October 5, 2024

ಬೇರೆ ಪಕ್ಷದಿಂದ ಹಾರಿದವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಟಕೇಟ್ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೊರಟಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೂರಿದರು.

ಅವರು ಗುರುವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಏರ್ಪಡಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಪರ ಮತಯಾಚಿಸಿ ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಹಳ್ಳಿಹಕ್ಕಿ ವಿಶ್ವನಾಥ್  ಅವರನ್ನು ಜೆಡಿಎಸ್‍ಗೆ ಕರೆತಂದು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರು. ಆದರೆ ಅವರು ಕೆಲವೇ ದಿನದಲ್ಲಿ ಬುದ್ದಿ ತೋರಿಸಿದ್ದು ಮರೆತಿದ್ದಾರೆ. ಅದೇ ರೀತಿಯಲ್ಲಿ ಎಂ.ಪಿ.ಕುಮಾರಸ್ವಾಮಿ ಕೂಡ ಕೆಲವೇ ದಿನದಲ್ಲಿ ತಮ್ಮ ಬುದ್ದಿ ತೋರಿಸಲಿದ್ದಾರೆ. ಎಂಪಿಕೆ ಅವರು ಧರ್ಮಸ್ಥಳದಲ್ಲಿ ತಾನು ಬಿಜೆಪಿ ಬಿಟ್ಟು ಹೋಗುವುದಿಲ್ಲವೆಂದು ಪ್ರಮಾಣ ಮಾಡಿದ್ದರೂ ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದಾರೆ. ದೇವರಿಗೆ ದೋಖಾ ಮಾಡಿದ ಅವರು, ಇನ್ನು ಜೆಡಿಎಸ್‍ಗೆ ದೋಖಾ ಮಾಡದೇ ಇರುವರೇ? ಬಿಜೆಪಿ ಅವರಿಗೆ ನೀಡಿದ ಸ್ಥಾನ, ಮಾನದ ಋಣ ತೀರಿಸಲು 3 ಜನ್ಮ ಎತ್ತಿದರೂ ಸಾಧ್ಯವಿಲ್ಲ. ಎಂಪಿಕೆಯ ಕಳ್ಳಾಟ ಜನರಿಗೆ ಗೊತ್ತಿದೆ ಎಂದು  ಟೀಕೆ ಮಾಡಿದ ಅವರು, ಜಾತಿ ಗೆಲ್ಲಬಾರದು, ನೀತಿ ಗೆಲ್ಲಬೇಕು, ಹಿಂದುತ್ವ, ರಾಷ್ಟ್ರ ಉಳಿಯಬೇಕೆಂದರೆ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಎಂ.ಪಿ.ಕುಮಾರಸ್ವಾಮಿ ಅವರ ಪಕ್ಷ ವಿರೋಧಿ ಚಟುವಟಿಕೆ, ಕಾರ್ಯಕರ್ತರ ಕಡೆಗಣನೆಯಿಂದಾಗಿ ಕೇಂದ್ರ ನಡೆಸಿದ ಚುನಾವಣೆ ಸಮೀಕ್ಷೆಯಿಂದ ಅವರಿಗೆ ಟಿಕೇಟ್ ಕೈ ತಪ್ಪಿದೆ ಹೊರತು ಯಾವ ಕೈವಾಡವೂ ಇಲ್ಲ. ಎಂಪಿಕೆ ಅನುಕಂಪ ಗಿಟ್ಟಿಸಿಕೊಳ್ಳಲು ತಾನೊಬ್ಬ ದಲಿತವೆಂಬ ಕಾರಣಕ್ಕೆ ಸವಾರಿ ಮಾಡುತ್ತಿದ್ದಾರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿ ದಲಿತರು ಬಿಟ್ಟರೆ ಬೇರೆ ಯಾರಿಗಾದರೂ ಟಿಕೇಟ್ ನೀಡಲು ಸಾಧ್ಯವಿಲ್ಲವೆಂಬದು ಎಲ್ಲರಿಗೂ ತಿಳಿದಿದೆ. ಬಣಕಲ್ ಕ್ಷೇತ್ರದಲ್ಲಿ ಶಾಮಣ್ಣ ಜಿ.ಪಂ. ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಲು ಪ್ರಯತ್ನಿಸಿದರು.  ಚುನಾವಣೆಗೆ ವಕೀಲ ಸಿದ್ದಯ್ಯ ಹಾಗೂ ದೀಪಕ್ ದೊಡ್ಡಯ್ಯ ನಿಂತಾಗ ಅವರೆಲ್ಲಿ ಬೆಳೆದುಬಿಡುತ್ತಾರೋ ಎಂಬ ಕಾರಣಕ್ಕೆ ಎಂಪಿಕೆ ಅವರನ್ನು ಸೋಲಿಸಲು ಕಾರಣರಾಗಿದ್ದರು. ಹಾಗಾದರೆ ದಲಿತ ವಿರೋಧಿ ಎಂದು ಯಾರನ್ನು ಕರೆಯಬೇಕು? ಎಂಪಿಕೆ ಅವರು ಕಾರ್ಯಕರ್ತರ ಶಕ್ತಿ ತಿಳಿಯದೇ ಎಲ್ಲಾ ಚುನಾವಣೆ ತನ್ನಿಂದಲೇ ಗೆದ್ದಿರುವುದೆಂದು ಮೂರ್ಖರಂತೆ ಮಾತನಾಡುತ್ತಿದ್ದಾರೆ. ಅವರನ್ನು ಹೆಗಲ ಮೇಲೆ ಕೂರಿಸಿದ್ದರಿಂದ ಇಷ್ಟೆಲ್ಲಾ ಆವಾಂತರಕ್ಕೆ ಕಾರಣವಾಗಿದೆ. ಈಗ ಕೆಳಗಿಳಿಸಿದ್ದೇವೆ. ಇನ್ನು ಸರಿ ಸಮಾನವಾಗಿ ನಿಲ್ಲಲೂ ಅವರಿಂದ ಸಾಧ್ಯವಿಲ್ಲ ಎಂದು ಹೇಳಿದರು.

ಅಭ್ಯರ್ಥಿ ದೀಪಕ್ ದೊಡ್ಡಯ್ಯ ಮಾತನಾಡಿ, ತಾನು ಗೆದ್ದರೆ ಶಾಸಕನಾಗಿ ಕೆಲಸ ಮಾಡುವುದಿಲ್ಲ. ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರು, ನಾಯಕರು, ಕ್ಷೇತ್ರದ ಜನತೆಗೆ ನೋವಾಗದಂತೆ 24 ಗಂಟೆ ಸೇವೆ ಮಾಡುತ್ತೇನೆ. ಇದಕ್ಕೆ ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಬಿಜೆಪಿ ಕಚೇರಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಿದರು.

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರು ಚುನಾವಣಾಧಿಕಾರಿ ಕಚೇರಿಗೆ ತೆರಳಿ 2 ನೇ ನಾಮಪತ್ರ ಸಲ್ಲಿಸಿದರು. ತದ ನಂತರ ಸಾವಿರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶಿಸಿದರು.

ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯ ಮಿಥಿಲೇಶ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಮುಖಂಡರಾದ ಹಳಸೆ ಶಿವಣ್ಣ, ಕೆಂಜಿಗೆ ಕೇಶವ್, ಶೇಷಗಿರಿ ಕಳಸ, ದಿನೇಶ್ ಆಲ್ದೂರು, ದೇವರಾಜುಶೆಟ್ಟಿ, ಪ್ರೇಮ್‍ಕುಮಾರ್, ಬಿ.ಎನ್.ಜಯಂತ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ