October 5, 2024

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಇಲ್ಲಿ ಬಿ.ಜೆ.ಪಿ. ನಾಯಕ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಐದನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುವ ಇರಾದೆಯಲ್ಲಿ ಕಣಕ್ಕಿಳಿದಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ನಾಲ್ಕು ಅವಧಿಯಿಂದ ಬಿ.ಜೆ.ಪಿ.ಯ ಸಿ.ಟಿ. ರವಿಯವರು ಶಾಸಕರಾಗಿದ್ದಾರೆ. 2004ರಿಂದಲೂ ಸತತವಾಗಿ ಅವರು ಕ್ಷೇತ್ರದಲ್ಲಿ ತಮ್ಮ ಪಾರಮ್ಯ ಮೆರೆದಿದ್ದಾರೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಬಹುತೇಕ ಒಳ್ಳೆಯ ಅಂತರದಿಂದಲೇ ಗೆಲುವು ಪಡೆದಿದ್ದ ಸಿ.ಟಿ.ರವಿಯವರು ಈ ಬಾರಿ ಹಿಂದಿನ ಅವಧಿಗಳಿಗಿಂತ ಹೆಚ್ಚು ಒತ್ತಡದಲ್ಲಿ ಚುನಾವಣೆ ಎದುರಿಸಬೇಕಾಗಿದೆ.

ಸಿ.ಟಿ.ರವಿಯವರ ಒಡನಾಡಿಯಾಗಿದ್ದ ಹೆಚ್.ಡಿ. ತಮ್ಮಯ್ಯ ಈಗ ಬಿ.ಜೆ.ಪಿ. ತೊರೆದು ಕಾಂಗ್ರೇಸ್ ಅಭ್ಯರ್ಥಿಯಾಗಿದ್ದಾರೆ. ವೀರಶೈವ ಸಮುದಾಯದ ತಮ್ಮಯ್ಯ ದೊಡ್ಡ ಮಟ್ಟದಲ್ಲಿ ಆ ಸಮುದಾಯ ಮತಬ್ಯಾಂಕ್ ಒಡೆದರೆ ಬಿ.ಜೆ.ಪಿ.ಯ ಸಾಂಪ್ರದಾಯಿಕ ಮತಗಳಿಗೆ ದಕ್ಕೆಯಾಗಬಹುದೇ ಎಂಬುದು ಇಲ್ಲಿ ಬಿ.ಜೆ.ಪಿ.ಗೆ ಕೊಂಚ ಆತಂಕ ತಂದಿದೆ. ಆದರೆ ಸಿ.ಟಿ. ರವಿಯವರು ಕ್ಷೇತ್ರದಲ್ಲಿ ತಮ್ಮ ಪ್ರಭಾವ ವನ್ನು ತಳಮಟ್ಟದಲ್ಲಿ ಗಟ್ಟಿಮಾಡಿಕೊಂಡಿದ್ದಾರೆ. ಮತದಾರರನ್ನು ವೈಯುಕ್ತಿಕವಾಗಿ ಹೆಸರೇಳಿ ಗುರುತಿಸುವಷ್ಟು ಕ್ಷೇತ್ರದ ಪರಿಚಯ ಹೊಂದಿದ್ದಾರೆ. ತನ್ನದೇ ಆದ ಕಾರ್ಯಕರ್ತರ ಪಡೆಯನ್ನು ಗಟ್ಟಿಯಾಗಿ ಸಂಘಟಿಸಿದ್ದು ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ವ್ಯವಸ್ಥಿತ ಕಾರ್ಯತಂತ್ರವನ್ನು ಹೊಂದಿದ್ದಾರೆ.

ಕ್ಷೇತ್ರದಲ್ಲಿ ವೀರಶೈವರು ಹಿಂದಿನಿಂದಲೂ ದೊಡ್ಡ ಮಟ್ಟದಲ್ಲಿ ಬಿ.ಜೆ.ಪಿಯನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಆ ಮತಗಳಿಗೆ ದಕ್ಕೆಯಾಗದೇ ಇದ್ದಲ್ಲಿ ಮತ್ತು ಬಿ.ಜೆ.ಪಿ.ಯನ್ನು ಸಾಂಪ್ರದಾಯಿಕವಾಗಿ ಬೆಂಬಲಿಸಿಕೊಂಡು ಬಂದ ಪಕ್ಷದ ಮತದಾರರ ನಿಷ್ಠೆಯಲ್ಲಿ ಬದಲಾವಣೆ ಆಗದಿದ್ದಲ್ಲಿ ಈ ಸಾರಿಯೂ ಇಲ್ಲಿ ಸಿ.ಟಿ. ರವಿ ಹಾದಿ ಸುಗಮವಾಗಬಹುದು. ಜಾತಿ ಲೆಕ್ಕಾಚಾರದಲ್ಲಿ ಏರುಪೇರು ಆದಲ್ಲಿ, ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಆಂತರಿಕವಾಗಿ ಕೆಲಸ ಮಾಡಿದಲ್ಲಿ ಬಿ.ಜೆ.ಪಿ. ಹೆಚ್ಚಿನ ಒತ್ತಡವನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಬಹುದು.

ಕಾಂಗ್ರೇಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿ ಅನೇಕರು ಅರ್ಜಿ ಸಲ್ಲಿಸಿದ್ದರು. ಆದರೆ ಪಕ್ಷಕ್ಕೆ ಇತ್ತೀಚೆಗೆ ವಲಸೆ ಬಂದ ತಮ್ಮಯ್ಯನವರಿಗೆ ಟಿಕೆಟ್ ನೀಡಿರುವುದು ಪಕ್ಷದ ಕೆಲ ಮುಖಂಡರಿಗೆ ಅಸಮದಾನ ತಂದಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು ಕಾಂಗ್ರೇಸ್‍ಗೆ ದೊಡ್ಡ ಶಕ್ತಿಯಾಗಿದ್ದಾರೆ.

ಇಲ್ಲಿ ಜೆಡಿಎಸ್‍ನಿಂದ ಅಭ್ಯರ್ಥಿಯಾಗಿರುವ ತಿಮ್ಮಾಶೆಟ್ಟಿ ಎರಡು ವರ್ಷಗಳಿಂದ ತಾನು ಅಭ್ಯರ್ಥಿಯೆಂದು ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇ ಗೌಡರು ನೇರವಾಗಿ ಕಾಂಗ್ರೇಸ್ ಪರವಾಗಿ ಮತಹಾಕಲು ಕಾರ್ಯಕರ್ತರಿಗೆ ಹೇಳಿರು ವುದು ಪಕ್ಷದಲ್ಲಿರುವ ಗೊಂದಲಕ್ಕೆ ಕನ್ನಡಿ ಹಿಡಿದಿದೆ. ಆದರೂ ಜೆ.ಡಿ.ಎಸ್. ಅಭ್ಯರ್ಥಿ ಇಲ್ಲಿ ಸಾಕಷ್ಟು ಮತಗಳನ್ನು ಸೆಳೆಯುವ ಸಾಮಥ್ರ್ಯ ಹೊಂದಿದ್ದಾರೆ.

ಒಟ್ಟು ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಸಿ.ಟಿ. ರವಿಯವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಸತತ ನಾಲ್ಕು ಬಾರಿ ಶಾಸಕರಾಗಿರುವುದರಿಂದ ಜನರಲ್ಲಿ ಆಂತರಿಕವಾಗಿ ಬದಲಾವಣೆಯ ಮನೋಭಾವನೆ ಮೂಡಿದ್ದರೆ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ.

ಕಾಂಗ್ರೇಸ್ ಪಕ್ಷದ ತೀವ್ರ ಪೈಪೋಟಿಯ ನಡುವೆಯೂ ಸಿ.ಟಿ.ರವಿಯವರ ಚುನಾವಣಾ ತಂತ್ರಗಾರಿಕೆ ಮತ್ತು ಜನಪ್ರಿಯತೆ ಅವರನ್ನು ಕ್ಷೇತ್ರದಲ್ಲಿ ಈ ಬಾರಿಯೂ ಗೆಲ್ಲುವ ಫೆವರೇಟ್ ಅಭ್ಯರ್ಥಿಯನ್ನಾಗಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ