October 5, 2024

ವಂಚನೆ ಆರೋಪದ ಪ್ರಕರಣದಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್ ಮತ್ತು ಇಂಡಿಯನ್ ಮನಿ ಡಾಟ್ ಕಾಮ್ ಸಂಸ್ಥೆಗಳ ಮಾಲೀಕ ಸಿ.ಎಸ್. ಸುಧೀರ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಹಣಕಾಸು ವಿಷಯದಲ್ಲಿ ಸಲಹೆ ನೀಡುವ ಉದ್ದೇಶವಿಟ್ಟುಕೊಂಡು ಸ್ಥಾಪಿಸಿದ್ದ ಇಂಡಿಯನ್ ಮನಿ ಡಾಟ್ ಕಾಂ ಮತ್ತು ಫ್ರೀಡಂ ಆಪ್ ಮೂಲಕ ಹಲವು ಸಾಧಕರ ಹೆಸರು ಮತ್ತು ಅವರಿಂದ ತರಬೇತಿ ಕೊಡಿಸುವುದಾಗಿ ಸಾವಿರಾರು ಜನರಿಂದ ಹಣವನ್ನು ಪಡೆದು ವಂಚಿಸಿರುವ ಪ್ರಕರಣದಲ್ಲಿ ಸಂಸ್ಥೆಯ ಸಿ.ಇ.ಓ. ಸುಧೀರ್ ಮತ್ತು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ರಘು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಲಯವು ಇವರಿಗೆ ಏಪ್ರಿಲ್ 25ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ. ಪೊಲೀಸರು ಸುಧೀರ್ ಮತ್ತು ರಘು ಇವರುಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಂಪನಿಯಲ್ಲಿ ಆಮೀಷಕ್ಕೆ ಒಳಗಾಗಿ ಕೆಲ ತಿಂಗಳು ಕೆಲಸ ಮಾಡಿ ವಂಚನೆಗೀಡಾಗಿದ್ದ ಯುವಕ ಯುವತಿಯರು ಬನಶಂಕರಿ ಠಾಣೆಯಲ್ಲಿ ಏಪ್ರಿಲ್ 4 ರಂದು ದೂರು ನೀಡಿದ್ದರು. ಬಂಧನ ಬೀತಿಯಲ್ಲಿದ್ದ ಸುಧೀರ್ ಹಾಗೂ ಇತರರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಇದಾದ ಬಳಿಕ ಕಂಪನಿಯ ಕೆಲ ಉದ್ಯೋಗಿಗಳು ಪ್ರತ್ಯೇಕ ದೂರು ನೀಡಿದ್ದರು. ಆ ದೂರಿನ ಅನ್ವಯ ಪ್ರತ್ಯೇಕ ಪ್ರಕರಣ ದಾಖಲಿಸಿ ಸುಧೀರ್ ಮತ್ತು ರಘು ಅವರನ್ನು ಬಂಧಿಸಲಾಗಿದೆ.

ಕೆಲಸ ಮಾಡುವ ಉದ್ಯೋಗಿಗಳಿಗೆ ಮಾತ್ರವಲ್ಲ ಜನರಿಗೂ ಕಂಪನಿಯಿಂದ ವಂಚನೆಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಂಚನೆ ಮಾಡುವ ಉದ್ದೇಶದಿಂದಲೇ ಫ್ರೀಡಂ ಆಪ್ ಅಭಿವೃದ್ಧಿಪಡಿಸಿ ಆ ಮೂಲಕ ಜನರನ್ನು ಟಿ.ವಿ. ಹಾಗೂ ಸಾಮಾಜಿಕ ಮಾಧ್ಯಮಗಳ ಜಾಹಿರಾತು ಮೂಲಕ ಸಂಪರ್ಕಿಸಿ ಮೋಸ ಮಾಡುತ್ತಿರುವುದು ಕಂಡುಬಂದಿದೆ.

ಐ.ಪಿ.ಎಸ್. ಅಧಿಕಾರಿ ರವಿ ಚನ್ನಣ್ಣನವರ್ ಸೇರಿದಂತೆ ಅನೇಕ ಸಾಧಕರ, ಪ್ರಗತಿಪರ ರೈತರ ಸಾಧನೆಗಳನ್ನು ತೋರಿಸಿ ನೀವು ಅವರಂತಾಗಬೇಕೇ ? ಅವರಂತೆ ಹಣ ಗಳಿಸಬೇಕೇ ? ಹಾಗಾದರೇ ಫ್ರೀಡಂ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಪ್ರಚಾರ ನಡೆಸುವುದು. ಫ್ರೀಡಂ ಆಪ್ ಡೌನ್ ಲೋಡ್ ಮಾಡಿಕೊಂಡವರಿಗೆ ಕರೆ ಮಾಡಿ ನೀವು ಪ್ರೀಮಿಯರ್ ಮೆಂಬರ್ ಆಗಿ ಎಂದು ಅವರಿಂದ ಹಣವನ್ನು ಪಡೆಯುವುದು ನಂತರ ಯಾವುದೇ ಸ್ಪಂದನೆ ಮಾಡದಿರುವುದು ಹೀಗೆ ವ್ಯವಸ್ಥಿತವಾಗಿ ಕಂಪನಿ ಜನರಿಗೆ ಮತ್ತು ಉದ್ಯೋಗಿಗಳಿಗೆ ವಂಚನೆ ಮಾಡುತ್ತಿತ್ತು ಎಂದು ತಿಳಿದುಬಂದಿದೆ.

 

ಕಂಪನಿಯ ವ್ಯವಸ್ಥಾಪಕರೇ ಕಂಪನಿ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದು, 30ಕ್ಕೂ ಹೆಚ್ಚು ಕೋರ್ಸ್‍ಗಳಿಗಾಗಿ ಜನರನ್ನು ಕರೆತರುವಂತೆ ನಮಗೆ ಹೇಳಿದ್ದರು. ನಾವೇ ಜನರನ್ನು ಹುಡುಕಿ ಕೋರ್ಸ್ ಗೆ ಸೇರಿಸಿದ್ದೆವು. ಅವರಿಂದ ಕಂಪನಿಯವರು ಲಕ್ಷಾಂತರ ಹಣ ಕಟ್ಟಿಸಿಕೊಂಡಿದ್ದರು. ಆದರೆ ಜನರಿಗೆ ಯಾವುದೇ ತರಬೇತಿ ನೀಡದೇ ವಂಚಿಸಿದ್ದಾರೆ ಎಂದಿದ್ದಾರೆ.

ತೀರ್ಥಹಳ್ಳಿ ಮೂಲದ ಸಿ.ಎಸ್.ಸುಧೀರ್ ಈಗ್ಗೆ ಕೆಲ ವರ್ಷಗಳ ಹಿಂದೆ ಸ್ನೇಹಿತರ ಜೊತೆ ಸೇರಿ ಇಂಡಿಯನ್ ಮನಿ ಡಾಟ್ ಕಾಂ ಸ್ಥಾಪಿಸಿ, ಇತ್ತೀಚೆಗೆ ಫ್ರೀಡಂ ಆಪ್ ಅನ್ನು ಪ್ರಾರಂಭಿಸಿ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಪಡೆದಿದ್ದ ಮತ್ತು ಜನರಿಂದ ಕೋಟ್ಯಾಂತರ ಹಣ ಸಂಗ್ರಹಿಸಿದ್ದ ಎನ್ನಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ