October 5, 2024

ಕಾಂಗ್ರೇಸ್ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಮೊದಲನೆ ಗ್ಯಾರಂಟಿ ಗೃಹಜ್ಯೋತಿ ಯೋಜನೆ. ಈ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿ ಮನೆಗೆ 200ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೇಸ್ ಪಕ್ಷ ಹೇಳಿತ್ತು. ಅದರಂತೆ ಇಂದು ಇದರ ಅನುಷ್ಟಾನದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಇನ್ನು 200 ಯೂನಿಟ್ ಕರೆಂಟ್ ವಿದ್ಯುತ್ ಉಚಿತ ಎಂದು ಭಾವಿಸಿ ಮುಂದೆ ಯರ್ರಾಬಿರ್ರಿ ವಿದ್ಯುತ್ ಬಳಸಬಹುದು ಎಂದು ಕನಸು ಕಂಡವರಿಗೆ ಸರ್ಕಾರ ಶಾಕ್ ನೀಡಿದೆ.

ಉಚಿತ ವಿದ್ಯುತ್ ನೀಡುವ ಮಾನದಂಡವನ್ನು ಸರ್ಕಾರ ಸ್ಪಷ್ಟಪಡಿಸಿದ್ದು, ರಾಜ್ಯದ ಎಲ್ಲಾ ಮನೆಗಳಿಗೆ ಗರಿಷ್ಟ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಆದರೆ ಆ ಮನೆಯಲ್ಲಿ ಕಳೆದ 12 ತಿಂಗಳಲ್ಲಿ ಬಳಸಿದ ವಿದ್ಯುತ್ ನ ಸರಾಸರಿ ಲೆಕ್ಕಹಾಕಿ ಅದಕ್ಕಿಂತ ಶೇಕಡಾ 10 ರವರೆಗೆ ಹೆಚ್ಚು ವಿದ್ಯುತ್ ಬಳಸಿದ್ದರೆ ಅಂತಹವರು ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆಯಿಲ್ಲ.

ಉದಾಹರಣೆಗೆ ಸೋಮಣ್ಣ ಎನ್ನುವವರು ತಮ್ಮ ಮನೆಗೆ ಕಳೆದ 12 ತಿಂಗಳಲ್ಲಿ ಬಳಸಿರುವ ವಿದ್ಯುತ್ 52, 64, 61, 58, 55, 60, 63, 67, 59, 60, 57, 64 ಯೂನಿಟ್ ಆಗಿರುತ್ತದೆ ಎಂದು ಇಟ್ಟುಕೊಳ್ಳೋಣ. ಅಂದರೆ ಅವರು ಕಳೆದ 12 ತಿಂಗಳಲ್ಲಿ ಒಟ್ಟು 720 ಯೂನಿಟ್ ಬಳಸಿರುತ್ತಾರೆ. ಅದನ್ನು 12ರಿಂದ ಭಾಗಿಸಿದರೆ ಅವರು ಕಳೆದ ಒಂದು ವರ್ಷದಲ್ಲಿ ಬಳಸಿದ ಸರಾಸರಿ ವಿದ್ಯುತ್ 60 ಯೂನಿಟ್ ಆಗುತ್ತದೆ. ಅದರ ಮೇಲೆ 10 ಪರ್ಸೆಂಟ್ ಹೆಚ್ಚು ಎಂದರೆ 66 ಯೂನಿಟ್.

ಅಂದರೆ ಮುಂದಿನ ತಿಂಗಳು ಸೋಮಣ್ಣ ಅವರು ಬಳಸಿದ ವಿದ್ಯುತ್ 66 ಯೂನಿಟ್ ಒಳಗೆ ಇದ್ದರೆ ಅವರು ಬಿಲ್ ಕಟ್ಟಬೇಕಾಗಿಲ್ಲ. ಒಂದು ವೇಳೆ ಅವರು 66 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದ್ದರೆ ಅವರು ಸಂಪೂರ್ಣ ಬಿಲ್ ಮೊತ್ತವನ್ನು ಕಟ್ಟಬೇಕಾಗುತ್ತದೆ.

ಬೀಮಣ್ಣ ಎಂಬುವವರ ಮನೆಗೆ ಕಳೆದ 12 ತಿಂಗಳಲ್ಲಿ ಸರಾಸರಿ 170 ಯೂನಿಟ್ ವಿದ್ಯುತ್ ಬಳಸಿದ್ದಾರೆ ಎಂದಿಟ್ಟುಕೊಂಡರೆ, ಅದರ ಮೇಲೆ 10 ಪರ್ಸೆಂಟ್ ಹೆಚ್ಚು ಎಂದರೆ 187. ಅಂದರೆ ಬೀಮಣ್ಣ ಮುಂದಿನ ತಿಂಗಳು 187 ಯೂನಿಟ್ ಒಳಗೆ ವಿದ್ಯುತ್ ಬಳಸಿದ್ದರೆ ಅವರು ವಿದ್ಯುತ್ ಬಿಲ್ ಕಟ್ಟಬೇಕಾಗಿಲ್ಲ. ಅವರು 187 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದ್ದರೆ ಸಂಪೂರ್ಣ ಬಿಲ್ ಕಟ್ಟಬೇಕಾಗುತ್ತದೆ.

ಹಾಗಾಗಿ 200ಯೂನಿಟ್ ಉಚಿತ ಎಂಬ ಭ್ರಮೆಯಲ್ಲಿ ಮುಂದಿನ ತಿಂಗಳಿಂದ ಬೇಕಾಬಿಟ್ಟಿ ವಿದ್ಯುತ್ ಬಳಸಿದರೆ ಉಚಿತ ಭಾಗ್ಯ ಸಿಗುವುದಿಲ್ಲ. ಉಚಿತ ವಿದ್ಯುತ್ ಭಾಗ್ಯ ಸಿಗಬೇಕೆಂದರೆ ಹೆಚ್ಚೆಂದರೆ ಹಿಂದಿನಕ್ಕಿಂತ 10 ಪರ್ಸೆಂಟ್ ಹೆಚ್ಚು ವಿದ್ಯುತ್ ಬಳಸಬಹುದಷ್ಟೇ.

ಇನ್ನು ಈ ಯೋಜನೆಯ ಬಗ್ಗೆ ಸಾಕಷ್ಟು ಸಂಶಯಗಳಿವೆ. ಇದು ಕೇವಲ ಗೃಹಬಳಕೆಗೆ ಮಾತ್ರ ಸೀಮಿತಾನ ? ಇದು ಕೇವಲ ಬಳಸಿದ ವಿದ್ಯುತ್ ಗೆ ಮಾತ್ರ ಅನ್ವಯನ ಅಥವಾ ತಿಂಗಳ ನಿಗದಿತ ಮೊತ್ತವೂ ಉಚಿತದಡಿ ಸೇರುತ್ತದಾ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ.

ಬಾಡಿಗೆ ಮನೆಯವರಿಗೆ ಇದು ಹೇಗೆ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿಗೆ ಒಂದು ಆರ್.ಆರ್. ನಂಬರ್ ಗೆ ಮಾತ್ರ ಇದು ಅನ್ವಯವಾಗುತ್ತಾ ಆಥವಾ ಒಂದಕ್ಕಿಂತ ಹೆಚ್ಚು ಆರ್.ಆರ್. ನಂಬರ್ ಇದ್ದವರಿಗೂ ಉಚಿತವಾಗಿ ನೀಡಲಾಗುತ್ತದಾ ಹೀಗೆ ಅನೇಕ ಗೊಂದಲಗಳಿದ್ದು, ಇದನ್ನು ಅನುಷ್ಠಾನಕ್ಕೆ ತಂದಮೇಲಷ್ಟೇ ಇವೆಲ್ಲ ಗೊಂದಲಗಳಿಗೆ ಉತ್ತರ ಸಿಗಲಿದೆ.

ಮುಖ್ಯಮಂತ್ರಿಗಳು ಹೇಳಿರುವ ಪ್ರಕಾರ ಈ ಯೋಜನೆ ಜುಲೈ 1ರಿಂದ ಜಾರಿಗೆ ಬರಲಿದ್ದು, ಜುಲೈ 1 ರ ನಂತರ ಬಳಸಿದ ವಿದ್ಯುತ್ ಗಷ್ಟೇ ಉಚಿತ ಯೋಜನೆ ಅನ್ವಯವಾಗುತ್ತದೆ. ಹಳೆಯ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವವರು ಅದನ್ನು ತಾವೇ ಕಟ್ಟಬೇಕು. ಅಂದರೆ ಜೂನ್ 30ರ ವರೆಗೆ ಬಳಸಿದ ವಿದ್ಯುತ್ ಬಿಲ್ ಮೊತ್ತವನ್ನು ಗ್ರಾಹಕರೇ ಕಟ್ಟಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ