್ ಸುಂಕಸಾಲೆ ಮತ್ತು ಕಾಲೇಜಿನ ಪ್ರಾಚಾರ್ಯರು ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ