October 5, 2024

ರಾಜ್ಯದಲ್ಲಿ ಅನದಿಕೃತವಾಗಿ ಸಾಗುವಳಿ ಮಾಡಿರುವ ಸರ್ಕಾರಿ ಭೂಮಿಯನ್ನು ರೈತರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ವಿದೇಯಕದ ಬಗ್ಗೆ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಮೇ 18 ರಂದು ಹೊರಡಿಸಿರುವ ವಿಶೇಷ ರಾಜ್ಯ ಪತ್ರದಲ್ಲಿ ಈ ಕಾಯ್ದೆಯ ನಿಯಮವಳಿಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ.

ರಾಜ್ಯದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಕಾಫಿ ಸೇರಿದಂತೆ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ಪ್ರದೇಶದಲ್ಲಿ ರೈತರಿಗೆ ಆ ಭೂಮಿಯನ್ನು 30 ವರ್ಷಗಳ ಕಾಲಕ್ಕೆ ಗುತ್ತಿಗೆ ನೀಡುವ ಕಾಯ್ದೆ ಈ ಹಿಂದಿನ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿತ್ತು. ಇದೀಗ ಈ ಕಾಯ್ದೆಯ ರೂಪುರೇಷೆಗಳು, ನಿಬಂಧನೆಗಳ ಬಗ್ಗೆ ಸರ್ಕಾರ ತನ್ನ ರಾಜ್ಯಪತ್ರದಲ್ಲಿ ವಿವರಗಳನ್ನು ಪ್ರಕಟಿಸಿದೆ.

ಈ ವಿಶೇಷ ರಾಜ್ಯಪತ್ರದಲ್ಲಿನ ಅಂಶಗಳನ್ನು ದರ್ಪಣ ಪತ್ರಿಕೆಯ ಪರವಾಗಿ ಅಧ್ಯಯನ ನಡೆಸಿ ರೈತರ ಮಾಹಿತಿಗಾಗಿ

ಮುಖ್ಯ ಆಂಶಗಳನ್ನು ಕ್ರೂಢೀಕರಿಸಿ ಇಲ್ಲಿ ನೀಡಲಾಗಿದೆ.

1. ಗುತ್ತಿಗೆ ನೀಡುವ ಭೂಮಿಯನ್ನು ಜನವರಿ 2005ರ ಹಿಂದಿನಿಂದ ಒತ್ತುವರಿ ಮಾಡಿ ಸಾಗುವಳಿ ಮಾಡಿದ್ದಾಗಿರಬೇಕು.
2. ಒಂದು ಕುಟುಂಬಕ್ಕೆ ಗರಿಷ್ಟ 25 ಎಕರೆ ಭೂಮಿಯನ್ನು ಗುತ್ತಿಗೆ ನೀಡಲು ಮಾತ್ರ ಅವಕಾಶ
3. 25 ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿದ್ದರೆ ಅಂತಹ ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ನಂತರವಷ್ಟೇ ಗುತ್ತಿಗೆ ಕರಾರು ಮಾಡಿಕೊಳ್ಳಲಾಗುತ್ತದೆ.
4. ಗುತ್ತಿಗೆ ಅವಧಿ ಗರಿಷ್ಠ 30 ವರ್ಷಗಳು, ಈ ಅವಧಿಯಲ್ಲಿ ಗುತ್ತಿಗೆ ಪಡೆದ ವ್ಯಕ್ತಿ ಮರಣ ಹೊಂದಿದರೆ ಸೆಕ್ಷನ್ 94-ಇ ಪ್ರಕಾರ ಅವರ ಕುಟುಂಬದ ಸದಸ್ಯರಿಗೆ ಉಳಿದ ಅವಧಿಗೆ ಗುತ್ತಿಗೆ ಕರಾರು ಹಸ್ತಾಂತರಿಸಲಾಗುವುದು.
5. ಗುತ್ತಿಗೆ ಪಡೆದ ಭೂಮಿಯನ್ನು ಬೇರೆಯವರಿಗೆ ಉಪಗುತ್ತಿಗೆ ನೀಡಲು ಅಥವಾ ಭೂಪರಿವರ್ತನೆ ಮಾಡಲು ಅವಕಾಶವಿಲ್ಲ,
6. ಗುತ್ತಿಗೆ ನೀಡುವಾಗ ಜಮೀನಿನಲ್ಲಿ ಇರುವ ಮರಗಳು ಸರ್ಕಾರದ ಸ್ವತ್ತಾಗಿರುತ್ತವೆ ಆ ಮರಗಳನ್ನು ಗುತ್ತಿಗೆ ಪಡೆದವರು ರಕ್ಷಣೆ ಮಾಡಬೇಕು.
7. ಮೀಸಲು ಅರಣ್ಯ ಕಾಯ್ದೆಯಡಿ ಬರುವ ಭೂಮಿಯನ್ನು ಗುತ್ತಿಗೆ ನೀಡಲು ಅವಕಾಶವಿಲ್ಲ.
8. ಗುತ್ತಿಗೆ ಪಡೆದ ಭೂಮಿಯನ್ನು ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯಲು ಮಾತ್ರ ಬಳಸಬೇಕು, ಅನ್ಯ ಉದ್ದೇಶಗಳಿಗೆ ಬಳಸುವಂತಿಲ್ಲ.
9. ಗುತ್ತಿಗೆ ಪಡೆದ ಭೂಮಿಯನ್ನು ಅಡಮಾನ ಮಾಡಿ ರಾಜ್ಯ ಸರ್ಕಾರ, ಶೆಡ್ಯುಲ್ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಗಳಲ್ಲಿ ಬೆಳೆಸಾಲವನ್ನು ಮಾತ್ರ ಪಡೆಯಲು ಅವಕಾಶವಿದೆ. ಬೆಳೆಸಾಲ ಹೊರತುಪಡಿಸಿ ಯಾವುದೇ ಅನ್ಯ ಉದ್ದೇಶಕ್ಕೆ ಅಡಮಾನ ಮಾಡಿ ಸಾಲ ಪಡೆಯಲು ಅವಕಾಶವಿಲ್ಲ.

30 ವರ್ಷದ ಪೂರ್ಣ ಶುಲ್ಕವನ್ನು ಗುತ್ತಿಗೆ ಕರಾರು ಮಾಡಿಕೊಳ್ಳುವಾಗ ಆರಂಭದಲ್ಲಿಯೇ ಒಟ್ಟಿಗೆ ಕಟ್ಟಬೇಕು

10. ಗುತ್ತಿಗೆ ಭೂಮಿಗೆ  ಸರ್ಕಾರಕ್ಕೆ ಪಾವತಿಸಬೇಕಾದ ವಾರ್ಷಿಕ ಶುಲ್ಕದ ವಿವರ ಈ ಕೆಳಗಿನಂತಿದೆ.
1 ಎಕರೆ ವರೆಗೆ : ವಾರ್ಷಿಕ ಎಕರೆಗೆ ರೂ. 1000-00
1 ರಿಂದ 5 ಎಕರೆ ವರೆಗೆ : ವಾರ್ಷಿಕ ಎಕರೆಗೆ ರೂ.1500-00
5 ರಿಂದ 10 ಎಕರೆ : ವಾರ್ಷಿಕ ಎಕರೆಗೆ ರೂ. 2000-00
10 ರಿಂದ 15 ಎಕರೆ : ವಾರ್ಷಿಕ ಎಕರೆಗೆ ರೂ. 2500-00
15 ರಿಂದ 20 ಎಕರೆ : ವಾರ್ಷಿಕ ಎಕರೆಗೆ ರೂ. 3000-00
20 ರಿಂದ 25 ಎಕರೆ : ವಾರ್ಷಿಕ ಎಕರೆಗೆ ರೂ. 3500-00

ಗುತ್ತಿಗೆ ಪಡೆಯಲು ಇಚ್ಚಿಸುವ ರೈತರು ರಾಜ್ಯ ಪತ್ರ ಪ್ರಕಟಣೆಯ 3 ತಿಂಗಳ ಒಳಗಾಗಿ ಆಯಾ ತಾಲ್ಲೂಕಿನ ತಹಸೀಲ್ದಾರ್ ರವರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

ತಹಸೀಲ್ದಾರ್ ರವರು ಅರ್ಜಿ ಪರಿಶೀಲನೆ ನಡೆಸಿ ಅಗತ್ಯವಾದರೆ ಸ್ಥಳಪರಿಶೀಲನೆ ನಡೆಸಿ ಅರ್ಹ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಕಳುಹಿಸಿಕೊಡಬೇಕು.

ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಜಿ ನೀಡಿದ ಮೂರು ತಿಂಗಳ ಒಳಗಾಗಿ ಅರ್ಜಿ ಪುರಸ್ಕರಿಸಿ ಅಥವಾ ತಿರಸ್ಕರಿಸಿ ಆದೇಶ ನೀಡಬೇಕು.

ಜಿಲ್ಲಾಧಿಕಾರಿಗಳಿಂದ ಪುರಸ್ಕರಿಸಲ್ಪಟ್ಟ ಅರ್ಜಿ ಪುನಃ ತಹಸೀಲ್ದಾರ್ ಕಛೇರಿಗೆ ಬರಲಿದ್ದು, ತಹಸೀಲ್ದಾರ್ ನಿಗದಿತ ಶುಲ್ಕ ಪಾವತಿಸಿಕೊಂಡು ಗುತ್ತಿಗೆ ಕರಾರು ಪತ್ರವನ್ನು ಅರ್ಜಿದಾರರಿಗೆ ನೀಡುವುದು.

ಇದಿಷ್ಟು ಹೊಸ ಗುತ್ತಿಗೆ ನೀತಿಯ ಮುಖ್ಯ ಅಂಶಗಳಾಗಿದ್ದು, ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಸಾಗುವಳಿ ಮಾಡಿದ್ದು, ಮೇಲಿನ ನಿಯಮಾವಳಿಗೆ ಒಳಪಟ್ಟು ಅದನ್ನು ಗುತ್ತಿಗೆ ಪಡೆಯಲು ಇಚ್ಚಿಸುವವರು ಮೂರು ತಿಂಗಳ ಒಳಗಾಗಿ ಆಯಾ ತಾಲೂಕಿನ ತಹಸೀಲ್ದಾರ್ ರವರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ