October 5, 2024

ಭಾರತೀಯ ರಿಸರ್ವ್ ಬ್ಯಾಂಕ್ ರೂ. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ.

ಇಂದು ಮಹತ್ವದ ನಿರ್ಧಾರ ಪ್ರಕಟಿಸಿರುವ ಆರ್.ಬಿ.ಐ.ಈ ಬಗ್ಗೆ ದೇಶದ ಎಲ್ಲಾ ಬ್ಯಾಂಕುಗಳಿಗೆ ಆದೇಶ ಹೊರಡಿಸಿದ್ದು ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಗ್ರಾಹಕರಿಗೆ ನೀಡದಂತೆ ನಿರ್ದೇಶನ ನೀಡಿದೆ.

ಎರಡು ಸಾವಿರ ಮುಖಬೆಲೆಯ ನೋಟುಗಳಿಗೆ ಸೆಪ್ಟಂಬರ್ 30ರ ವರೆಗೆ ಮಾತ್ರ ಕಾನೂನು ಮಾನ್ಯತೆ ಇದ್ದು, ಆ ನಂತರ ಅವುಗಳು ತಮ್ಮ ಬೆಲೆಯನ್ನು ಕಳೆದುಕೊಳ್ಳಲಿವೆ.

ಸಾರ್ವಜನಿಕರ ಬಳಿ ಇರುವ 2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್.ಬಿ.ಐ. ಅವಕಾಶ ನೀಡಿದೆ. ಮೇ 23ರಿಂದ ಸೆಪ್ಟಂಬರ್ 30 ರವರೆಗೆ ರೂ. 2000 ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳು ಸ್ವೀಕರಿಸಲಿದ್ದು, ಒಮ್ಮೆ ಗರಿಷ್ಠ 20 ಸಾವಿರ ಹಣವನ್ನು ಮಾತ್ರ ಖಾತೆಗಳಿಗೆ ಜಮಾ ಮಾಡುವುದು ಅಥವಾ ಬೇರೆ ನೋಟುಗಳೊಂದಿಗೆ ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಕ್ಟೋಬರ್ 1, 2023ರಿಂದ ರೂ. 2000 ಮುಖಬೆಲೆಯ ನೋಟುಗಳು ತಮ್ಮ ಮಾನ್ಯತೆಯನ್ನು ಕಳೆದುಕೊಳ್ಳಲಿವೆ.

2016ರ ನವೆಂಬರ್ ನಲ್ಲಿ ದೇಶದಲ್ಲಿ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತರ ರೂ. 2000 ಮುಖಬೆಲೆಯ ನೋಟುಗಳನ್ನು ದೇಶದಲ್ಲಿ ಚಲಾವಣೆಗೆ ತರಲಾಗಿತ್ತು. ಇದೀಗ ಆರ್.ಬಿ.ಐ. ರೂ. 2000 ಮುಖಬೆಲೆಯ ನೋಟುಗಳನ್ನು ಸಹ ಹಿಂದೆಗೆದುಕೊಂಡಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ