October 5, 2024

ದುಬಾರಿ ಇಂಧನ ಬೆಲೆ ಪರಿಣಾಮ ಸದ್ಯ ಎಲೆಕ್ಟ್ರಿಕ್ ಬೈಕ್, ಕಾರು, ಆಟೊಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಕರ್ನಾಟಕ ರಾಜ್ಯ ಸರಕಾರ ಸರಕಾರಿ ಸಾರಿಗೆ ವ್ಯವಸ್ಥೆಯಲ್ಲೂ ಎಲೆಕ್ಟ್ರಿಕ್ ಬಸ್‍ಗಳನ್ನು ಪರಿಚಯಿಸಲಾರಂಭಿಸುವ ಮೂಲಕ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡುತ್ತಿದೆ. ಇದುವರೆಗೂ ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಸೀಮಿತವಾಗಿದ್ದ ಎಲೆಕ್ಟ್ರಿಕ್ ಬಸ್‍ಗಳು ಸದ್ಯ ನಮ್ಮ ಚಿಕ್ಕಮಗಳೂರಿಗೂ ಪರಿಚಯಿಸಲ್ಪಟ್ಟಿವೆ.

ಮೇ 19ರಿಂದ ಬೆಂಗಳೂರು-ಚಿಕ್ಕಮಗಳೂರು ನಗರಗಳ ನಡುವೆ ಕೆಎಸ್ಸಾರ್ಟಿಸಿ ಸಂಸ್ಥೆಯ 6 ಎಲೆಕ್ಟ್ರಿಕ್ ಬಸ್‍ಗಳ ಸೇವೆ ಸದ್ದಿಲ್ಲದೇ ಆರಂಭವಾಗಿದೆ.

ಪೆಟ್ರೋಲ್, ಡೀಸೆಲ್ ಬೈಕ್, ಕಾರು ಹಾಗೂ ಆಟೊಗಳ ಜಾಗವನ್ನು ಎಲೆಕ್ಟ್ರಿಕ್ ಬೈಕ್ ಕಾರು ಮತ್ತು ಆಟೊಗಳು ಆವರಿಸಿಕೊಳ್ಳುತ್ತಿವೆ. ಭವಿಷ್ಯದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ದರ್ಬಾರು ಆರಂಭವಾಗಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ರಾಜ್ಯ ಸರಕಾರ ಸರಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಬೆಂಗಳೂರಿಗೆ ಸೀಮಿತವಾಗಿ ಎಲೆಕ್ಟ್ರಿಕ್ ಬಸ್‍ಗಳನ್ನು ಈಗಾಗಲೇ ಪರಿಚಯಿಸಿತ್ತು. ಅದನ್ನು ವಿಸ್ತರಿಸಿ ಸದ್ಯ ರಾಜ್ಯ ಅಂತರ್ ಜಿಲ್ಲೆಗಳ ನಡುವೆಯೂ ಎಲೆಕ್ಟ್ರಿಕ್ ಬಸ್‍ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಬೆಂಗಳೂರು-ಚಿಕ್ಕಮಗಳೂರು ನಗರಗಳ ನಡುವೆ 6 ಸರಕಾರಿ ಎಲೆಕ್ಟ್ರಿಕ್ ಸಾರಿಗೆ ಬಸ್‍ಗಳ ಸೇವೆಗೆ ಚಾಲನೆ ನೀಡಿದೆ.  ಮೇ 19ರಿಂದ ಈ ಎರಡು ನಗರಗಳ ನಡುವೆ 6 ಎಲೆಕ್ಟ್ರಿಕ್ ಸಾರಿಗೆ ಬಸ್‍ಗಳು ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಈ ಹಿಂದೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ವೋಲ್ವೋ ಬಸ್‍ಗಳು ಸಂಚಾರ ನಡೆಸುತ್ತಿದ್ದವು. ವೋಲ್ವೋ ಬಸ್‍ಗಳ ಬದಲಾಗಿ ಸದ್ಯ ‘ಇವಿ ಪವರ್ ಪ್ಲಸ್’ ಎಂಬ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‍ಗಳು ಸಂಚಾರ ಆರಂಭಿಸಿವೆ. ಚಿಕ್ಕಮಗಳೂರು -ಬೆಂಗಳೂರು ಪ್ರಯಾಣಿಕರೊಂದಿಗೆ ಈ ಬಸ್‍ಗಳು ಹಾಸನ-ಬೇಲೂರು ಪ್ರಯಾಣಿಕರಿಗೂ ಸೇವೆ ಒದಗಿಸುತ್ತಿವೆ.

ವೋಲ್ವೋ ಬಸ್‍ನಂತೆ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಸರಕಾರಿ ಎಲೆಕ್ಟ್ರಿಕ್ ಬಸ್‍ಗಳು ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ಬೆಂಗಳೂರಿನಿಂದ ನಿತ್ಯ ಬೆಳಗ್ಗೆ 5ರಿಂದ ಸಂಚಾರ ಆರಂಭಿಸುವ 6 ಎಲೆಕ್ಟ್ರಿಕ್ ಬಸ್‍ಗಳು ರಾತ್ರಿ 12ಗಂಟೆಯವರೆಗೂ  ಸೇವೆ ನೀಡಲಿವೆ.

ಬೆಂಗಳೂರು-ಚಿಕ್ಕಮಗಳೂರು ನಡುವೆ ಸಂಚಾರ ಸೇವೆ ನೀಡುತ್ತಿರುವ ಈ ಎಲೆಕ್ಟ್ರಿಕ್ ಬಸ್‍ಗಳ ಬ್ಯಾಟರಿ ಚಾರ್ಚ್‍ಗಾಗಿ ನಗರದ ಕೆಎಸ್ಸಾರ್ಟಿಸಿ ಬಸ್ ಡಿಪೋದ ಆವರಣದಲ್ಲಿ ಎರಡು ಚಾರ್ಜರ್ ಘಟಕಗಳನ್ನು ಸ್ಥಾಪಿಸಲಾಗಿದೆ. ಏಕಕಾಲದಲ್ಲಿ ಎರಡು ಬಸ್‍ಗಳ ಬ್ಯಾಟರಿಯನ್ನು ಈ ಘಟಕಗಳು ಚಾರ್ಜ್ ಮಾಡಬಹುದಾಗಿದೆ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಲು ಎರಡು ಗಂಟೆಗಳ ಕಾಲಾವಕಾಶ ಬೇಕಾಗಿದ್ದು, ಒಮ್ಮೆ ಚಾರ್ಜ್ ಮಾಡಿದಲ್ಲಿ 300 ಕಿ.ಮೀ. ಸಾಗುವ ಸಾಮಥ್ರ್ಯವನ್ನು ಈ ಎಲೆಕ್ಟ್ರಿಕ್ ಬಸ್‍ಗಳು ಹೊಂದಿವೆ.

ಸುಖಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಈ ಬಸ್‍ಗಳಲ್ಲಿ ಎಸಿ, ಪುಶ್‍ಬ್ಯಾಕ್ ಸೀಟರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಸ್‍ನ ಒಳಬದಿ ಮತ್ತು ಹಿಂಬದಿಯಲ್ಲಿ ಸಿಸಿ ಕ್ಯಾಮಾರವನ್ನು ಅಳವಡಿಸಲಾಗಿದೆ. ಬಸ್‍ನಲ್ಲಿ ಎರಡು ಟಿವಿ ಸೇರಿದಂತೆ ಮೊಬೈಲ್ ಚಾರ್ಜರ್ ವ್ಯವಸ್ಥೆಯನ್ನು ಪ್ರತೀ ಆಸನದಲ್ಲಿ ಕಲ್ಪಿಸಲಾಗಿದೆ. ಶಬ್ಧರಹಿತವಾಗಿರುವ ಈ ಬಸ್‍ಗಳು ನಾನ್‍ಸ್ಟಾಪ್ ಪ್ರಯಾಣಕ್ಕೆ ಹೇಳಿ ಮಾಡಿಸಿದ ಬಸ್ ಆಗಿದೆ. ಪ್ರತೀ ಬಸ್ ತಲಾ 43 ಸೀಟ್‍ಗಳ ಸಾಮಥ್ರ್ಯ ಹೊಂದಿವೆ.

ಕಾಫಿನಾಡಿನಿಂದ ಬೆಂಗಳೂರಿಗೆ ಎಲೆಕ್ಟ್ರಿಕ್ ಬಸ್ ವ್ಯವಸ್ಥೆಯನ್ನು ಕಲ್ಪಿಸಿರುವುದು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಲ್ಲಿ ಸಂತೋಷವನ್ನುಂಟು ಮಾಡಿದೆ.

ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/IkFCXal7O5ODMBHsmKv9ak

ಮೂಡಿಗೆರೆ : ಬಿರುಗಾಳಿ ಸಹಿತ ಬಾರೀ ಮಳೆ- ಸ್ಕೂಟಿ ಮೇಲೆ ಮರಬಿದ್ದು ವ್ಯಕ್ತಿ ಸಾವು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ