October 5, 2024

ನೀರಿನಲ್ಲಿ ಮುಳುಗಿ ಸರಣಿ ಸಾವುಗಳು ಸಂಭವಿಸುತ್ತಿವೆ. ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಪ್ರತಿದಿನ ನೀರಿನಲ್ಲಿ ಮುಳುಗಿ ಯುವಕರು ಸಾವನ್ನಪ್ಪುತ್ತಿರುವ ಘಟನೆ ನಡೆಯುತ್ತಿದೆ.

ಇದೀಗ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಭದ್ರಾ ಬಲದಂಡೆ ಕಾಲುವೆಯ ನೀರಿನಲ್ಲಿ ಮುಳುಗಿ ಮೂವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇಂದು ಬೆಳಿಗ್ಗೆ ಈ ದುರ್ಘಟನೆ ನಡೆದಿದೆ. ಲಕ್ಕವಳ್ಳಿ ಭದ್ರಾ ಡ್ಯಾಂ ಬಲದಂಡೆ ಕಾಲುವೆಯ ಸಮೀಪ ವಿಹಾರಕ್ಕೆ ಬಂದಾಗ ಈ ದುರ್ಘಟನೆ ನಡೆದಿದೆ.

ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ನಿವಾಸಿ ರವಿ (31ವರ್ಷ), ಶಿವಮೊಗ್ಗ ಮೂಲದ ಶಾಮವೇಣಿ(16ವರ್ಷ), ನಂಜನಗೂಡು ಮೂಲದ ಅನನ್ಯ (17 ವರ್ಷ) ಮೃತ ದುರ್ದೈವಿಗಳು.

ಅನನ್ಯ ಮತ್ತು ಶಾಮವೇಣಿ ರವಿ ಅವರ ಅಕ್ಕನ ಮಕ್ಕಳು ಎಂದು ತಿಳಿದುಬಂದಿದೆ. ಸಂಬಂಧಿಗಳ ಮನೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ.

ಭದ್ರಾ ಕಾಲುವೆಯಲ್ಲಿ ಆಟವಾಡುತ್ತಿರುವಾಗ ಆಯಾತಪ್ಪಿ ನೀರಿಗೆ ಬಿದ್ದಿದ್ದು, ಒಬ್ಬರನ್ನು ರಕ್ಷಿಸಲು ಒಬ್ಬರು ಮುಂದಾಗಿ ಮೂವರೂ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಅನನ್ಯ ಅವರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಗಳಿಗೆ ಹುಡುಕಾಟ ನಡೆಸಲಾಗುತ್ತಿದೆ.

ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂಡಿಗೆರೆ : ಬಿರುಗಾಳಿ ಸಹಿತ ಬಾರೀ ಮಳೆ- ಸ್ಕೂಟಿ ಮೇಲೆ ಮರಬಿದ್ದು ವ್ಯಕ್ತಿ ಸಾವು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ