October 5, 2024

ಚುನಾವಣಾ ಆಯೋಗದ ಅಧಿಸೂಚನೆಯಂತೆ ಹಿರಿಯ ನಾಗರೀಕರು, ವಿಕಲ ಚೇತನ ಹಾಗೂ ಕೋವಿಡ್ ಸೋಂಕಿತ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಸಾಧ್ಯವಿಲ್ಲವೆಂಬ ಕಾರಣ ಅವರ ನಿವಾಸದಲ್ಲಿಯೇ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಚ್.ಡಿ.ರಾಜೇಶ್ ತಿಳಿಸಿದ್ದಾರೆ.

ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ 3737 ಮಂದಿ ಹಿರಿಯ ನಾಗರೀಕರು ಹಾಗೂ 1415 ವಿಕಲಚೇತನರನ್ನು ಗುರುತಿಸಲಾಗಿದ್ದು, ಒಟ್ಟು 5152 ಮಂದಿ ಮತದಾರರಿಗೆ ಏಪ್ರಿಲ್ 2ರಿಂದ 17ರವರೆಗೆ ನಮೂನೆ 12-ಡಿ ಅರ್ಜಿಯನ್ನು ಇಲಾಖೆ ಸಿಬ್ಬಂದಿ ಮೂಲಕ ವಿತರಿಸಲಾಗಿತ್ತು. ಅದರಂತೆ 176 ಹಿರಿಯ ನಾಗರೀಕರು ಹಾಗೂ 31 ಮಂದಿ ವಿಶೇಷ ಚೇತನರು ತಮ್ಮ ನಿವಾಸದಲ್ಲಿಯೇ ಮತ ಚಲಾಯಿಸುವುದಾಗಿ ಅರ್ಜಿಗೆ ಸಹಿ ಮಾಡಿ ಹಿಂತಿರುಗಿಸಿದ್ದಾರೆ.

ಸದರಿ ಮತದಾರರಿಗೆ ಏಪ್ರಿಲ್ 29ರಿಂದ ಮೇ1ರವರೆಗೆ ಅಂಚೆ ಮತಪತ್ರ ವಿವರಿಸಿ ಮತದಾನ ನಡೆಸಲು ಚುನಾವಣಾ ತಂಡ ತಮ್ಮ ನಿವಾಸಕ್ಕೆ ಬರುತ್ತದೆ. ಒಂದು ವೇಳೆ ಮತದಾರರು ತಮ್ಮ ನಿವಾಸದಲ್ಲಿ ಹಾಜರಿಲ್ಲದೇ, ಅಂಚೆ ಮತದಾನ ಮಾಡಲು ಸಾಧ್ಯವಾಗದಿದ್ದರೆ ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಅವಕಾಶ ಇರುವುದಿಲ್ಲ. ಹಾಗಾಗಿ ಅಂಚೆ ಮತ ಪತ್ರ ಕೋರಿರುವ ಮತದಾರರು ಚುನಾವಣಾ ತಂಡ ಬರುವ ದಿನಗಳಲ್ಲಿ ತಮ್ಮ ವಿಳಾಸದಲ್ಲಿಯೇ ಹಾಜರಿರಬೇಕೆಂದು ತಿಳಿಸಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ