October 5, 2024

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯದ ನೂತನ ಸರ್ಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ಇಂದು ಅಸ್ತಿತ್ವಕ್ಕೆ ಬಂದಿದೆ.

ಇಂದು ನೂತನವಾಗಿ 24 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ, ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಒಟ್ಟು 34 ಮಂದಿಯ ಪೂರ್ಣ ಸಚಿವ ಸಂಪುಟ ಇಂದಿನಿಂದ ಕಾರ್ಯಚಟುವಟಿಕೆ ಪ್ರಾರಂಭಿಸಿದೆ.

ಮೊನ್ನೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೊಂದಿಗೆ 8 ಮಂದಿ ಸಚಿವರು ಸಂಪುಟ ಸೇರಿದ್ದರು.

ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 24 ನೂತನ ಸಚಿವರಿಗೆ ಮಾನ್ಯ ರಾಜ್ಯಪಾಲರು ಪದಗ್ರಹಣ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋದಿಸಿದರು.

ಅನುಭವಿ ಮತ್ತು ಹೊಸ ಮುಖಗಳ ಸಮ್ಮಿಶ್ರಣದ ನೂತನ ಸಚಿವ ಸಂಪುಟದ ಎಲ್ಲಾ ಸಚಿವರಿಗೇ ಇಂದೇ ಖಾತೆಗಳನ್ನು ಸಹ ಹಂಚಿಕೆ ಮಾಡಲಾಗಿದೆ.

ಹಿಂದೆಯೆಲ್ಲಾ ಸಚಿವ ಸಂಪುಟದಲ್ಲಿ ಎರಡು ಮೂರು ಸ್ಥಾನಗಳನ್ನು ಖಾಲಿ ಇರಿಸುವ ಮೂಲಕ ಸಚಿವ ಸ್ಥಾನ ವಂಚಿತರಲ್ಲಿ ಆಶಾಭಾವನೆಯನ್ನು ಜೀವಂತವಾಗಿರಿಸುವ ತಂತ್ರ ಅನುಸರಿಸಲಾಗುತ್ತಿತ್ತು. ಆದರೆ ಈ ಬಾರಿ ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ಅಸ್ತಿತ್ವಕ್ಕೆ ತರಲಾಗಿದೆ.

ರಾಜ್ಯದ ನೂತನ ಸಚಿವರ ಮತ್ತು ಖಾತೆಗಳ ವಿವರ ಕೆಳಗಿನಂತಿದೆ.

  1. ಸಿಎಂ ಸಿದ್ದರಾಮಯ್ಯ — ಹಣಕಾಸು, ಆಡಳಿತ ಸುಧಾರಣೆ , ವಾರ್ತಾ ಇಲಾಖೆ ಹಾಗೂ ಹಂಚಿಕೆ ಮಾಡದಿರುವ ಇತರೆ ಖಾತೆಗಳು
  2. ಡಿಸಿಎಂ ಡಿ.ಕೆ.ಶಿವಕುಮಾರ್ — ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ (ಬಿಡಿಎ, ಬಿಬಿಎಂಪಿ.. ಇತ್ಯಾದಿ)
  3. ಡಾ.ಜಿ ಪರಮೇಶ್ವರ — ಗೃಹ ಖಾತೆ
  4. ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
  5. ಕೆ.ಹೆಚ್.ಮುನಿಯಪ್ಪ — ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
  6. ಕೆ.ಜೆ.ಜಾರ್ಜ್ — ಇಂಧನ
  7. ಜಮೀರ್ ಅಹ್ಮದ್ — ವಸತಿ ಮತ್ತು ವಕ್ಫ್
  8. ರಾಮಲಿಂಗಾರೆಡ್ಡಿ — ಸಾರಿಗೆ
  9. ಸತೀಶ ಜಾರಕಿಹೊಳಿ — ಲೋಕೋಪಯೋಗಿ
  10. ಪ್ರಿಯಾಂಕ್ ಖರ್ಗೆ — ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ
  11. ಹೆಚ್.ಕೆ.ಪಾಟೀಲ್ — ಕಾನೂನು ಮತ್ತು ಸಂಸದೀಯ ವ್ಯವಹಾರ
  12. ಕೃಷ್ಣ ಭೈರೇಗೌಡ — ಕಂದಾಯ
  13. ಚೆಲುವರಾಯಸ್ವಾಮಿ — ಕೃಷಿ
  14. ಕೆ.ವೆಂಕಟೇಶ್ – ಪಶುಸಂಗೋಪನೆ ಮತ್ತು ರೇಷ್ಮೆ
  15. ಡಾ.ಮಹದೇವಪ್ಪ — ಸಮಾಜ ಕಲ್ಯಾಣ
  16. ಈಶ್ವರ ಖಂಡ್ರೆ — ಅರಣ್ಯ
  17. ಕೆ.ಎನ್. ರಾಜಣ್ಣ — ಸಹಕಾರ
  18. ದಿನೇಶ್ ಗುಂಡೂರಾವ್ — ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  19. ಶರಣ ಬಸಪ್ಪ ದರ್ಶನಾಪೂರ — ಸಣ್ಣ ಕೈಗಾರಿಕೆ
  20. ಶಿವಾನಂದ ಪಾಟೀಲ್ — ಜವಳಿ ಮತ್ತು ಸಕ್ಕರೆ
  21. ಆರ್.ಬಿ.ತಿಮ್ಮಾಪುರ — ಅಬಕಾರಿ ಮತ್ತು ಮುಜರಾಯಿ
  22. ಎಸ್.ಎಸ್.ಮಲ್ಲಿಕಾರ್ಜುನ — ಗಣಿಗಾರಿಕೆ ಮತ್ತು ತೋಟಗಾರಿಕೆ
  23. ಶಿವರಾಜ ತಂಗಡಗಿ– – ಹಿಂದುಳಿದ ವರ್ಗಗಳ ಕಲ್ಯಾಣ
  24. ಡಾ.ಶರಣ ಪ್ರಕಾಶ್ ಪಾಟೀಲ್ — ಉನ್ನತ ಶಿಕ್ಷಣ
  25. ಮಂಕಾಳೆ ವೈದ್ಯ — ಮೀನುಗಾರಿಕೆ
  26. ಲಕ್ಷ್ಮಿ ಹೆಬ್ಬಾಳ್ಕರ್ — ಮಹಿಳಾ ಮತ್ತು ಮಕ್ಕಳ ಕಲ್ಯಾಣ
  27. ರಹೀಂ ಖಾನ್ — ಪೌರಾಡಳಿತ
  28. ಡಿ.ಸುಧಾಕರ್ — ಯೋಜನೆ ಮತ್ತು ಸಾಂಖಿಕ ಇಲಾಖೆ
  29. ಸಂತೋಷ್ ಲಾಡ್ — ಕಾರ್ಮಿಕ
  30. ಭೋಸರಾಜ್ — ಸಣ್ಣ ನೀರಾವರಿ
  31. ಭೈರತಿ ಸುರೇಶ್ — ನಗರಾಭಿವೃದ್ಧಿ
  32. ಮಧು ಬಂಗಾರಪ್ಪ — ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  33. ಡಾ. ಎಂಸಿ ಸುಧಾಕರ್ — ವೈದ್ಯಕೀಯ ಶಿಕ್ಷಣ
  34. ಬಿ.ನಾಗೇಂದ್ರ — ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ