October 5, 2024

ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಸರ್ ನಿಂದ ವಿಷಾನೀಲ ಸೋರಿಕೆಯಾಗಿ ಯುವಕ ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟವರನ್ನು ವಿವಾಹದ ಹೊಸ್ತಿಲಲ್ಲಿ ಇದ್ದ ಭಾವಿ ದಂಪತಿಗಳು ಚಂದ್ರಶೇಖರ್(30 ವರ್ಷ), ಸುಧಾರಾಣಿ (22ವರ್ಷ) ಎಂದು ತಿಳಿದುಬಂದಿದೆ.

ಇವರಿಬ್ಬರು ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸಕ್ಕಿದ್ದರು ಮತ್ತು ಇಬ್ಬರು ಪ್ರೀತಿಸಿ ವಿವಾಹಗವಾಗಲು ನಿಶ್ಚಯಿಸಿ ಒಟ್ಟಿಗೆ ವಾಸಿಸುತ್ತಿದ್ದರು.

ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದವರು ಸ್ನಾನಕ್ಕೆ ತೆರಳಿದ್ದಾಗ ಗ್ಯಾಸ್ ಗೀಸರ್ ನಿಂದ ಸೋರಿಕೆಯಾದ ಕಾರ್ಬನ್ ಮೋನಾಕ್ಸೈಡ್ ಅನಿಲದಿಂದ ಉಸಿರುಗಟ್ಟಿ ಸ್ನಾನದ ಕೊಠಡಿಯಲ್ಲೇ ಇಬ್ಬರು ಉಸಿರು ಚೆಲ್ಲಿದ್ದಾರೆ.

ಮರುದಿನ ಅವರು ಕೆಲಸಕ್ಕೆ ಬಾರದೇ ಇದ್ದಾಗ ಹೋಟೆಲ್ ಸಿಬ್ಬಂದಿಗಳು ಅವರ ಮೊಬೈಲ್ ಗೆ ಕರೆ ಮಾಡಿದ್ದು ಇಬ್ಬರ ಮೊಬೈಲ್ ರಿಂಗಾಗುತ್ತಿದ್ದರು ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಮನೆಯ ಬಳಿ ಹೋಗಿ ನೋಡಿದಾಗ ಮನೆಯೊಳಗೆ ಮೊಬೈಲ್ ಗಳು ರಿಂಗಾಗುತ್ತಿದ್ದವು. ನಂತರ ಬಾಗಿಲು ಒಡೆದು ಒಳಹೋಗಿ ನೋಡಿದಾಗ ಇಬ್ಬರು ಸ್ನಾನದ ಕೊಠಡಿಯಲ್ಲಿ ಮೃತಪಟ್ಟಿದ್ದರು.

ಇವರು ಸ್ನಾನದ ಕೊಠಡಿಯೊಳಗೆ ಗ್ಯಾಸ್ ಗೀಸರ್ ಅಳವಡಿಸಿದ್ದರು ಎನ್ನಲಾಗಿದೆ. ಜೊತೆಗೆ ಕೊಠಡಿಯೊಳಗೆ ಸರಿಯಾಗಿ ಗಾಳಿಯಾಡಲು ಅವಕಾಶವಿರಲಿಲ್ಲ ಎನ್ನಲಾಗಿದೆ. ಬಹುಶಃ ಹೆಚ್ಚು ಹೊತ್ತು ಗ್ಯಾಸ್ ಗೀಸರ್ ಉರಿಸಿದ್ದು ಗ್ಯಾಸ್ ಉರಿದ ನಂತರ ಬಿಡುಗಡೆಯಾಗುವ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಅದು ಹೊರಹೋಗಲು ಅವಕಾಶವಾಗದೇ ಕೊಠಡಿಯೊಳಗೆ ಸಂಗ್ರಹವಾಗಿದ್ದು ಅದು ಇವರಿಬ್ಬರನ್ನು ಉಸಿರುಗಟ್ಟುವಂತೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಒಟ್ಟಾರೆ ವಿವಾಹವಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದ ಯುವ ಜೋಡಿ ಅಜಾಗರೂಕತೆಯಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಗ್ಯಾಸ್ ಗೀಸರ್ ಬಗ್ಗೆ ಎಚ್ಚರವಿರಬೇಕು : ಬಹುತೇಕರು ಸ್ನಾನದ ಬಿಸಿನೀರಿಗಾಗಿ ಗ್ಯಾಸ್ ಗೀಸರ್ ಬಳಸುತ್ತಾರೆ. ಗ್ಯಾಸ್ ಗೀಸರ್ ಅಳವಡಿಸುವಾಗ ಗ್ಯಾಸ್ ಸಿಲಿಂಡರ್ ಮತ್ತು ಗೀಸರ್ ಸ್ನಾನದ ಗೃಹದಿಂದ ಹೊರಗಡೆಯೇ ಅಳವಡಿಸಬೇಕು.

ಗ್ಯಾಸ್ ಗೀಸರ್ ಉರಿಸಿದಾಗ ಕಾರ್ಬನ್ ಡೈಆಕ್ಸೈಡ್ ಮತ್ತು ಕಾರ್ಬನ್ ಮೋನಾಕ್ಸೈಡ್ ಅನಿಲಗಳು ಉತ್ಪತ್ತಿಯಾಗುತ್ತವೆ. ಬಣ್ಣ, ರುಚಿ ಮತ್ತು ವಾಸನೆ ಇಲ್ಲದ ಕಾರ್ಬನ್ ಮೋನಾಕ್ಸೈಡ್ ವಿಷಕಾರಿ ಅನಿಲವಾಗಿದ್ದು ಅದು ದೇಹದೊಳಗೆ ಪ್ರವೇಶಿಸಿದರೆ ಕೆಲ ಕ್ಷಣಗಳಲ್ಲಿಯೇ ನಮ್ಮ ಉಸಿರಾಟವನ್ನು ಸ್ಥಗಿತಗೊಳಿಸುತ್ತದೆ. ಹಾಗಾಗಿ ಗ್ಯಾಸ್ ಗೀಸರ್ ಅಳವಡಿಸಿದ ಕೊಠಡಿಯಲ್ಲಿ ಸಾಕಷ್ಟು ಗಾಳಿಯಾಡುವಂತೆ ಇರಬೇಕು.

ಗ್ಯಾಸ್ ಗೀಸರ್ ಬಳಕೆಯಿಂದ ಉಸಿರುಗಟ್ಟಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಆಗಾಗಿ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚು ಎಚ್ಚರದಿಂದಿರಬೇಕು. ಗ್ಯಾಸ್ ಮೂಲಕ ಅಡಿಗೆ ಮಾಡುವ ಕೊಠಡಿಗಳಲ್ಲಿಯೂ ಚೆನ್ನಾಗಿ ಗಾಳಿಯಾಡುವಂತಿರಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ