October 5, 2024

ಮೂಡಿಗೆರೆ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಗೆಲುವಾಗಿದೆ. ಮಂಗಳವಾರ ರೈತಭವನದಲ್ಲಿ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ.ಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಕೆ. ಶಿವೇಗೌಡ ಗೋಣಿಬೀಡು ಅಧ್ಯಕ್ಷರಾಗಿ, ಉತ್ತಮ್ ಕುಮಾರ್ ಹಂತೂರು ಇವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಓ.ಜಿ. ರವಿ ಮತ್ತು ಉಪಾಧ್ಯಕ್ಷರಾಗಿದ್ದ ಉತ್ತಮ್ ಕುಮಾರ್ ಒಪ್ಪಂದದಂತೆ ಕ್ರಮವಾಗಿ ವಿ.ಕೆ.ಶಿವೇಗೌಡ ಮತ್ತು ಸಂದರ್ಶ ಅವರಿಗೆ ತಮ್ಮ ಸ್ಥಾನಗಳನ್ನು ಬಿಟ್ಟುಕೊಡಲು ರಾಜೀನಾಮೇ ನೀಡಿದ್ದರು.

ಮೂಡಿಗೆರೆ ಟಿ.ಎ.ಪಿ.ಸಿ.ಎಂ.ಎಸ್. ನಲ್ಲಿ ನಾಮಿನಿ ಸದಸ್ಯರು ಸೇರಿದಂತೆ ಬಿ.ಜೆ.ಪಿ.ಗೆ ಬಹುಮತವಿತ್ತು. ಆದರೆ ಮೊನ್ನಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಒಟ್ಟಾಗಿ ಬಿ.ಜೆ.ಪಿ.ಗಿಂತ ಹೆಚ್ಚಿನ ಬಲ ಹೊಂದಿದ್ದರಿಂದ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲು ತೀರ್ಮಾನಿಸಿದ್ದರು.

ಅದರಂತೆ ಮಂಗಳವಾರ ಚುನಾವಣೆ ನಡೆದಿತ್ತು. ಕಾಂಗ್ರೇಸ್-ಜೆ.ಡಿ.ಎಸ್. ಮೈತ್ರಿ ಕಡೆಯಿಂದ ಅಧ್ಯಕ್ಷ ಸ್ಥಾನಕ್ಕೆ ಎಂ.ಎಲ್. ಅಭಿಜಿತ್, ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್.ಜೆ. ಸಂದರ್ಶ ಸ್ಪರ್ಧಿಸಿದ್ದರು. ಆದರೆ ಗುಪ್ತಮತದಾನದ ನಂತರ ಬಿ.ಜೆ.ಪಿ. ಅಭ್ಯರ್ಥಿಗಳೇ ಗೆದ್ದು ಬೀಗಿದ್ದರು.

ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ವಿಕೆ.ಶಿವೇಗೌಡ ಮಾತನಾಡಿ. ಟಿಎಪಿಸಿಎಂಎಸ್ ರೈತರ ಸಂಸ್ಥೆಯಾಗಿದೆ. ಇದನ್ನು ಬೆಳೆಸಿ ಮುನ್ನಡೆಸುವುದು ಎಲ್ಲಾ ಸದಸ್ಯರ ಕರ್ತವ್ಯವಾಗಿದೆ. ಈಗಾಗಲೆ ರೈತರಿಗೆ ಕ್ರಿಮಿನಾಶಕ. ಗೊಬ್ಬರ ಸೇರಿದಂತೆ ವಿವಿಧ ಸಲಕರಣೆಗಳನ್ನು ನೀಡುತ್ತಿದ್ದು. ಮುಂದಿನ ದಿನಗಳಲ್ಲಿ ಕೇಂದ್ರದ ಮಹತ್ತರ ಯೋಜನೆಯಾದ ಬಡವರ ಅಶಯದ ಜನೌಷಧ ಕೇಂದ್ರ ತೆರೆಯುವ ಚಿಂತನೆಯನ್ನು ನಡೆಸಲಾಗಿದೆ ಎಂದು ಹೇಳಿದರು.

ಉಪಾಧ್ಯಕ್ಷ ಉತ್ತಮ್‍ಕುಮಾರ್ ಮಾತನಾಡಿ. ನಮ್ಮ ಸಂಸ್ಥೆ ರಾಜ್ಯದಲ್ಲಿಯೇ ಉತ್ತಮ ಸಂಸ್ಥೆ ಎಂದು ಹೆಸರು ಗಳಿಸಿದೆ. ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರೈತರು ಆಗೂ ಸಂಸ್ಥೆ ಅರ್ಥಿಕವಾಗಿ ಸದೃಢಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ನಿರ್ದೇಶಕರಾದ ಎಂ.ವಿ.ಜಗದೀಶ್, ಓ.ಜಿ.ರವಿ, ಬಿ.ಎಂ.ಜಯಂತ್, ರಂಜನ್ ಅಜಿತ್ ಕುಮಾರ್, ಅಭಿಜಿತ್ ಮಗ್ಗಲಮಕ್ಕಿ, ಸಂದರ್ಶ ಹ್ಯಾರಗುಡ್ಡೆ, ಕಲ್ಲೇಶ್ ಮಾಕೋನಹಳ್ಳಿ, ಕೆ.ಪಿ. ಭಾರತಿ, ಚಂದ್ರೇಶ್ ಮಗ್ಗಲಮಕ್ಕಿ, ನಾಗೇಶ್ ಪಟ್ಟದೂರು, ಹಳಸೆ ಶಿವಣ್ಣ, ಓ.ಎಸ್.ಗೋಪಾಲಗೌಡ, ಜಿ.ಕೆ. ದಿವಾಕರ್ ಗೌಡ, ಹಾಲೂರು ರವಿ ಮತ್ತಿತರರಿದ್ದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಮತಗಳಿಕೆ ವಿವರ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ