October 5, 2024

ಇವತ್ತು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಯವರು ದಿಢೀರ್ ಎಂದು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದರು. ಅವರು ಆಸ್ಪತ್ರೆಗೆ ದಾಖಲಾಗಿರುವ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗತೊಡಗಿದಾಗ ರಾಜ್ಯದಾದ್ಯಂತ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಚಿಕ್ಕಮಗಳೂರಿನಲ್ಲಿ ಅವರ ಆಪ್ತರು, ಪಕ್ಷದ ಕಾರ್ಯಕರ್ತರು ಆಸ್ಪತ್ರೆಯ ಬಳಿ ತಂಡೋಪತಂಡವಾಗಿ ಬಂದು ಸೇರತೊಡಗಿದರು.

ಇವತ್ತು ಚಿಕ್ಕಮಗಳೂರಿನಲ್ಲಿ ನಿಗದಿಯಾಗಿದ್ದ ವೀರಶೈವ ಸಮಾವೇಶದಲ್ಲಿ ಭಾಗವಹಿಸಬೇಕಾಗಿದ್ದ ರವಿಯವರು ದಿಢೀರ್ ಎಂದು ಆಸ್ಪತ್ರೆಗೆ ಸೇರಬೇಕಾಯಿತು.

ಹೌದು, ಅವರಿಗೆ ಇದ್ದಕ್ಕಿದಂತೆ ಹೊಟ್ಟೆನೋವು ಪ್ರಾರಂಭವಾಗಿದ್ದು, ವೈದ್ಯರನ್ನು ಕಾಣಲು ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಸಿ.ಟಿ.ರವಿಯವರನ್ನು ಪರೀಕ್ಷೆ ಮಾಡಿದ ವೈದ್ಯರು ಅವರ ಹೊಟ್ಟೆನೋವಿಗೆ ಕಿಡ್ನಿಯಲ್ಲಿ ಕಲ್ಲಿರುವುದು(ಕಿಡ್ನಿ ಸ್ಟೋನ್) ಕಾರಣವೆಂದು ತಿಳಿಸಿದ್ದಾರೆ. ಒಂದು ದಿನ ವಿಶ್ರಾಂತಿಗೆ ಸೂಚನೆ ನೀಡಿದ್ದಾರೆ.

ಇಂದು ಸಿ.ಟಿ.ರವಿಯವರ ಪರವಾಗಿ ಅವರ ಪತ್ನಿ ಶ್ರೀಮತಿ ಪಲ್ಲವಿ ರವಿಯವರು ವೀರಶೈವ ಸಮಾವೇಶದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪಲ್ಲವಿಯವರು ಸಿ.ಟಿ.ರವಿಯವರನ್ನು ಐದು ನಿಮಿಷದ ಮಟ್ಟಿಗಾದರೂ ಸಮಾವೇಶಕ್ಕೆ ಕಳುಹಿಸಿಕೊಡಿ ಎಂದು ವೈದ್ಯರಲ್ಲಿ ಮನವಿ ಮಾಡಿದೆ. ಆದರೆ ಅವರಿಗೆ ಇನ್ಸ್ ಪೆಕ್ಸನ್ ಆಗುತ್ತೆ ಬೇಡವೇ ಬೇಡ ಅಂತ ವೈದ್ಯರು ಹೇಳಿದ್ರು. ಅವರಿಗೆ ಕಿಡ್ನಿ ಸ್ಟೋನ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ, ಅದರಿಂದಾಗಿ ಅವರಿಗೆ ಇಂದು ಬೆಳಿಗ್ಗೆ ಇದ್ದಕ್ಕಿದಂತೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ ಎಂದು ಪಲ್ಲವಿ ಹೇಳಿದ್ದಾರೆ.

ವೀರಶೈವ ಲಿಂಗಾಯತ ಸಮಾಜ ಒಂದು ಸಮಾಜ ಅಲ್ಲ, ಅದು ಶಕ್ತಿ. ದೇಶದ ಉದ್ಧಗಲಕ್ಕೂ ತನ್ನದೇ ಆದ ಛಾಪು ಮೂಡಿಸಿರೋ ಸಹೃದಯಿ ಸಮುದಾಯ. ಸಿ.ಟಿ. ರವಿ ಅವರು ಬರಲು ಆಗಿಲ್ಲ, ಅದಕ್ಕೆ ಕ್ಷಮೆ ಕೇಳ್ತೀನಿ. ನಿಮ್ಮ ಪ್ರೀತಿ ಮಗನಿಗೆ ಮತ ಹಾಕಿ ಉನ್ನತ ಸ್ಥಾನಕ್ಕೇರಿಸಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಪಲ್ಲವಿ ರವಿ ಹೇಳಿದ್ದಾರೆ.

ಸಿ.ಟಿ. ರವಿ ಅವರ ದಿನಚರಿ ಬೆಳಗ್ಗೆ 4.30ಕ್ಕೆ ಆರಂಭವಾಗುತ್ತದೆ. ಇನ್ನು, ರಾತ್ರಿ 12ಕ್ಕೆ ಅವರು ಮಲಗುತ್ತಾರೆ. ನಾನು ಅವರನ್ನ ನೋಡೋದೇ ತಿಂಗಳಿಗೆ 2 – 3 ಬಾರಿ ಅಷ್ಟೇ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ಪತ್ನಿ ಪಲ್ಲವಿ ರವಿ ಹೇಳಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ