October 5, 2024

ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಸ್ವಾಮೀಜಿಯೊಬ್ಬರಿಗೆ 37 ಲಕ್ಷಕ್ಕೆ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಸ್ವತಃ ಸ್ವಾಮೀಜಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು ಸಮೀಪದ ನೆಲಮಂಗಲದ ಕಂಬಾಳು ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿಗೆ ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಲಕ್ಷಾಂತರ ರುಪಾಯಿ ವಂಚನೆ ಮಾಡಿದ್ದಾಳೆ. ಈ ಬಗ್ಗೆ ಸ್ವಾಮೀಜಿ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದಾರೆ.

2020ರಲ್ಲಿ ಶಿವಾಚಾರ್ಯ ಸ್ವಾಮೀಜಿಗೆ ವರ್ಷಾ ಎಂಬ ಹೆಸರಿನ ಫೆಸ್ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅವರನ್ನು ಸ್ವಾಮೀಜಿ ಫ್ರೆಂಡ್ ಮಾಡಿಕೊಂಡಿದ್ದರು. ಅಧ್ಯಾತ್ಮದಲ್ಲಿ ಆಸಕ್ತಿ ಇದೆ ಎನ್ನುತ್ತಾ ಯುವತಿಯು ಸ್ವಾಮೀಜಿಯೊಂದಿಗೆ ಚಾಚ್ ಮಾಡುತ್ತಿದ್ದಳು. ಸ್ವಾಮೀಜಿಯ ಮೊಬೈಲ್ ನಂಬರ್ ಪಡೆದದ್ದಲ್ಲದೇ ತನ್ನ ನಂಬರನ್ನು ನೀಡಿದ್ದಳು ಎಂದು ದೂರಿನಲ್ಲಿ ವಿವರಸಿದ್ದಾರೆ.

ಮೊಬೈಲ್ ನಂಬರ್ ಪಡೆದ ನಂತರ ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಿದ್ದ ಯುವತಿ ತಾನೊಬ್ಬ ಅನಾಥೆ ಎಂದು ಹೇಳಿಕೊಂಡಿದ್ದಳು. ವಿಡಿಯೋ ಕಾಲ್ ಮಾಡುತ್ತಿದ್ದ ಯುವತಿ ಎಂದಿಗೂ ಮುಖ ತೋರಿಸಿರಲಿಲ್ಲ. ಕೈಕಾಲುಗಳನ್ನು ಮಾತ್ರ ತೋರಿಸಿ ಮಾತನಾಡುತ್ತಿದ್ದಳು. ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡುತ್ತಿರುವುದಾಗಿ ಹೇಳಿದ್ದ ಯುವತಿ ಮೊದಲಿಗೆ 2 ಲಕ್ಷ ರೂ. ನನ್ನಿಂದ ಪಡೆದುಕೊಂಡಿದ್ದಳು. ತನ್ನ ಹೆಸರಿನಲ್ಲಿರುವ ಜಮೀನನ್ನು ಮಠದ ಹೆಸರಿಗೆ ಬರೆದುಕೊಡುವುದಾಗಿ ಹೇಳಿ ಹಂತಹಂತವಾಗಿ ಹೆಚ್ಚುವರಿಯಾಗಿ 35 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಳು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಜಮೀನಿನ ದಾಖಲೆ ತರುವ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ. ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದೇನೆ. ಎಂದು ಹೇಳಿ ಆಸ್ಪತ್ರೆಯ ಬಿಲ್ ಪಾವತಿಗಾಗಿ ಹಣ ಕಳುಹಿಸುವಂತೆ ಕೇಳಿದ್ದಳು. ಅನುಮಾನಗೊಂಡು ಸ್ವಾಮೀಜಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಪರಿಚಯಸ್ಥರೊಬ್ಬರನ್ನು ಕಳಿಸಿ ವಿಚಾರಿಸಿದಾಗ ವರ್ಷಾ ಎಂಬುವರು ಯಾರೂ ದಾಖಲಾಗಿಲ್ಲ ಎಂದು ತಿಳಿಯಿತು.

ಆ ಬಳಿಕ ವರ್ಷಾ ಸ್ನೇಹಿತೆ ಎಂದು ಹೇಳಿಕೊಂಡು ಮಂಜುಳಾ ಎಂಬಾಕೆ ಕರೆ ಮಾಡಿ 55 ಲಕ್ಷ ಸಾಲ ಮಾಡಿ ವರ್ಷಾಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದೇವೆ. ಆ ಸಾಲವನ್ನು ತೀರಿಸಬೇಕು, ನೀವು ಹಣ ನೀಡದಿದ್ದರೆ ವರ್ಷಾ ಜೊತೆಗಿನ ಸಲುಗೆಯ ವಿಷಯವನ್ನು ಎಲ್ಲರಗೂ ಹೇಳಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿದ್ದಾಳೆ. ವರ್ಷಾ ಕಡೆಯವರು ಎನ್ನಲಾದ ಮಂಜುಳಾ ಮತ್ತು ಇತರರು ಮೇ 23 ರಂದು ಮಠಕ್ಕೆ ಹೋಗಿ 55 ಲಕ್ಷ ರೂ. ಕೊಡುವಂತೆ ಗಲಾಟೆ ಮಾಡಿದ್ದಾರೆ. ಆ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತು ಸ್ವಾಮೀಜಿ ಪೊಲೀಸ್ ಠಾಣೆ ದೂರು ನೀಡಿದ್ದಾರೆ.

ಇದೇ ರೀತಿ ಅಪರಿಚಿತರು ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯ ಮಾಡಿಕೊಂಡು ನಂತರ ಸಲುಗೆ ಬೆಳೆಸಿ ಮೋಸಮಾಡುವ, ಬ್ಲಾಕ್ ಮೇಲ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕಾಗಿದೆ.

ನಿರಂತರ ಸುದ್ದಿ ಹಾಗೂ ಉಪಯುಕ್ತ ಮಾಹಿತಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/IkFCXal7O5ODMBHsmKv9ak

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ