October 5, 2024

ಕಳಸ ತಾಲ್ಲೂಕಿನ ಗ್ರಾಮಸ್ಥರ ಆರಾಧ್ಯ ದೈವವಾದ ಕಳಸೇಶ್ವರ ಸ್ವಾಮಿ ಮತ್ತು ಪರಿವಾರ ದೇವರುಗಳು ಜೀರ್ಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಜೂನ್ 7 ರಿಂದ 9 ರವರೆಗೆ ನಡೆಯಲಿದೆ.

ಜೂನ್ 7ರಂದು ಗಿರಿಜಾಂಭ ದೇವರ ಸನ್ನಿಧಿಯಲ್ಲಿ ಜೀರ್ಣ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನೆರವೇರಲಿದೆ.

ಜೂನ್ 8ರಂದು ಆನೆ ವಿಘ್ನೇಶ್ವರಸ್ವಾಮಿ ಮತ್ತು ಸರ್ವಾಂಗ ಸುಂದರಿ ಅಮ್ಮನ ಸನ್ನಿಧಿಯಲ್ಲಿ ಅಷ್ಟಬಂಧ ಕುಂಭಾಭಿಷೇಕ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.

ಜೂನ್ 9 ರಂದು ಬೆಳಿಗ್ಗೆ 11:55 ಕ್ಕೆ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಸ್ವಾಮೀಜಿಗಳು  ಕಳಸೇಶ್ವರ ಸ್ವಾಮಿ ಮತ್ತು ಪರಿವಾರ ದೇವತೆ ಅಷ್ಟಬಂಧ ಮತ್ತು ಬ್ರಹ್ಮಕುಂಭಾಭಿಷೇಕ ನೆರವೇರಿಸಲಿದ್ದಾರೆ. 12:30 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಲಿದ್ದಾರೆ. ಹೊರನಾಡು ಧಮಕರ್ತರಾದ ಜಿ.ಭೀಮೇಶ್ವರ ಜೋಷಿ,  ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ , ಶಾಸಕಿ ನಯನ ಮೋಟಮ್ಮ, ವಿಧಾನಪರಿಷತ್ ಉಪಸಭಾಪತಿ ಎಮ್.ಕೆ. ಪ್ರಾಣೇಶ್, ವಿಧಾನಪರಿಷತ್ತ್ ಸದಸ್ಯ ಎಸ್.ಎಲ್. ಭೋಜೆಗೌಡ, ಭಾಗವಹಿಸಲಿದ್ದಾರೆ.

ಅಂದು ಸಂಜೆ ಓಂ ನಮ: ಶಿವಾಯಎಂಬ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಜೂನ್ 7 ರಂದು ಸಂಜೆ 6 ರ ವರೆಗೆ ದೇವಸ್ಥಾನಕ್ಕೆ ಹಸಿರು ಕಾಣಿಕೆ ಅರ್ಪಿಸಲು ಅವಕಾಶವಿದೆ. ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ ತಿಳಿಸಿದ್ದಾರೆ.

ಜಾವಳಿ : ವಿಜೃಂಭಣೆಯಿಂದ ನಡೆದ ಮಹಾಗಣಪತಿ ಸ್ವಾಮಿ ಹಾಗೂ ನಾಗದೇವರ ಅಷ್ಟಬಂಧ ಪುನರ್ ಪ್ರತಿಷ್ಠಾಪನೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ